ಕರ್ನಾಟಕ

karnataka

ETV Bharat / state

ಕುಮಾರಸ್ವಾಮಿ 'ಊಸರವಳ್ಳಿ'ಯಂತೆ ಬಣ್ಣ ಬದಲಾಯಿಸುತ್ತಿರುತ್ತಾರೆ: ಸಚಿವ ಬಿ ಸಿ ಪಾಟೀಲ್ - Mandya latest news 2020

ಡ್ರಗ್ಸ್ ವಿಚಾರ ಸುದ್ದಿಯಲ್ಲಿರುವ ಈ ಸಂದರ್ಭದಲ್ಲಿ ಅವರು ಆರೋಪಿಸುತ್ತಿರುವುದೇಕೆ? ಮೈತ್ರಿ ಸರ್ಕಾರದ ನಶೆಯಿಂದ ಹೊರಬರಲು ಕುಮಾರಸ್ವಾಮಿಗೆ ಒಂದು ವರ್ಷ ಬೇಕಾಯಿತೇ? ಮೈತ್ರಿ ಸರ್ಕಾರ ಅಸ್ಥಿರಗೊಂಡಾಗ ಏಕೆ ಕುಮಾರಸ್ವಾಮಿ ಹೇಳಲಿಲ್ಲ. ಅವರು ಆಗಾಗ ಊಸರವಳ್ಳಿಯಂತೆ ಬಣ್ಣ ಬದಲಾಯಿಸುತ್ತಿರುತ್ತಾರೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿರುಗೇಟು ನೀಡಿದ್ದಾರೆ.

Minister Bc  Patil
ಸಚಿವ ಬಿಸಿ ಪಾಟೀಲ್

By

Published : Sep 8, 2020, 12:26 PM IST

ಮಂಡ್ಯ: ಡ್ರಗ್ಸ್​ ಮಾಫಿಯಾ ಹಣದಿಂದಲೇ ಮೈತ್ರಿ ಸರ್ಕಾರ ಪತನವಾಯಿತೆಂದು ಆರೋಪಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಗೆ ಕೃಷಿ ಸಚಿವ ಬಿ.ಸಿ. ಪಾಟೀಲ್ ತಿರುಗೇಟು ನೀಡಿದ್ದಾರೆ.

ಮದ್ದೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ರೀತಿ ಆರೋಪಿಸುತ್ತಿರುವ ಕುಮಾರಸ್ವಾಮಿ ಒಂದು ವರ್ಷ ಸುಮ್ಮನಿದ್ದಿದ್ದು ಏಕೆ? ಡ್ರಗ್ಸ್ ವಿಚಾರ ಸುದ್ದಿಯಲ್ಲಿರುವ ಈ ಸಂದರ್ಭದಲ್ಲಿ ಅವರು ಆರೋಪಿಸುತ್ತಿರುವುದೇಕೆ? ಮೈತ್ರಿ ಸರ್ಕಾರದ ನಶೆಯಿಂದ ಹೊರಬರಲು ಕುಮಾರಸ್ವಾಮಿಗೆ ಒಂದು ವರ್ಷ ಬೇಕಾಯಿತೇ? ಮೈತ್ರಿ ಸರ್ಕಾರ ಅಸ್ಥಿರಗೊಂಡಾಗ ಏಕೆ ಕುಮಾರಸ್ವಾಮಿ ಹೇಳಲಿಲ್ಲ ಎಂದು ಪ್ರಶ್ನಿಸಿದರು. ಅವರು ಆಗಾಗ ಊಸರವಳ್ಳಿಯಂತೆ ಬಣ್ಣ ಬದಲಾಯಿಸುತ್ತಿರುತ್ತಾರೆ. ಮುