ಮಂಡ್ಯ:ರಾಜಕಾರಣ ಅವರು ಮಾಡಲೇ ಬೇಕು. ಅವರಿಗೆ ಮನೆಲೆ ಕುಳಿತುಕೊಳ್ಳಲು ಆಗಲ್ಲ, ನಾವು ಅವರನ್ನು ಕೂಡಿ ಹಾಕುವುದಕ್ಕೂ ಆಗಲ್ಲ ಎಂದು ಪೌರಾಡಳಿತ ಸಚಿವ ಕೆ.ಸಿ.ನಾರಾಯಣ ಗೌಡ ಅವರುನ ಮಾಜಿ ಸಿಎಂಗಳಿಬ್ಬರ ಟಾಕ್ ವಾರ್ ವಿಚಾರಕ್ಕೆ ಪ್ರತಿಕ್ರಿಯಿಸಿದರು.
ಪೌರಾಡಳಿತ ಸಚಿವ ಕೆ.ಸಿ.ನಾರಾಯಣ ಗೌಡ ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜಕಾರಣಿಗಳು ವಚನ ನುಡಿಲಿಲ್ಲ ಅಂದ್ರೆ ಅವರನ್ನು ಯಾರು ನೋಡುತ್ತಾರೆ. ರಾಜಕಾರಣ ಮಾಡಬೇಕೆಂದರೆ ಮಾಧ್ಯಮಗಳ ಮುಂದೆ ಹೇಳಿಕೆಗಳನ್ನು ನೀಡಬೇಕಾಗುತ್ತದೆ. ಇಲ್ಲ ಅಂದ್ರೆ ಅವರನ್ನು ಗುರುತಿಸುವುದಿಲ್ಲ. ಈ ಬಗ್ಗೆ ನಮ್ಮ ಬಿಜೆಪಿ ಸರ್ಕಾರಕ್ಕೆ ಚಿಂತೆ ಇಲ್ಲ ಎಂದರು.
ನಮ್ಮಲ್ಲಿ ಯಾವುದೇ ಒಡಕಿಲ್ಲ:
ನಮ್ಮಲ್ಲಿ ಯಾವುದೇ ಒಡಕಿಲ್ಲ. ಮಾಜಿ ಸಿಎಂ ಯಡಿಯೂರಪ್ಪ ಚುನಾವಣೆ ಜವಾಬ್ದಾರಿ ತೆಗೆದುಕೊಂಡು ದುಡಿಯುತ್ತಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ 40 ಸೀಟುಗಳನ್ನು ಗೆಲ್ಲಿಸುತ್ತೀನಿ ಎಂದು ಯಾರಾದರೂ ಹೇಳಿದ್ದಾರಾ ಎಂದು ಪ್ರಶ್ನೆ ಮಾಡಿದರಲ್ಲದೆ ಅದು ನಮ್ಮ ಯಡಿಯೂರಪ್ಪನವರ ಶಕ್ತಿ ಎಂದರು.
ಮತ್ತೆ ನಮ್ಮದೇ ಸರ್ಕಾರ ಬರುತ್ತೆ:
ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಉತ್ತಮ ಸ್ಥಾನಕ್ಕೆ ಹೋಗುತ್ತದೆ. ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಪ್ರತಿಪಕ್ಷಗಳ ಭ್ರಮೆಗಳು ಅಲ್ಲಲ್ಲೇ ಉಳಿದುಕೊಳ್ಳುತ್ತವೆ ಎಂದು ಸಚಿವ ನಾರಾಯಣ ಗೌಡ ಭವಿಷ್ಯ ನುಡಿದರು.
RSS ಮಾಡ್ತಿರೋ ತಪ್ಪೇನು..?
