ಕರ್ನಾಟಕ

karnataka

ETV Bharat / state

ನಮ್ಮ ಪಕ್ಷದವರೇನಾದ್ರೂ ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ್ದಾರಾ? : ಸಚಿವ ನಾರಾಯಣ್ ಗೌಡ - cm change issue

ನಮ್ಮ ಪ್ರಧಾನಿಗಳು ತುಂಬಾ ಯೋಚನೆ ಮಾಡಿ ತೀರ್ಮಾನ ತೆಗೆದುಕೊಂಡಿದ್ದಾರೆ. ನಿರ್ಲಕ್ಷ್ಯ ತೋರದೆ ದಯವಿಟ್ಟು ಸಹಕರಿಸಿ, ಕೊರೊನಾ ನಿಯಮ ಪಾಲನೆ ಮಾಡಿ..

minister-narayana-gowda-talk-about-cm-change-issue
minister-narayana-gowda-talk-about-cm-change-issue

By

Published : May 23, 2021, 6:35 PM IST

Updated : May 23, 2021, 9:46 PM IST

ಮಂಡ್ಯ: ಸಿಂ ಬದಲಾವಣೆ ಚರ್ಚೆ ಸಂಬಂಧ ಮಾತನಾಡಿದ ಸಚಿವ ನಾರಾಯಣ್ ಗೌಡ, ವಿರೋಧ ಪಕ್ಷದವರು ಮಾತನಾಡುತ್ತಾರೆ. ಆದ್ರೆ, ನಮ್ಮ ಪಕ್ಷದವರು ಮಾತನಾಡಿದ್ದಾರಾ.? ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ. ಇವೆಲ್ಲ ಬರೀ ಟೀಕೆ ಟಿಪ್ಪಣಿಗಳು. ಇವೆಲ್ಲಾ ದೊಡ್ಡವರ ಮಟ್ಟದಲ್ಲಿ ಆಗಿದೆ. ಅಲ್ಲೇ ತೀರ್ಮಾನವಾಗುತ್ತದೆ.

ಸಚಿವ ನಾರಾಯಣ್ ಗೌಡ

ಇವರೆಲ್ಲಾ ಯಾರು ಈ ವಿಚಾರ ಮಾತನಾಡುವುದಕ್ಕೆ ಎಂದು ಸಚಿವ ನಾರಾಯಣ್ ಗೌಡ, ಕಾಂಗ್ರೆಸ್​ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಲಾಕ್​ಡೌನ್​ ಸಂಬಂಧ ಮಾತನಾಡಿದ ಅವರು, ಸ್ವಲ್ಪದಿನದ ಮಟ್ಟಿಗೆ ಹೊಂದಾಣಿಕೆ ಮಾಡಿಕೊಂಡು ಮನೆಯಲ್ಲೇ ಇರಿ. ಇದರಿಂದ ಕೊರೊನಾ ಚೈನ್ ಬ್ರೇಕ್ ಮಾಡಬಹುದು.

ನಮ್ಮ ಪ್ರಧಾನಿಗಳು ತುಂಬಾ ಯೋಚನೆ ಮಾಡಿ ತೀರ್ಮಾನ ತೆಗೆದುಕೊಂಡಿದ್ದಾರೆ. ನಿರ್ಲಕ್ಷ್ಯ ತೋರದೆ ದಯವಿಟ್ಟು ಸಹಕರಿಸಿ, ಕೊರೊನಾ ನಿಯಮ ಪಾಲನೆ ಮಾಡಿ ಎಂದು ಮನವಿ ಮಾಡಿದರು.

Last Updated : May 23, 2021, 9:46 PM IST

ABOUT THE AUTHOR

...view details