ಮಂಡ್ಯ:ಶಾಸಕ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಕಾರ್ಯಕ್ಕೆ ಶ್ಲಾಘಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ದಳಪತಿಗಳಿಗೆ ಸಾರ್ವಜನಿಕ ವೇದಿಕೆಯಲ್ಲೇ ಟಾಂಗ್ ಕೊಟ್ಟರು.
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಸಣಬ ಗ್ರಾಮದಲ್ಲಿ ಇಂದು ಏತ ನೀರಾವರಿ ಯೋಜನೆ ಉದ್ಘಾಟನೆ ಬಳಿಕ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅನುದಾನ ಕೊಡುತ್ತಾ ಅಂತಾ ಶಾಸಕರಿಗೆ ಅನುಮಾನ ಇತ್ತು. ನಮ್ಮ ಪುಟ್ಟರಾಜಣ್ಣ ಅಭಿವೃದ್ಧಿ ಕಾರ್ಯದಲ್ಲಿ ಚಾಣಾಕ್ಷ. ಹೀಗಾಗಿ ಯಾವ ಸರ್ಕಾರವಾದರೂ ಇರಲಿ ಅನುದಾನ ತಂದು, ಅಭಿವೃದ್ಧಿ ಮಾಡೋದ್ರಲ್ಲಿ ಸದಾ ಮುಂದೆ ಇರ್ತಾರೆ ಎಂದರು.
ಸಚಿವ ಮಾಧುಸ್ವಾಮಿ ಮಾತನಾಡಿ,'ನಾವೆಲ್ಲಾ ನಾರಾಯಣ ಗೌಡರ ಋಣದಲ್ಲಿದ್ದೀವಿ' ಅದನ್ನು ತೀರಿಸುವ ಕೆಲಸ ಮಾಡಬೇಕಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ತ್ಯಾಗ ಸ್ಮರಿಸಿದರು. ಪಾಂಡವಪುರ ತಾಲೂಕು ಸಣಬ ಬಡಾವಣೆಯ ಗ್ರಾಮದ ಬಳಿ ಇರುವಂತ ಬಳಘಟ್ಟ ಏತ ನೀರಾವರಿ ಎರಡನೇ ಹಂತದ ಪಂಪ್ ಬಳಿ ನಡೆದ ಏತ ನೀರಾವರಿ ಯೋಜನೆಯಡಿ ಬಳಘಟ್ಟ ಗ್ರಾಪಂ ವ್ಯಾಪ್ತಿಯ 51 ಕರೆಗಳಿಗೆ ನೀರು ತುಂಬಿಸುವ ಹಾಗೂ ಸೂಕ್ಷ್ಮ ನೀರಾವರಿ ಕಲ್ಪಿಸುವ ಯೋಜನೆಯ ಮೊದಲ ಹಂತದ ಉದ್ಘಾಟಿಸಿದರು.
ನೀರಿನ ದುರ್ಬಳಕೆ ಮಾಡಬೇಡಿ:
ಪ್ರಪಂಚಕ್ಕೆ ನೀರು ಬಹಳ ಶ್ರೇಷ್ಠವಾದದ್ದು, ನೀರಿನ್ನು ಸಂರಕ್ಷಣೆ ಮಾಡುವುದರ ಮೂಲಕ ಗ್ರಾಮೀಣ ಜನತೆಯನ್ನು ಬೆಳೆಸಬಹುದು ಎಂದ್ರು.ನೀರನ್ನು ಮಿತವಾಗಿ ಬಳಸಿ, ನೀರಿನ ದುರ್ಬಳಕೆ ಮಾಡಬೇಡಿ, ಅವಶ್ಯಕವಾಗಿರುವಷ್ಟೇ ನೀರನ್ನು ಬಳಸಿ ಈ ನಿಟ್ಟಿನಲ್ಲಿ ನೀರಿನ ಮಿತಬಳಕೆ ಬಗ್ಗೆ ರೈತರು ಮನಗಾಣಿ ಎಂದರು.
ಸಚಿವ ಜೆ ಸಿ ಮಾಧುಸ್ವಾಮಿ ಮಾತು ಸರ್ಕಾರ ಎಲ್ಲ ರೈತರ ಬೆಳವಣಿಗೆಗೆ ಶ್ರಮಿಸುತ್ತಿದೆ:
ನೀರಿನ ಮಿತಬಳಕೆ ಮೂಲಕ ಎಲ್ಲರ ಪ್ರಗತಿ ಸಾಧ್ಯ. ನಾವು ಸಬಲರಾಗಿ ಬದುಕಬೇಕಾದರೆ ಆರ್ಥಿಕವಾಗಿ ಸಬಲರಾಗಬೇಕು ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ಎಲ್ಲ ರೈತರ ಬೆಳವಣಿಗೆಗೆ ಶ್ರಮಿಸುತ್ತಿದೆ. ಯಾವ ಕಾಲದಲ್ಲಿ, ಯಾವ ಪ್ರದೇಶದಲ್ಲಿ ಯಾವ ಬೆಳೆ ಬೆಳೆಯಬೇಕು ಎಂಬುವುದನ್ನು ಅರಿತು ರೈತರು ನೀರಿನ ಸಂರಕ್ಷಣೆ ಮಾಡಿ ಎಂದು ಹೇಳಿದರು.
ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಕೆಲಸ:
ಮುಂದಿನ ದಿನಗಳಲ್ಲಿ ಜಿಲ್ಲೆಯ ಕೆ.ಆರ್ ಪೇಟೆ ಹಾಗೂ ಇನ್ನಿತರ ತಾಲೂಕುಗಳಲ್ಲೂ ಕೆರೆ ತುಂಬಿಸುವ ಕೆಲಸವಾಗಲಿದೆ. ತಡೆಗೋಡೆ, ಇಂಗುಗುಂಡಿ ನಿರ್ಮಾಣ ಮಾಡುವುದರ ಮೂಲಕ ಅಂತರ್ಜಲವನ್ನು ಹೆಚ್ಚಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಅಲ್ಲದೇ ಸಣ್ಣ ನೀರಾವರಿ ಮೂಲಕ ಭೂಮಿಗೆ ಇಂದು ನೀರುಣಿಸುವ ಮಹತ್ತರ ಕೆಲಸವನ್ನು ನಿರ್ವಹಿಸಿದ್ದಕ್ಕೆ ಸಂತಸ ತಂದಿದೆ ಎಂದರು.
ಏತ ನೀರಾವರಿ ಯೋಜನೆ ಉದ್ಘಾಟನೆ ಅಪ್ಪಾಜಿಗೌಡರ ಮಾತಿಗೆ ನಾರಾಯಣಗೌಡರು ಗರಂ:
ಸಾರ್ವಜನಿಕ ವೇದಿಕೆಯಲ್ಲೇ ಕಾನೂನು ಸಚಿವ ಎದುರೆ ಮಂಡ್ಯ ಜಿಲ್ಲೆಯ ಜೆಡಿಎಸ್ MLCಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಜಿಲ್ಲೆಯ ಸಣಬ ಗ್ರಾಮದ ಕಾರ್ಯಕ್ರಮದಲ್ಲಿ ಏತ ನೀರಾವರಿ ಯೋಜನೆ ಉದ್ಘಾಟನೆ ನಡೆದ ಬಳಿಕ ಕುಮಾರಸ್ವಾಮಿ 8 ಸಾವಿರ ಕೋಟಿ ಅನುದಾನ ಬಗ್ಗೆ ವಿಧಾನ ಪರಿಷತ್ ಸದಸ್ಯ ಅಪ್ಪಾಜಿ ಗೌಡರ ಮಾತಿಗೆ ನಾರಾಯಣಗೌಡ ಅಪ್ಪಾಜಿಗೌಡ ಸಿಟ್ಟಾದರು.ತಮ್ಮ ಭಾಷಣದ ವೇಳೆ ನಾಗಮಂಗಲ ವಿಧಾನಸಭಾ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುವ ವಿಷಯದಲ್ಲಿ ಬಿಜೆಪಿ ಸರ್ಕಾರದಿಂದ ತಾರತಮ್ಯ ಮಾಡಿದ್ದಾರೆ ಎಂಬ MLC ಅಪ್ಪಾಜಿಗೌಡರ ಮಾತಿಗೆ ಸಚಿವ ನಾರಾಯಣ ಗೌಡ ಸಿಟ್ಟಾದರಲ್ಲದೇ ಸಾರ್ವಜನಿಕರ ವೇದಿಕೆಯಲ್ಲೇ ಅಸಮಾಧಾನ ಹೊರ ಹಾಕಿದರು.
ಈ ರೀತಿ ಸುಳ್ಳು ಹೇಳಬಾರದು. ಜಿಲ್ಲೆಯ ಎಲ್ಲಾ ತಾಲೂಕಿಗೂ ನಮ್ಮ ಸರ್ಕಾರ ಅನುದಾನ ನೀಡ್ತಿದೆ. ಅನುದಾನ ಬಿಡುಗಡೆ ವಿಚಾರದಲ್ಲಿ ತಾರತಮ್ಯ ಮಾಡ್ತಿಲ್ಲ. ಈ ರೀತಿ ಸುಳ್ಳು ಭಾಷಣ ಮಾಡೋದನ್ನ ನಿಲ್ಲಿಸಬೇಕು. ಸುಮ್ಮನೆ ಜನರನ್ನ ದಿಕ್ಕು ತಪ್ಪಿಸಬೇಡಿ. ಇಂತಹ ಹೇಳಿಕೆಗಳನ್ನ ನಾನು ಸಹಿಸಲ್ಲ ಎಂದು ಸಾರ್ವಜನಿಕವಾಗಿಯೇ ಹೇಳಿದರು.