ಮಂಡ್ಯ:ನಮಗಿಂತ ಜಾಸ್ತಿ ರೈತರಿಗೆ ಬಿಜೆಪಿ - ಜೆಡಿಎಸ್ ಅನ್ಯಾಯ ಮಾಡಿದೆ. ಮತ್ತು ಅವರ ಅವಧಿಯಲ್ಲಿ ಅಧಿಕ ನೀರು ಬಿಟ್ಟಿದ್ದಾರೆ ಎಂದು ಸಚಿವ ಚಲುವರಾಯಸ್ವಾಮಿ ಆರೋಪಿಸಿದ್ದಾರೆ. ಕಾವೇರಿ ವಿಚಾರವಾಗಿ ಪತ್ರಕರ್ತರು ಪ್ರಶ್ನೆ ಕೇಳ್ತಾ ಇದ್ದ ಹಾಗೆ ಸಚಿವ ಎನ್. ಚಲುವರಾಯಸ್ವಾಮಿ ಕೆಂಡಾಮಂಡಲವಾಗಿ ಜೆಡಿಎಸ್ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಮಂಡ್ಯದಲ್ಲಿ ಗುರುವಾರ ಮಾತನಾಡಿದ ಅವರು, ನಾನು ರೈತರು ಹಾಗೂ ಸಂಘಟನೆಗಳ ಬಗ್ಗೆ ಮಾತನಾಡಲ್ಲ. ನಮ್ಮ ಗಮನ ಸೆಳೆಯಲು ಪ್ರತಿಭಟನೆ ಮಾಡುತ್ತಾರೆ. ನಾವು ನಮ್ಮ ಸಮಸ್ಯೆಯನ್ನು ಕೋರ್ಟ್ ಹಾಗೂ ಪ್ರಾಧಿಕಾರದ ಮುಂದೆ ಹೇಳಬಹುದು ಅಷ್ಟೇ. ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡುವ ಅವಕಾಶವಿದೆ ಎಂದರು.
ಬಿಜೆಪಿ ಹಾಗೂ ಜೆಡಿಎಎಸ್ ಅವರಿಗೆ ಕೃತಜ್ಞತೆ ಇಲ್ಲವೇ. ಮಂಡ್ಯದಲ್ಲಿ ಬಂದು ಬಿಜೆಪಿ ಜೆಡಿಎಸ್ ಏನ್ ಮಾಡ್ತಾರೆ?. ನಮ್ಮ ಗಮನಕ್ಕೆ ತರಲು ಮಂಡ್ಯದಲ್ಲಿ ರೈತರು ಇಲ್ಲವೆ. ಕುಮಾರಸ್ವಾಮಿ, ಬೊಮ್ಮಾಯಿ ದೆಹಲಿಗೆ ಹೋಗಿ ಪ್ರಧಾನಿಗಳ ಬಳಿ ಮಾತಾಡಬೇಕು. ಕಾವೇರಿ ವಿಚಾರದ ಸಮಸ್ಯೆ ಹೇಳಿ ಎರಡು ಸಿಎಂ ಕರೆಸಿ ಸಮಸ್ಯೆ ಬಗೆಹರಿಸಲು ಹೇಳಬೇಕು. ಕಾವೇರಿ ವಿಚಾರವನ್ನು ಪ್ರಧಾನಿ ಬಳಿ ಹೇಳಬೇಕು. ಅದು ಬಿಟ್ಟು ಇಲ್ಲಿ ಟಿವಿಯವರ ಮುಂದೆ ಪ್ರತಿಭಟನೆ ಮಾಡುವುದು ಸರಿಯಾ ಎಂದು ಗುಡುಗಿದರು.
ಇಲ್ಲಿ ಬಂದು ಶೂರರು ವೀರರ ರೀತಿ ಭಾಷಣ ಮಾಡುವ ಜೆಡಿಎಸ್, ಬಿಜೆಪಿಯವರು ಎಲ್ಲ ನೀರು ಬಿಟ್ಟಿದ್ದಾರೆ. ಚುನಾವಣೆಯಲ್ಲಿ ಒಂದೇ ಸಲ ಸಾಧನೆ ಮಾಡಲು ಬಿಜೆಪಿ, ಜೆಡಿಎಸ್ ಒಂದಾಗುತ್ತಾ ಇದ್ದಾರೆ. ಇವರಿಗೆ ಮಧ್ಯ ಪ್ರವೇಶ ಮಾಡಲು ಆಗುವುದಿಲ್ಲ ಎಂದರೆ ಮನೆಯಲ್ಲಿ ಇರಲಿ, ರಾಜಕಾರಣ ಯಾಕೆ ಮಾಡುತ್ತಾರೆ. ಈಗಾಗಲೇ ನಾವು ಕಾವೇರಿ ನೀರಿನ ವಿಚಾರವನ್ನು ಕೋರ್ಟ್‌ಗೆ ಹೋಗಿದ್ದೇವೆ. 12ನೇ ತಾರೀಖು CWMA ಮುಂದೆ ನೀರು ಬಿಡಲ್ಲ ಎಂದು ಹೇಳುತ್ತೇವೆ. ನಾವು ಕೂಡ ನಮ್ಮ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಸುಮ್ಮನೆ ಕೂತಿಲ್ಲ ಎಂದು ವಾಗ್ದಾಳಿ ನಡೆಸಿದರು.