ಕಾಂಗ್ರೆಸ್ನವರು ಆರ್ಎಸ್ಎಸ್ನಲ್ಲಿದ್ದಾರೆ. ಜೆಡಿಎಸ್ನವರು ಆರ್ಎಸ್ಎಸ್ನಿಂದ ಮುಂದೆ ಬಂದಿದ್ದಾರೆ. ಒಂದೊಳ್ಳೆ ವಾತಾವರಣವನ್ನು ತರುವಾಗ ಎರಡು ಪಕ್ಷದವರಿಗೆ ಆರ್ಎಸ್ಎಸ್ ಬೇಕು. ಆರ್ಎಸ್ಎಸ್ ದೇಶ ಪ್ರೇಮ ಬೆಳೆಸುವ, ಉತ್ತಮವಾದ ವಾತಾವರಣ ಹುಟ್ಟಾಕುವ ಸಂಘಟನೆಯಾಗಿದೆ. ಇದನ್ನು ಸಿದ್ದರಾಮಯ್ಯನವರು ಗೌರವಿಸಬೇಕು ಎಂದರು. ನೀವು ಟೀಕಿಸುತ್ತಿರುವುದಕ್ಕೆ ಆರ್ಎಸ್ಎಸ್ ಮಾಡ್ತೀರೋ ತಪ್ಪಾದರೂ ಏನು ಎಂದು ಪ್ರಶ್ನಿಸಿದರು.
ಸರ್ಕಾರಿ ಸ್ವಾಮ್ಯದಲ್ಲೇ ಮೈಶುಗರ್ ಆರಂಭ:
ಮೈಶುಗರ್ ಕಾರ್ಖಾನೆ ಬಗ್ಗೆ ಸಿಎಂ ಹಾಗೂ ಅಧಿಕಾರಿಗಳು ಗೌರವ ಇಟ್ಟು ಉತ್ತಮವಾಗಿ ಪ್ರಾರಂಭಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಕಬ್ಬು ಅರೆಯಲು ಸಿದ್ಧರಾಗಿದ್ದಾರೆ. ಮುಂದಿನ ವರ್ಷ ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ನೀಡುತ್ತಾರೆ ಎಂದು ಸಚಿವರು ಹೇಳಿದ್ರು.
ಜನರಲ್ಲಿ ಮನವಿ ಮಾಡಿದ ಸಚಿವರು:
ಮಂಡ್ಯ ಜಿಲ್ಲೆಯ ರಾಜಕಾರಣ ಬಿಟ್ಟು, ಅಭಿವೃದ್ಧಿಗಾಗಿ ಪ್ರತಿಯೊಬ್ಬರು ಸಹಕರಿಸಬೇಕು. ಮೈಶುಗರ್ ವಿಚಾರದಲ್ಲಿ ರಾಜಕಾರಣ ಬೇಡ. ಎಲ್ಲರೂ ಸೇರಿ ರೈತರಿಗೆ ಶಕ್ತಿ ತುಂಬುವ ಕೆಲಸ ಮಾಡೋಣ. ವಿಶ್ವಕ್ಕೆ ಅನ್ನ ಹಾಕುತ್ತಿರುವ ರೈತರಿಗೆ ನಾವು ಗೌರವ ಕೊಡೋಣಾ ಎಂದ ಅವರು, ನೋವಿನಿಂದ ಎಷ್ಟೋ ರೈತರು ಇದುವರೆಗೂ ಸುಧಾರಣೆಯಾಗಿಲ್ಲ. ಅಂತಹ ಕುಟುಂಬಕ್ಕೆ ಶಕ್ತಿ ತುಂಬುವ ಕೆಲಸ ಮಾಡೋಣಾ ಎಂದು ಮನವಿ ಮಾಡಿದರು.
ಇದನ್ನೂ ಓದಿ: ಇಸ್ಲಾಂನಲ್ಲಿ ವಿಚ್ಛೇದನ ನೀಡಿದಾಕ್ಷಣ ಜೀವನಾಂಶ ಕೊಡುವುದರಿಂದ ತಪ್ಪಿಸಿಕೊಳ್ಳಲಾಗದು: ಹೈಕೋರ್ಟ್