ಮಂಡ್ಯ:ಸಚಿವರಾಗಿ ನಿನ್ನೆಯಷ್ಟೇ ಪ್ರಮಾಣವಚನ ಸ್ವೀಕಾರ ಮಾಡಿದ ಸಚಿವ ಕೆ.ಸಿ. ನಾರಾಯಣ ಗೌಡ ಮೊದಲ ಬಾರಿಗೆ ತವರು ಕ್ಷೇತ್ರಕ್ಕೆ ಆಗಮಿಸಿ ಸಂಚಲನ ಮೂಡಿಸಿದ್ದಾರೆ.
ಎಸ್ಕಾರ್ಟ್ ಇಲ್ಲದೇ ತವರು ಕ್ಷೇತ್ರಕ್ಕೆ ಆಗಮಿಸಿದ ಸಚಿವ ಕೆ.ಸಿ.ನಾರಾಯಣ ಗೌಡ - ಸಚಿವ ಕೆ.ಸಿ. ನಾರಾಉಯಣಗೌಡ
ಪ್ರಮಾಣ ವಚನ ಸ್ವೀಕಾರ ಮಾಡಿದ ಬಳಿಕ ಮೊದಲ ಬಾರಿಗೆ ಸಚಿವ ಕೆ.ಸಿ. ನಾರಾಯಣ ಗೌಡ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದ್ರು.
ತವರು ಕ್ಷೇತ್ರಕ್ಕೆ ಆಗಮಿಸಿದ ಸಚಿವ ಕೆ.ಸಿ. ನಾರಾಉಯಣಗೌಡ
ತಮ್ಮ ಹುಟ್ಟೂರು ಕೈಗೋನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮ ದೇವರಾದ ವೀರಭದ್ರಸ್ವಾಮಿಗೆ ಹೊರಗಿನಿಂದಲೇ ನಮನ ಸಲ್ಲಿಸಿದ್ರು. ಯಾವುದೇ ಎಸ್ಕಾರ್ಟ್ ಇಲ್ಲದೇ ಗ್ರಾಮಕ್ಕೆ ಭೇಟಿ ನೀಡಿದ್ದು, ಗ್ರಾಮಸ್ಥರಿಗೆ ಅಚ್ಚರಿ ಮೂಡಿಸಿತು.
ಇನ್ನು ಗ್ರಾಮದ ಮುಖಂಡರೊಬ್ಬರು ಸಾವಿಗೀಡಾದ ವಿಷಯ ತಿಳಿದ ಸಚಿವರು ಅವರ ಅಂತಿಮ ದರ್ಶನ ಪಡೆದ್ರು. ಗ್ರಾಮದ ಮುಖಂಡರಿಗೆ ಅಭಿವೃದ್ಧಿಯ ಭರವಸೆಯನ್ನು ನೀಡಿದ್ದಾರೆ.