ಕರ್ನಾಟಕ

karnataka

ETV Bharat / state

ಮಂಡ್ಯದಲ್ಲಿ ಅಲ್ಪಸಂಖ್ಯಾತರ ಸಮಾವೇಶ.. ಮುಸ್ಲಿಂ ಮತ ಸೆಳೆಯಲು ಶಾಸಕ ಪುಟ್ಟರಾಜು ಪ್ಲಾನ್ - ಪಾಂಡವಪುರದಲ್ಲಿ ಅಲ್ಪಸಂಖ್ಯಾತರ ಸಮಾವೇಶ

ಹೆಚ್​ ಡಿ ಕುಮಾರಸ್ವಾಮಿ ಅವರು ಸಿಎಂ ಆಗುವುದು ಖಚಿತ-ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಭವಿಷ್ಯ - ಅಲ್ಪಸಂಖ್ಯಾತರ ಮತ ಸೆಳೆಯಲು ಶಾಸಕ ಪುಟ್ಟರಾಜು ಪ್ಲಾನ್​

ಜೆಡಿಎಸ್ ಅಲ್ಪಸಂಖ್ಯಾತರ ಸಮಾವೇಶ
ಜೆಡಿಎಸ್ ಅಲ್ಪಸಂಖ್ಯಾತರ ಸಮಾವೇಶ

By

Published : Feb 26, 2023, 9:44 PM IST

ಜೆಡಿಎಸ್ ರಾಜ್ಯ ಮಹಿಳಾ ಅಧ್ಯಕ್ಷೆ ನಜ್ಮಾ ನಜೀರ್

ಮಂಡ್ಯ : ಜೆಡಿಎಸ್ ಅಲ್ಪಸಂಖ್ಯಾತರ ಸಮಾವೇಶ ಆಯೋಜಿಸಿ ಅಲ್ಪಸಂಖ್ಯಾತರ ಮತಗಳ ಸೆಳೆಯಲು ಶಾಸಕ ಸಿ ಎಸ್ ಪುಟ್ಟರಾಜು ಮುಂದಾಗಿದ್ದಾರೆ. ಮಂಡ್ಯದ ಪಾಂಡವಪುರದ ಹರಳಹಳ್ಳಿಯಲ್ಲಿ ಅಲ್ಪಸಂಖ್ಯಾತರ ಸಮಾವೇಶದ ಮೂಲಕ ಜೆಡಿಎಸ್ ಶಕ್ತಿ ಪ್ರದರ್ಶನ ನಡೆಸಿದ್ರು. ಸಮಾವೇಶವನ್ನ ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಅವರು ಉದ್ಘಾಟಿಸಿದ್ರು.

ಜೆಡಿಎಸ್ ರಾಷ್ಟ್ರೀಯ ಉಪಾಧ್ಯಕ್ಷ ಜಪ್ರುಲ್ಲಾ ಖಾನ್, ನಜ್ಮಾ ನಜೀರ್ ಸೇರಿದಂತೆ ಹಲವು ಮುಸ್ಲಿಂ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಈ ವೇಳೆ ಜೆಡಿಎಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ನಜ್ಮಾ ನಜೀರ್ ಮಾತನಾಡಿ, ನಿಜವಾದ ಬಿಜೆಪಿಯ ಬಿ ಟೀಂ ಕಾಂಗ್ರೆಸ್, ಹಿಜಾಬ್ ಬಗ್ಗೆ ಧ್ವನಿ ಎತ್ತಿದ್ದು ನಮ್ಮ ಕುಮಾರಣ್ಣ. ಹಿಜಾಬ್ ಬಗ್ಗೆ ಯಾರೂ ಮಾತನಾಡಬೇಡಿ ಅಂತ ಡಿಕೆಶಿ ಹೇಳಿದ್ದಾರೆ. ಕುಮಾರಣ್ಣನನ್ನು ಮುಸ್ಲಿಂ ವಿರೋಧಿ ಅಂತಾರೆ. ಬಿಜೆಪಿಯ ಬೀ ಟೀಮ್ ಜೆಡಿಎಸ್ ಅಂತಾರೆ.

