ಕರ್ನಾಟಕ

karnataka

ETV Bharat / state

ನನ್ನ ಬಗ್ಗೆ ಮಾತನಾಡಿ ಸುಮಲತಾ ಮೈಲೇಜ್ ತೆಗೆದುಕೊಳ್ಳುತ್ತಿದ್ದಾರೆ.. ಸಂಸದೆಗೆ ಶಾಸಕ ಪುಟ್ಟರಾಜು ತಿರುಗೇಟು - ದೇವೇಗೌಡರು

ಅಂಬರೀಶ್ ಅಣ್ಣನ ಅಭಿಮಾನಕ್ಕೆ ಸುಮಲತಾ ಅವರು ಚುನಾವಣೆಯಲ್ಲಿ ಗೆದ್ದಿದ್ದು - ಮಂಡ್ಯದ ಜನ ಸಾಕಷ್ಟು ರಾಜಕಾರಣಿಗಳಿಗೆ ಬುದ್ಧಿ ಕಲಿಸಿದ್ದಾರೆ- ಸುಮಲತಾ ಅವರು ಸದಾ ಸುದ್ದಿಯಲ್ಲಿರಬೇಕೆಂದು ಜೆಡಿಎಸ್‌ ಬಗ್ಗೆ ಮಾತನಾಡುತ್ತಾರೆ ಎಂದ ಶಾಸಕ ಪುಟ್ಟರಾಜು

mla-puttaraku-strikes-against-sumalatha-ambarish
ನನ್ನ ಬಗ್ಗೆ ಮಾತನಾಡಿ ಸುಮಲತಾ ಮೈಲೇಜ್ ತೆಗೆದುಕೊಳ್ಳುತ್ತಿದ್ದಾರೆ, ಸಂಸದೆಗೆ ಶಾಸಕ ಪುಟ್ಟರಾಜು ತಿರುಗೇಟುನನ್ನ ಬಗ್ಗೆ ಮಾತನಾಡಿ ಸುಮಲತಾ ಮೈಲೇಜ್ ತೆಗೆದುಕೊಳ್ಳುತ್ತಿದ್ದಾರೆ, ಸಂಸದೆಗೆ ಶಾಸಕ ಪುಟ್ಟರಾಜು ತಿರುಗೇಟು

By

Published : Jan 29, 2023, 3:52 PM IST

Updated : Jan 29, 2023, 4:36 PM IST

ನನ್ನ ಬಗ್ಗೆ ಮಾತನಾಡಿ ಸುಮಲತಾ ಮೈಲೇಜ್ ತೆಗೆದುಕೊಳ್ಳುತ್ತಿದ್ದಾರೆ.. ಸಂಸದೆಗೆ ಶಾಸಕ ಪುಟ್ಟರಾಜು ತಿರುಗೇಟು

ಮಂಡ್ಯ: ನನ್ನ ಬಗ್ಗೆ ಮಾತನಾಡಿ ಸುಮಲತಾ ಅವರು ಮೈಲೇಜ್ ತೆಗೆದುಕೊಳ್ಳುತ್ತಿದ್ದಾರೆ. ಈ ಹಿಂದೆ ಮಂಡ್ಯದ ಗಂಡು, ರೆಬಬಲ್​ ಸ್ಟಾರ್​ ಅಂಬರೀಶ್ ಅಣ್ಣನ ಅಭಿಮಾನಕ್ಕೆ ಅವರ ಪತ್ನಿ ಸುಮಲತಾ ಅವರು ಚುನಾವಣೆಯಲ್ಲಿ ಗೆದ್ದಿದ್ದರು. ಸುಮಲತಾ ಹೆಸರನ್ನು ನೋಡಿ ಜನರು ಗೆಲ್ಲಿಸಿಲ್ಲ ಎಂದು ಶಾಸಕ ಪುಟ್ಟರಾಜು ಅವರು ಸಂಸದೆ ಸುಮಲತಾ ಅವರಿಗೆ ತಿರುಗೇಟು ನೀಡಿದ್ದಾರೆ.

