ಕರ್ನಾಟಕ

karnataka

ETV Bharat / state

ಮಂಡ್ಯ ಉಸ್ತುವಾರಿಗೆ ಹಿಂದೇಟು; ಗೋಪಾಲಯ್ಯ ಪರ ಬ್ಯಾಟ್ ಬೀಸಿದ ಸಚಿವ ನಾರಾಯಣ ಗೌಡ - Minister Gopaliah

ಮಂಡ್ಯ ಜಿಲ್ಲಾ ಉಸ್ತುವಾರಿ ಸ್ಥಾನಕ್ಕೆ ಸಚಿವ ನಾರಾಯಣ ಗೌಡ ಹಿಂದೇಟು ಹಾಕಿದ್ದಾರೆ.

kcn
ಕೆ ಸಿ ಎನ್​

By

Published : Feb 19, 2023, 1:19 PM IST

ಮಂಡ್ಯ ಜಿಲ್ಲಾ ಉಸ್ತುವಾರಿ ವಿಚಾರ

ಮಂಡ್ಯ:ತಮಗೂ ಹಾಗೂ ಆಪ್ತ ಸಚಿವರಿಗೆ ಮಂಡ್ಯ ಉಸ್ತುವಾರಿ ಕೈ ತಪ್ಪಿದ್ದಕ್ಕೆ ಅಸಮಾಧಾನ ಗೊಂಡಿದ್ದಾರಾ ಕೆ.ಸಿ.ನಾರಾಯಣ ಗೌಡ ಅನ್ನೋ ಪ್ರಶ್ನೆ ಮೂಡಿದೆ. ಉಸ್ತುವಾರಿ ಗೊಂದಲದ ವಿಚಾರವಾಗಿ ಸಿಎಂ ನಡೆಗೆ ಸಚಿವರು ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಂಡ್ಯದಲ್ಲಿ ಸಚಿವ ಕೆ.ಸಿ.ನಾರಾಯಣ ಗೌಡ ಮಾತನಾಡಿ, ನಾನು ಶಿವಮೊಗ್ಗ ಉಸ್ತುವಾರಿ ಸಚಿವ. ಮಂಡ್ಯ ನಾನು ಜನ್ಮ ಪಡೆದ ಜಿಲ್ಲೆ. ಮಂಡ್ಯಕ್ಕೆ ನನ್ನ ಸೇವೆ ಎಂದೆಂದಿಗೂ ಇದ್ದೇ ಇರುತ್ತೆ. ನಮ್ಮ ಸರ್ಕಾರದಿಂದ ರೈತರಿಗೆ ಸಿಗಬೇಕಾದ ಎಲ್ಲ ಸೌಲಭ್ಯ ಸಿಗುತ್ತದೆ. ಯಾವುದೇ ಸರ್ಕಾರ ಕೊಡದಂತಹ ಕೊಡುಗೆಯಾದ ಜನಜೀವನ್ ಮಿಷನ್ ಯೋಜನೆ ಕೊಟ್ಟಿದ್ದೇವೆ. 3 ಸಾವಿರ ಕೋಟಿ ಮಂಡ್ಯ ಜಿಲ್ಲೆಗೆ ಬಂದಿದೆ ಟೆಂಡರ್ ಹಂತದಲ್ಲಿದೆ. ಇದು ಚುನಾವಣೆಗಾಗಿ ಮಾಡಿದ ಕಾರ್ಯಕ್ರಮಗಳಲ್ಲ ಎಂದರು.

ಇದನ್ನೂ ಓದಿ:ಮೋಸದ ಎರಡನೇ ಹೆಸರು ಲಕ್ಷ್ಮಿ ಹೆಬ್ಬಾಳ್ಕರ್: ಸಂಜಯ್ ಪಾಟೀಲ್

ಗೋಪಾಲಯ್ಯಗೆ ಜವಾಬ್ದಾರಿ ಕೊಡಲಿ:ನನಗೆ ಶಿವಮೊಗ್ಗದಲ್ಲಿಯೇ ಹೆಚ್ಚಿನ ರೀತಿಯ ಜವಾಬ್ದಾರಿ ಇದೆ‌. ಪ್ರಧಾನಿ ನರೇಂದ್ರ ಮೋದಿ ಬರ್ತಿದ್ದಾರೆ. ಉಸ್ತುವಾರಿ ನೇಮಕ ಸಿಎಂಗೆ ಬಿಟ್ಟಿದ್ದು‌.
ಅಶೋಕ್, ಅಶ್ವಥ್ ನಾರಾಯಣ, ಗೋಪಾಲಯ್ಯ ಅವರೆಲ್ಲ ಭದ್ರಕೋಟೆಯಲ್ಲಿದ್ದಾರೆ. ಅವರಿಗೆ ಚುನಾವಣೆಯಲ್ಲಿ ಗೆಲ್ಲಲು ಯಾವುದೇ ತೊಂದರೆ ಇಲ್ಲ. ಗೋಪಾಲಯ್ಯಗೆ ಜವಾಬ್ದಾರಿ ಕೊಡಲಿ ನಾವು ಜೊತೆಯಲ್ಲೆ ಇರುತ್ತೇವೆ. ಜಿಲ್ಲೆ ಜವಾಬ್ದಾರಿ ತೆಗೆದುಕೊಂಡಾಗ ಅವರ ಜೊತೆ ನಾನು ನಿಂತು ಓಡಾಡಿದ್ದೇನೆ. ನಾನು ಒಟ್ಟಿಗೆ ಕೈ ಜೊಡಿಸುವ ಕೆಲಸ ಮಾಡುತ್ತೇನೆ.

ಶಿವಮೊಗ್ಗದಲ್ಲಿ ನನಗೆ ಇನ್​ಚಾರ್ಜ್ ಕೊಟ್ಟಿದ್ದಾರೆ, ನಾನು ಬಿಟ್ಟು ಬರಲು ಆಗುವುದಿಲ್ಲ, ಅದು ಸಾಧ್ಯವೂ ಇಲ್ಲ. ನನಗೆ ಉಸ್ತುವಾರಿ ಕೊಟ್ಟರೆ ಹಾಗೇ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಮೂರು ಮೂರು ತಿಂಗಳಿಗೆ ಉಸ್ತುವಾರಿ ಬದಲಾಯಿಸಿದರೆ ಹೇಗೆ? ಶಿವಮೊಗ್ಗದಲ್ಲಿ ದೊಡ್ಡ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಶ್ವಥ್ ನಾರಾಯಣ್, ಅಶೋಕ್, ಇಲ್ಲವೇ ಗೋಪಾಲಯ್ಯ ಅವರೇ ಮುಂದೆ ಬರಲಿ. ಮುಖ್ಯಮಂತ್ರಿ ಒಪ್ಪಿಸಿದರೆ ಅವರು ಒಪ್ಪಿಕೊಳ್ತಾರೆ ಎಂದು ನಾರಾಯಣ ಗೌಡ ಹೇಳಿದ್ದಾರೆ.

ಇದನ್ನೂ ಓದಿ:ಮೋದಿ, ಅಮಿತ್ ಶಾ ಬೆನ್ನಲ್ಲೇ ಜೆ.ಪಿ ನಡ್ಡಾ ರಾಜ್ಯ ಪ್ರವಾಸ: 2 ದಿನ ಬಿರುಸಿನ ಪ್ರಚಾರ

ABOUT THE AUTHOR

...view details