ನಿಜವಾದ ಬಿಜೆಪಿಯ ಬಿ ಟೀಮ್ ಕಾಂಗ್ರೆಸ್. ಕಾಂಗ್ರೆಸ್ ಹಿಜಾಬ್ ಬಗ್ಗೆ ಧ್ವನಿ ಎತ್ತಿಲ್ಲ. ಮುಸ್ಲಿಂ ಪರ ಯಾವ ಧ್ವನಿಯನ್ನ ಕಾಂಗ್ರೆಸ್ ಎತ್ತಿಲ್ಲ. ಮುಸ್ಲಿಂ ಪರವಾಗಿ ನಿಂತ ಏಕೈಕ ನಾಯಕ ಕುಮಾರಣ್ಣ. ಎಲ್ಲಾ ಜನರನ್ನ ಸಮಾನವಾಗಿ ಕಂಡಿದ್ದು ಕುಮಾರಣ್ಣ. ಹಲವು ಯೋಜನೆ ತಂದರು ಕುಮಾರಣ್ಣ. ಕಾಂಗ್ರೆಸ್-ಬಿಜೆಪಿ ತರ ಜಾತಿ ಧರ್ಮ ನೋಡಿಲ್ಲ ಕುಮಾರಣ್ಣ. ಎಲ್ಲರ ಪರ ಇರುವ ನಾಯಕ ನಮ್ಮ ಕುಮಾರಣ್ಣ ಎಂದು ನಜ್ಮಾ ನಜೀರ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ರು‌.

ಬಿಜೆಪಿಯವರು ದಾರಿ ತಪ್ಪಿಸುತ್ತಾರೆ..ಸಿ ಎಂ ಇಬ್ರಾಹಿಂ ಮಾತನಾಡಿ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗೋದು ಖಚಿತ. ಮದರಸ ಅಂದ್ರೆ ಸ್ಕೂಲ್, ಸ್ಕೂಲ್ ಅಂದ್ರೆ ಮದರಸ. ಬಿಜೆಪಿಯವರು ಕನ್ಫ್ಯೂಷನ್ ಮಾಡ್ತಾರೆ. ಗುರುಕುಲ ಅಂದ್ರೇನು? ಅದೇ ಮದರಸ. ಹಿಜಾಬ್ ಅಂದ್ರೆ ಶಾಲು, ಸೆರಗು. ಇಂದಿರಾಗಾಂಧಿ ಅವರು ಕೂಡ ಹಿಜಾಬ್ ಹಾಕಿದ್ರು. ಕಿತ್ತೂರುರಾಣಿ ಚೆನ್ನಮ್ಮ ಹಿಜಾಬ್ ಹಾಕಿದ್ರು. ಬಿಜೆಪಿಯವರು ದಾರಿ ತಪ್ಪಿಸುತ್ತಾರೆ. ಬಿಜೆಪಿಯವರು ಯಾವುದಾದರು ಒಳ್ಳೆಯ ಕೆಲಸ ಮಾಡಿದ್ದಾರಾ? ಅವರು ಮಾಡಿದ್ದು ಕೆಲಸ ಬಾಂಬೆಯಲ್ಲಿ ಹೋಗಿ ಸಿಡಿ ತಂದ್ರು. ಹೈಕೋರ್ಟಿನಲ್ಲಿ ಸ್ಟೇ ತಂದ್ರು‌. ಅಚ್ಛೇ ದಿನ್ ಆಯಂಗೆ ಅಂತಾರೆ.

ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ

ದೇವೇಗೌಡ್ರು ಸರ್ಕಾರ ತೆಗೆದಿದ್ದು ಸೀತಾರಾಂ. ಯಾಕೆ ತೆಗೆದರು ಇನ್ನೂ ಹೇಳಿಲ್ಲ. ದೇವೇಗೌಡ್ರು ಭ್ರಷ್ಟಾಚಾರ ಮಾಡಿದ್ರ? ರಾಹುಲ್ ಗಾಂಧಿ ನಿಮ್ಮ ಚಿಕ್ಕಪ್ಪ ಯಾಕೆ ತೆಗೆದ. ಕುಮಾರಸ್ವಾಮಿನೇ ಗಂಡು ಆಗಬೇಕು ಅಂದ್ರಿ. ಮೇಕಪ್ ಮಾಡಿ ಬಂದು ನಿಂತ್ರಲ್ಲ ಮುಂಡೆವ. ಬಾಂಬೆಗೆ ಕಳುಹಿಸಿ ಕುಮಾರಣ್ಣನ ಸರ್ಕಾರ ತೆಗಿದ್ರಲ್ಲ ಸಿದ್ದರಾಮಯ್ಯ. ಹೇಗೆ ಮನಸು ಬಂತು ನಿಮಗೆ. ಯಾರಿಗಾದ್ರು ಕುಮಾರಣ್ಣ ಅನ್ಯಾಯ ಮಾಡಿದ್ರಾ? ಸಿದ್ದರಾಮಯ್ಯ, ಶಿವಕುಮಾರ್ ಉತ್ತರ ಕೊಡಿ ಎಂದು ಇಬ್ರಾಹಿಂ ಒತ್ತಾಯಿಸಿದರು.

ಎಲ್ಲಾ ಕಡೆ 100% ಜೆಡಿಎಸ್ ಬರುತ್ತೆ..ಬಿಜೆಪಿ ಬಿ ಟೀಂ ಅಂತಾರೆ, ಬಿಜೆಪಿ ಸೋಲಿಸಲು ರೈತರ ಮಕ್ಕಳಿಂದ ಮಾತ್ರ ಸಾಧ್ಯ. ಆ ಶಕ್ತಿ ಇವತ್ತು ಜೆಡಿಎಸ್​ಗೆ ಇದೆ. ಕಾಂಗ್ರೆಸ್ ನಿಂದ ಯಾವುದೇ ಕಾರಣಕ್ಕೂ ಸೋಲಿಸಲು ಆಗಲ್ಲ. 128 ರಿಂದ 78 ಕ್ಕೆ ಬಂದಿದ್ದೀರಿ. ಉತ್ತರ ಕೊಡೊ ಸಿದ್ದರಾಮಯ್ಯ ಬಾದಾಮಿ ಬಿಟ್ಟು ಕ್ಷೇತ್ರ ಹುಡುಕಾಟದಲ್ಲಿದ್ದಿರಿ. ನೀವು ಶೂರರ? ಇನ್ನೂ ಎರಡು ತಿಂಗಳು ಇದೆ. ಹಾಸನ, ಕೋಲಾರ, ಚಾಮರಾಜನಗರ, ರಾಮನಗರ, ಎಲ್ಲಾ ಕಡೆ 100% ಜೆಡಿಎಸ್ ಬರುತ್ತೆ ಎಂದು ಸಿದ್ದರಾಮಯ್ಯ ವಿರುದ್ಧ ಇಬ್ರಾಹಿಂ ವಾಗ್ದಾಳಿ ನಡೆಸಿದ್ರು.

ಒಟ್ಟಾರೆ ಪಾಂಡವಪುರದಲ್ಲಿ ಅಲ್ಪಸಂಖ್ಯಾತರ ಸಮಾವೇಶ ಆಯೋಜಿಸಿ ಮತ ಸೆಳೆಯುವ ಪ್ರಯತ್ನವನ್ನ ಶಾಸಕ ಸಿಎಸ್ ಪುಟ್ಟರಾಜು ಮಾಡಿದ್ದಾರೆ. ಇದು ಎಷ್ಟರ ಮಟ್ಟಿಗೆ ವರ್ಕ್ ಆಗುತ್ತೆ ಕಾದುನೋಡಬೇಕಿದೆ.

ಇದನ್ನೂ ಓದಿ :ಯುಪಿ ಸಿಎಂ​ಗೆ ಮದುವೆ ಆಗಿದ್ದರೆ ದಿನನಿತ್ಯದ ವಸ್ತುಗಳ ಬೆಲೆ ಏರಿಕೆ ಆಗ್ತಿರಲಿಲ್ಲ: ಸಿಎಂ‌ ಇಬ್ರಾಹಿಂ

ABOUT THE AUTHOR

...view details