ಮಂಡ್ಯ:ಸಚಿವ ಆರ್.ಅಶೋಕ್ ಅವರು ಮುಸ್ಲಿಂ ಸಮುದಾಯದವರ ಜೊತೆ ಸಭೆ ನಡೆಸಿ ಪೌರತ್ವ (ತಿದ್ದುಪಡಿ) ಕಾಯ್ದೆ ಬಗ್ಗೆ ಮುಖಂಡರಿಗೆ ಮನವರಿಕೆ ಮಾಡಿಕೊಟ್ಟರು.
ಕಾಯ್ದೆಯಿಂದ ನಿಮಗ್ಯಾರಿಗೂ ತೊಂದರೆ ಆಗಲ್ಲ: ಮುಸ್ಲಿಂ ಮುಖಂಡರಿಗೆ ಆರ್.ಅಶೋಕ್ ಭರವಸೆ - ಪೌರತ್ವ ಕಾಯ್ದೆ ವಿವಾದ
ಪ್ರವಾಸಿ ಮಂದಿರದಲ್ಲಿ ಮಂಡ್ಯ ಜಿಲ್ಲೆಯ ಎಲ್ಲಾ ಮುಸ್ಲಿಂ ಮುಖಂಡರ ಜೊತೆ ಕಂದಾಯ ಸಚಿವ ಆರ್. ಅಶೋಕ್ ಸಭೆ ನಡೆಸಿದ್ದು, ಪೌರತ್ವ ಕಾಯ್ದೆ ಬಗ್ಗೆ ಸಭೆಯಲ್ಲಿ ಮುಖಂಡರಿಗೆ ಮನವರಿಕೆ ಮಾಡಿಕೊಟ್ಟರು.
ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲೆಯ ಎಲ್ಲಾ ಮುಸ್ಲಿಂ ಮುಖಂಡರ ಸಭೆ ಮಾಡಿ, ಕಾಯ್ದೆಯಿಂದ ನಿಮಗ್ಯಾರಿಗೂ ತೊಂದರೆ ಆಗಲ್ಲ, ಹೊಸದಾಗಿ ಬರುವವರಿಗೆ ಮಾತ್ರ ಪೌರತ್ವ ಸಿಗಲ್ಲ. ನಾವು ನಿಮ್ಮೊಡನೆ ಇದ್ದೇವೆ. ಹೀಗಾಗಿ ಆತಂಕಪಡುವ ಅವಶ್ಯಕತೆ ಇಲ್ಲ, ಪ್ರತಿಭಟನೆ ಮಾಡಬೇಡಿ ಎಂದು ಮನವಿ ಮಾಡಿದರು.
ಕಳೆದ ಶುಕ್ರವಾರವಷ್ಟೇ ಪ್ರಾರ್ಥನೆ ವೇಳೆ ಪ್ರತಿಭಟನೆ ವ್ಯಕ್ತಪಡಿಸಿ ಕಾಯ್ದೆ ವಿರುದ್ಧ ಕೆಲವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಈ ಮನವಿ ಹಿನ್ನೆಲೆ ಇಂದು ಸಚಿವ ಆರ್.ಅಶೋಕ್ ಸಭೆ ಅಲ್ಪಸಂಖ್ಯಾತ ಮುಖಂಡರ ಜೊತೆ ಸಭೆ ಮಾಡಿ ಕಾಯ್ದೆಯ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಚಿವ ಆರ್. ಅಶೋಕ್, ಕಾಯ್ದೆ ವಿಚಾರವಾಗಿ ಕಾಂಗ್ರೆಸ್ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದೆ. ಈ ಕಾಯ್ದೆಯನ್ನು ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲೇ ತಿಳಿಸಿತ್ತು ಎಂದರು.