ಮಂಡ್ಯ: ರಾಜ್ಯದ ಜನರು ರೆಮಿಡಿಸಿವಿರ್ಅನ್ನು ಮುಖ್ಯ ಔಷಧಿ ಅಂತಾ ತಿಳಿಯಬಾರದು ಎಂದು ಮಂಡ್ಯದಲ್ಲಿ ಸಚಿವ ಡಾ. ಕೆ.ಸಿ.ನಾರಾಯಣಗೌಡ ಹೇಳಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯವಾಗಿ ಅದು ಔಷಧಿಯಲ್ಲ. ಆದ್ರೆ ರೆಮಿಡಿಸಿವಿರ್ ಔಷಧಿ ತೆಗೆದುಕೊಂಡ್ರೆ ನಾವು ಬದುಕುತ್ತೇವೆ ಅಂತಾ ನಮ್ಮ ತಲೆಗೆ ಬಂದುಬಿಟ್ಟಿದೆ. ಆದ್ರೆ ನಿಜವಾಗಲೂ ರೆಮಿಡಿಸಿವಿರ್ ಔಷಧಿ ಮುಖ್ಯ ಅಲ್ಲ. ಇದನ್ನ ಜನರು ಆರ್ಥೈಸಿಕೊಳ್ಳಬೇಕು ಎಂದರು. ನೆಗಡಿ, ಕೆಮ್ಮು, ಜ್ವರ ಬಂದರೆ ತಕ್ಷಣವೇ ಟೆಸ್ಟ್ ಮಾಡಿಸಿಕೊಳ್ಳಿ. ಕೊರೊನಾ ನಿಯಂತ್ರಣ ಮಾಡಲು ಸಹಕರಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.