ಕರ್ನಾಟಕ

karnataka

ETV Bharat / state

1 ರಿಂದ 10ನೇ ತರಗತಿ ಮಕ್ಕಳಿಗೆ ವಾರಕ್ಕೆರಡು ಬಾರಿ ಮೊಟ್ಟೆ ವಿತರಣೆ: ಯೋಜನೆಗೆ ಚಾಲನೆ ನೀಡಿದ ಸಚಿವ ಮಧು ಬಂಗಾರಪ್ಪ - 1 ಕೋಟಿ 20 ಲಕ್ಷ ಮೊಟ್ಟೆ ವಿತರಣೆ

ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 60 ಲಕ್ಷ ಮಕ್ಕಳಿಗೆ ವಾರದಲ್ಲಿ 1 ಕೋಟಿ 20 ಲಕ್ಷ ಮೊಟ್ಟೆ ವಿತರಣೆ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ.

Egg distribution program for children is launched
ಮೊಟ್ಟೆ ವಿತರಣೆ ಕಾರ್ಯಕ್ರಮವನ್ನು ಸಚಿವ ಎನ್. ಚಲುವರಾಯಸ್ವಾಮಿ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು..

By

Published : Aug 18, 2023, 10:11 PM IST

ಸಚಿವ ಚಲುವರಾಯಸ್ವಾಮಿ ಹೇಳಿಕೆ

ಮಂಡ್ಯ:ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣಾ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು. ಮಂಡ್ಯದ ಹೊಸಹಳ್ಳಿಯ ಸರ್ಕಾರಿ ಶಾಲೆಯಲ್ಲಿ ನಡೆದ ಮಕ್ಕಳಿಗೆ ಮೊಟ್ಟೆ ವಿತರಣಾ ಕಾರ್ಯಕ್ರಮವನ್ನು ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಜಂಟಿಯಾಗಿ ಉದ್ಘಾಟಿಸಿದರು.

ಈವರೆಗೆ 1ರಿಂದ 8 ನೇ ತರಗತಿ ಮಕ್ಕಳಿಗೆ ವಾರಕ್ಕೊಮ್ಮೆ ಮೊಟ್ಟೆ ವಿತರಿಸಲಾಗುತ್ತಿತ್ತು. ಆದರೆ 9 ಮತ್ತು 10ನೇ ತರಗತಿ ಮಕ್ಕಳು ಮೊಟ್ಟೆ ವಿತರಣೆಯಿಂದ ವಂಚಿತರಾಗಿದ್ದರು. ಇದನ್ನರಿತ ರಾಜ್ಯ ಸರ್ಕಾರ 1 ರಿಂದ 10ನೇ ತರಗತಿ ಮಕ್ಕಳಿಗೂ ವಾರಕ್ಕೆರಡು ಬಾರಿ ಮೊಟ್ಟೆ ನೀಡಲು ತೀರ್ಮಾನಿಸಿ ಇಂದು ಚಾಲನೆ ನೀಡಿತು.

ಬಳಿಕ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ನಮ್ಮ ಸರ್ಕಾರ ಪ್ರಣಾಳಿಕೆಯಲ್ಲಿ ಹೇಳಿದ ರೀತಿ ಎಲ್ಲಾ ಗ್ಯಾರಂಟಿಗಳನ್ನು ನೀಡಿದೆ. ವಿರೋಧ ಪಕ್ಷದವರಿಗೆ ಇದನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಈ ಗ್ಯಾರಂಟಿಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಸಚಿವ ಮಧು ಬಂಗಾರಪ್ಪ ಮಾತನಾಡಿ, ದೊಡ್ಡ ದೊಡ್ಡ ಕಟ್ಟಡ ಕಟ್ಟೋದು, ರಸ್ತೆ, ರೈಲ್ವೆ, ಏರ್ ಪೋರ್ಟ್ ನಿರ್ಮಾಣ ಮಾಡಿ ಅಭಿವೃದ್ಧಿ ತೋರಿಸಿದರೆ ಸಾಲದು. ಸಮಾಜದ ನಿರ್ಗತಿಕರನ್ನು ಮೇಲ್ಪಂಕ್ತಿಗೆ ತರುವ ಕೆಲಸ ಆಗಬೇಕು. ಗ್ರಾಮೀಣ ಮಟ್ಟದಲ್ಲಿ ಬಡ ರೈತವರ್ಗ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುತ್ತಿದೆ. ಇದನ್ನೂ ಮನಗೊಂಡ ಕಾಂಗ್ರೆಸ್​ ಸರ್ಕಾರ ಹಲವಾರು ಯೋಜನೆಗಳನ್ನು ಬಡವರಿಗಾಗಿ ಜಾರಿಗೊಳಿಸಿದೆ ಎಂದರು.