ಜಿಲ್ಲೆಯ ಪಾಂಡವಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು‌, ಮಂಡ್ಯ ಜಿಲ್ಲೆಯ ಜನರು ಸಾಕಷ್ಟು ರಾಜಕಾರಣಿಗಳಿಗೆ ಬುದ್ಧಿ ಕಲಿಸಿದ್ದಾರೆ. ಸೋಲು ಗೆಲುವನ್ನು ಎಲ್ಲರಿಗೂ ಜನ ತೋರಿಸಿದ್ದಾರೆ. ದಿಶಾ ಸಭೆಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ವಿಚಾರಿಸೋದು ಅಷ್ಟೇ ಇವರ ಕೆಲಸ. ಆದರೆ ಸಭೆಯಲ್ಲಿ‌ ಬೇರೆ ವಿಚಾರಗಳನ್ನು ಮಾತಾಡುತ್ತಿದ್ದಾರೆ. ನಿರ್ದಿಷ್ಟವಾಗಿ ಏನಾದರು ಸಮಸ್ಯೆ ಇದ್ದರೆ ಹೆಸರು‌ ಹೇಳಿ ಮಾತಾಡಬೇಕು. ಸುಮ್ಮನೇ ಆರೋಪ ಮಾಡುವುದಲ್ಲ. ಅದಕ್ಕೆ ನಾನು ತಾಕತ್ ಇದ್ದರೆ ಹೆಸರು ಬಹಿರಂಗ ಪಡಿಸಬೇಕು ಎಂದು ಹೇಳಿದ್ದೇನೆ. ಈಗಲೂ ಕೇಳುತ್ತೇನೆ ತಾಕತ್ ಇದ್ದರೆ ಹೆಸರು ಬಹಿರಂಗ ಪಡಿಸಬೇಕು. ಗಣಿ ಇಲಾಖೆಗೆ ಹೋಗಿ ನೋಡುವ ಕೆಲಸ ನನ್ನದಲ್ಲ. ಆರೋಪ ಮಾಡಿರೋದು ನೀವು, ನೀವೇ ಹೋಗಿ ನೋಡಿ ಎಂದು ಮಂಡ್ಯ ಸಂಸದರ ವಿರುದ್ಧ ಕಿಡಿಕಾರಿದರು.

ಮಂಡ್ಯ ಜಿಲ್ಲೆಯ ಜನ‌ ಅಂಬರೀಶ್ ಅಣ್ಣನಿಗೂ ಬುದ್ಧಿ ಕಲಿಸಿದ್ದರು, ನನ್ನನ್ನು 2 ಸಲ ಸೋಲಿಸಿದ್ದರು. ಜೆಡಿಎಸ್‌ ಪಕ್ಷವನ್ನು ದೂರಿದರೆ ಲೀಡರ್​ ಅಂತಾ ಹೇಳುತ್ತಾರೆ ಎಂದು ಸುಮಲತಾ ಅಂದುಕೊಂಡಿದ್ದಾರೆ. ಮಂಡ್ಯ ಜನ‌ ಅಂಬರೀಶ್ ಅಣ್ಣನ ಅಭಿಮಾನಕ್ಕೆ ಅವರನ್ನು ಗೆಲ್ಲಿಸಿದ್ದಾರೆಯೇ ಹೊರತು ಸುಮಲತಾ ಹೆಸರಿಗಾಗಿ‌ ಗೆಲ್ಲಿಸಿಲ್ಲ ಎಂದು ಹೇಳಿದರು.

ದೇವೇಗೌಡರು, ಕುಮಾರಣ್ಣನ ಗುಣಗಾನ ಮಾಡಿದರೆ ಸಾಕು ಮೈಲೇಜ್ ಬರುತ್ತದೆ: ಮುಂದಿನ ಚುನಾವಣೆಯಲ್ಲಿ ಇವರು ಮಾಡಿರುವ ಕೆಲಸಕ್ಕೆ ಜನರೇ ಸರ್ಟಿಫಿಕೇಟ್ ಕೊಡುತ್ತಾರೆ. ಅವರ ಬಗ್ಗೆ ನಾನು ಮಾತಾಡಿದರೆ ನಮಗೆ ಮೈಲೇಜ್ ಬರಲ್ಲ. ನಮ್ಮ ಬಗ್ಗೆ ಮಾತನಾಡಿ ಸುಮಲತಾ ಅವರು ಮೈಲೇಜ್ ತೆಗೆದುಕೊಳ್ಳುತ್ತಿದ್ದಾರೆ. ನಮಗೆ ಮಂಡ್ಯದಲ್ಲಿ ದೇವೇಗೌಡರು, ಕುಮಾರಣ್ಣನ ಗುಣಗಾನ ಮಾಡಿದರೆ ಸಾಕು, ಮೈಲೇಜ್ ಬರುತ್ತದೆ. ಇವರ ಬಗ್ಗೆ ಮಾತನಾಡಿದರೆ, ಮೈಲೇಜ್ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದರು.

