ಮಂಡ್ಯ: ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಶಾಸಕ ನಾರಾಯಣಗೌಡರಿಗೆ ಅಭಿಮಾನಿಗಳು ಹಾಗೂ ಗ್ರಾಮಸ್ಥರು ಸೇರಿಕೊಂಡು ಹೊಸ ಬಿರುದು ನೀಡಿದ್ದಾರೆ.
ಶಾಸಕ ನಾರಾಯಣಗೌಡರಿಗೆ ಅಭಿಮಾನಿಗಳಿಂದ ಹೊಸ ಬಿರುದು - ಬಿಜೆಪಿ ಶಾಸಕ ನಾರಾಯಣಗೌಡ
ಬಿಜೆಪಿಯ ನೂತನ ಶಾಸಕ ನಾರಾಯಣಗೌಡರಿಗೆ ಅಭಿಮಾನಿಗಳು ಹಾಗೂ ಗ್ರಾಮಸ್ಥರು ಹ್ಯಾಟ್ರಿಕ್ ಹಿರೋ ಎಂಬ ಬಿರುದು ನೀಡಿದ್ದಾರೆ.
ಬಿಜೆಪಿ ಶಾಸಕ ನಾರಾಯಣಗೌಡ
ಶಾಸಕರ ಮನೆಗೆ ಆಗಮಿಸಿ ಗ್ರಾಮದ ಪರವಾಗಿ ಅಭಿನಂದನೆ ಸಲ್ಲಿಸಿದ ಕೆ ಆರ್ ಪೇಟೆ ತಾಲೂಕಿನ ಲಕ್ಷ್ಮೀಪುರ ಗ್ರಾಮಸ್ಥರು, ಹ್ಯಾಟ್ರಿಕ್ ಹಿರೋ ಎಂಬ ಬಿರುದನ್ನು ನೀಡಿದ್ದಾರೆ.
ಬಿಜೆಪಿಯ ನೂತನ ಶಾಸಕ ನಾರಾಯಣಗೌಡ ಕಳೆದ ಎರಡು ಚುನಾವಣೆಯಲ್ಲಿ ಜೆಡಿಎಸ್ನಿಂದ ಗೆಲುವು ಸಾಧಿಸಿದ್ದರು. ಮತ್ತೆ ಬಿಜೆಪಿಯಿಂದ ಸತತವಾಗಿ ಗೆಲುವು ಸಾಧಿಸಿ ದಾಖಲೆ ಬರೆದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಈ ಬಿರುದು ನೀಡಿದ್ದಾರೆ.