ಮಂಡ್ಯ: ಶಿಕ್ಷಣ ಸಚಿವ ಸುರೇಶ್‌ಕುಮಾರ್ ಇಂದು ಶಿಕ್ಷಕರಾಗಿ ಮಕ್ಕಳ ಪರೀಕ್ಷೆ ನಡೆಸಿದರು. ಶಾಲೆಗೆ ಭೇಟಿ ನೀಡಿದ ಸಚಿವರು, ಮಕ್ಕಳ ಗಣಿತ ಜ್ಞಾನದ ಪರೀಕ್ಷೆ ನಡೆಸಿದರು.
ಶಿಕ್ಷಕರಾಗಿ ಮಕ್ಕಳ ಗಣಿತ ಜ್ಞಾನ ಪರೀಕ್ಷೆ ಮಾಡಿದ ಸಚಿವ ಸುರೇಶ್ ಕುಮಾರ್ - ಸಚಿವ ಸುರೇಶ್ ಕುಮಾರ್ ಮಂಡ್ಯ ಭೇಟಿ ಸುದ್ದಿ
ಮಳವಳ್ಳಿ ತಾಲೂಕಿನ ಕೆಂಪಯ್ಯನದೊಡ್ಡಿ ಗ್ರಾಮಕ್ಕೆ ಭೇಟಿ ನೀಡಿ, ಪಡಸಾಲೆಯಲ್ಲಿ ಶಿಕ್ಷಕರು ಪಾಠ ಮಾಡುತ್ತಿರುವುದಕ್ಕೆ ಗೌರವ ಸಲ್ಲಿಸಿದರು..
ಮಳವಳ್ಳಿ ತಾಲೂಕಿನ ಕೆಂಪಯ್ಯನದೊಡ್ಡಿ ಗ್ರಾಮಕ್ಕೆ ಭೇಟಿ ನೀಡಿ, ಪಡಸಾಲೆಯಲ್ಲಿ ಶಿಕ್ಷಕರು ಪಾಠ ಮಾಡುತ್ತಿರುವುದಕ್ಕೆ ಗೌರವ ಸಲ್ಲಿಸಿದರು. ಗ್ರಾಮದ ಮುಖಂಡರೊಬ್ಬರು ತಮ್ಮ ಮನೆಯ ಪಡಸಾಲೆಯನ್ನು ಮಕ್ಕಳ ಪಾಠ ಪ್ರವಚನಕ್ಕೆ ಬಿಟ್ಟು ಕೊಟ್ಟಿದ್ದಾರೆ. ಅಲ್ಲಿ ಮಕ್ಕಳಿಗೆ ಶಿಕ್ಷಕರು ಪಾಠ ಮಾಡುತ್ತಿದ್ದು, ವಿಷಯ ತಿಳಿದ ಸಚಿವರು ಗ್ರಾಮಕ್ಕೆ ಭೇಟಿ ನೀಡಿ ಶಿಕ್ಷಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನು ಮಕ್ಕಳ ಗಣಿತ ಜ್ಞಾನ ಪರೀಕ್ಷೆ ನಡೆಸಿದರು. ಮಕ್ಕಳಿಗೆ ಮಗ್ಗಿ ಹೇಳಿಸಿ ಕೆಲ ಪ್ರಶ್ನೆಗಳನ್ನು ಕೇಳುವ ಮೂಲಕ ಶಿಕ್ಷಕರಾದರು. ಸಚಿವರಿಗೆ ಸ್ಥಳೀಯ ಶಾಸಕ ಅನ್ನದಾನಿ ಸೇರಿ ಹಲವು ಮುಖಂಡರು ಸಾಥ್ ನೀಡಿದರು.