ಕರ್ನಾಟಕ

karnataka

ETV Bharat / state

ಪೊಲೀಸ್, ಅರಣ್ಯ ಇಲಾಖೆ ಅವ್ಯವಸ್ಥೆಯ ಆಗರ : ಶಾಸಕ ಎಂ ಶ್ರೀನಿವಾಸ್ ಆರೋಪ - MLA M Srinivas allegations against police and forest dept

ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇನೆ. ಅರಣ್ಯ ಮಂತ್ರಿ ಬಳಿ ಪ್ರಶ್ನೆ ಕೇಳುತ್ತೇನೆ. ಯಾರು ಸ್ಪಂದಿಸದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಶಾಸಕ ಶ್ರೀನಿವಾಸ್ ಎಚ್ಚರಿಕೆ ನೀಡಿದ್ದಾರೆ..

MLA M Srinivas
ಶಾಸಕ ಎಂ. ಶ್ರೀನಿವಾಸ್ ಆರೋಪ

By

Published : Sep 15, 2021, 8:00 PM IST

ಮಂಡ್ಯ: ಪೊಲೀಸ್ ಹಾಗೂ ಅರಣ್ಯ ಇಲಾಖೆ ಅವ್ಯವಸ್ಥೆಯ ಆಗರವಾಗಿದೆ ಎಂದು ಶಾಸಕ ಎಂ ಶ್ರೀನಿವಾಸ್ ಆರೋಪಿಸಿದ್ದಾರೆ. ಎಸ್​ಪಿ ಸರ್ಕಾರಿ ನಿವಾಸದಲ್ಲಿದ್ದ ಮರ ಕಡಿದ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾನೂನಿನಲ್ಲಿ ಎಲ್ಲರೂ ಒಂದೇ.. ಸಾಮಾನ್ಯ ಮನುಷ್ಯ ತಾನು ಬೆಳೆಸಿದ ಮರ ಕಡಿಯಲು ಅನುಮತಿ ಬೇಕು. ಇವರು ಯಾಕೆ ಅನುಮತಿ ಪಡೆದಿಲ್ಲವೋ ಗೊತ್ತಿಲ್ಲ. ಈ ಬಗ್ಗೆ ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪೊಲೀಸ್, ಅರಣ್ಯ ಇಲಾಖೆ ಅವ್ಯವಸ್ಥೆಯ ಆಗರ - ಶಾಸಕ ಎಂ. ಶ್ರೀನಿವಾಸ್

ಮಂಡ್ಯದಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯ ಬಹಳ ಇದೆ. ರಸ್ತೆಯಲ್ಲಿ ಒಣಗಿರುವ ಮರ ಕಡಿಯಲು ನಾನೇ ಮನವಿ ಮಾಡಿದ್ದೆ. ಆದರೆ, 6 ತಿಂಗಳಾದರೂ ಇನ್ನು ಕಡಿದಿಲ್ಲ. ಹೀಗಾಗಿ, ಮಂಡ್ಯದಲ್ಲಿ ಅರಣ್ಯ ಇಲಾಖೆಯಷ್ಟು ನಿರ್ಲಕ್ಷ್ಯ ಮತ್ತೊಂದಿಲ್ಲ ಎಂದು ದೂರಿದರು.

ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇನೆ. ಅರಣ್ಯ ಮಂತ್ರಿ ಬಳಿ ಪ್ರಶ್ನೆ ಕೇಳುತ್ತೇನೆ. ಯಾರು ಸ್ಪಂದಿಸದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಶಾಸಕ ಶ್ರೀನಿವಾಸ್ ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details