60 ಲಕ್ಷ ಮಕ್ಕಳಿಗೆ ವಾರದಲ್ಲಿ 1 ಕೋಟಿ 20 ಲಕ್ಷ ಮೊಟ್ಟೆ ವಿತರಣೆ: ನಾವು ಶಾಲಾ ಮಕ್ಕಳಿಗೆ ಮೊಟ್ಟೆ ವಿತರಿಸುವ ಯೋಜನೆ ಕಾಂಗ್ರೆಸ್ ಸರ್ಕಾರದ ಪ್ರಣಾಳಿಕೆಯಲ್ಲಿರಲಿಲ್ಲ. ಆದರೂ ಎಲ್ಲ ಮಕ್ಕಳು ಸಮಾನ ಎಂದು ಭಾವಿಸಿ ಈ ಯೋಜನೆ ಜಾರಿಗೊಳಿಸಿದ್ದೇವೆ. ನಮ್ಮಲ್ಲಿ ಯಾವುದೇ ಭ್ರಷ್ಟಾಚಾರ ಇಲ್ಲ. ಎಲ್ಲ ಜಿಲ್ಲೆಯಲ್ಲೂ ಸಂಚರಿಸಿ ಇರುವ ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನಹರಿಸುತ್ತೇವೆ ಎಂದು ಭರವಸೆ ನೀಡಿದರು.

ಮಕ್ಕಳು ಪೌಷ್ಟಿಕತೆಯಿಂದ ಸದೃಢವಾಗಿ ಬೆಳೆಯಲು ಮೊಟ್ಟೆ ಅಗತ್ಯವಿದೆ. ಶಾಲೆಯಲ್ಲಿ 8ನೇ ವಿದ್ಯಾರ್ಥಿಗಳಿಗೆ ಮಾತ್ರ ಮೊಟ್ಟೆ ಕೊಟ್ಟು, ಇನ್ನುಳಿದ 9,10ನೇ ತರಗತಿ ಮಕ್ಕಳಿಗೆ ಕೊಡದೇ ಇರುವುದು ಅಸಮಾನತೆ ಸೃಷ್ಟಿಸುತ್ತದೆ. ಈ ಸಮಸ್ಯೆಯನ್ನು ಸಿಎಂ ಸಿದ್ದರಾಮಯ್ಯ ಗಮನಕ್ಕೆ ತಂದಾಗ ತಕ್ಷಣ 1ರಿಂದ 10ನೇ ತರಗತಿ ವಾರಕ್ಕೆರಡು ಮೊಟ್ಟೆ ನೀಡುವುದಕ್ಕೆ ಒಪ್ಪಿಗೆ ನೀಡಿದರು.

ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 60 ಲಕ್ಷ ಮಕ್ಕಳಿಗೆ ವಾರದಲ್ಲಿ 1ಕೋಟಿ 20 ಲಕ್ಷ ಮೊಟ್ಟೆ ವಿತರಣೆ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಮಕ್ಕಳು ದಷ್ಟಪುಷ್ಟವಾಗಿ ಬೆಳೆಯಬೇಕು. ಇನ್ನೂ ಎರಡು ವರ್ಷದಲ್ಲಿ ಶಿಕ್ಷಣ ಕ್ಷೇತ್ರ ಎಷ್ಟು ಸುಧಾರಣೆ ಕಾಣಲಿದೆ ಎನ್ನುವುದು ನಿಮಗೆ ತಿಳಿಯಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಹೊಸಹಳ್ಳಿ ವೃತ್ತದಿಂದ ಶಾಲೆಯ ವರೆಗೆ ಸಚಿದ್ವಯರನ್ನು ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು. ಈ ಸಂದರ್ಭದಲ್ಲಿ ಚಾಟಿ ಬೀಸುವ ಮೂಲಕ ಎತ್ತಿನ ಗಾಡಿ ಚಲಾಯಿಸಿದ ಚಲುವರಾಯಸ್ವಾಮಿ ಖುಷಿಪಟ್ಟರು. ಕಾರ್ಯಕ್ರಮದ ನಂತರ ಮಕ್ಕಳೊಂದಿಗೆ ಸೇರಿ ಊಟ ಸೇವಿಸಿದ ಸಚಿವರು, ಮಕ್ಕಳಿಗೆ ಊಟ ತಿನ್ನಿಸಿ ಶುಭ ಹಾರೈಸಿದರು.

ಇದನ್ನೂಓದಿ:ನೈಸ್ ವಿಚಾರದಲ್ಲಿ ಸಣ್ಣ ಸಾಕ್ಷಿ ತೋರಿಸಿದರೂ ದೇವೇಗೌಡರ ಕುಟುಂಬವೇ ರಾಜಕೀಯ ನಿವೃತ್ತಿ : ಕುಮಾರಸ್ವಾಮಿ ಸವಾಲು

ABOUT THE AUTHOR

...view details