ಸದಾ ಸುದ್ದಿಯಲ್ಲಿ ಇರಬೇಕೆಂದು ಜೆಡಿಎಸ್‌ ಬಗ್ಗೆ ಮಾತನಾಡುತ್ತಾರೆ:ಬೇರೆ ಪಕ್ಷಗಳನ್ನು ಬಿಟ್ಟು ಜೆಡಿಎಸ್ ಪಕ್ಷದ ಬಗ್ಗೆ ಮಾತಾನಾಡಿದರೆ ತಮ್ಮನ್ನು ಲೀಡರ್ ಮಾಡುತ್ತಾರೆ ಎಂದುಕೊಂಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು 40 ಪರ್ಸೆಂಟ್​ ಸರ್ಕಾರ ಎಂದು ಹೇಳುತ್ತಾರೆ, ಇದರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ಬರೀ ಇಲ್ಲಸಲ್ಲದ ನಾಟಕಗಳನ್ನು ಮಾಡಿಕೊಂಡು ಮಾತನಾಡಿದರೆ ಪ್ರಯೋಜನವಿಲ್ಲ. ಸದಾ ಸುದ್ದಿಯಲ್ಲಿ ಇರಬೇಕು ಎಂದು ಜೆಡಿಎಸ್‌ ಬಗ್ಗೆ ಸುಮಲತಾ ಮಾತಾನಾಡುತ್ತಾರೆ ಎಂದು ಶಾಸಕ ಪುಟ್ಟರಾಜು ಟೀಕಿಸಿದರು.

ಇದಕ್ಕೆ ಕಾಲ ಸನಿಹಕ್ಕೆ ಬಂದಿದೆ, ಮುಂದಿನ ಚುನಾವಣೆಯಲ್ಲಿ ಜನರೇ ಉತ್ತರ ನೀಡುತ್ತಾರೆ. ಮಂಡ್ಯ ಜಿಲ್ಲೆಯ ಜನ ದೇವೇಗೌಡರ ಕುಟುಂಬದ ಮೇಲೆ‌ ಇಟ್ಟಿರುವ ಪ್ರೀತಿ ಅವರಿಗೆ ಏನು ಗೊತ್ತು. ಸೆರೆಗೊಡ್ಡಿ ಮತ ಕೇಳಿದ್ದರು ಎಂದು ಜಿಲ್ಲೆಯ ಜನ ಅನುಕಂಪದಲ್ಲಿ ಅಂಬರೀಶ್ ಅಣ್ಣನ ಮುಖ ನೋಡಿ ಚುನಾವಣೆಯಲ್ಲಿ ಮತ ನೀಡಿದ್ದರು. ಇವರು ಮಾಡಿರುವ ಕೆಲಸವನ್ನು ಜನ ತೋರಿಸುತ್ತಾರೆ ಎಂದು ಜೆಡಿಎಸ್​ ಶಾಸಕ ಕಿಡಿಕಾರಿದರು.

ಇದನ್ನೂ ಓದಿ:’ತಾಕತ್ ಇದ್ದರೆ ಶಾಸಕ ಪುಟ್ಟರಾಜು ನುಡಿದಂತೆ ನಡೆಯಲಿ‘: ಸಂಸದೆ ಸುಮಲತಾ ಅಂಬರೀಶ್​ ಸವಾಲು​

Last Updated : Jan 29, 2023, 4:36 PM IST

ABOUT THE AUTHOR

...view details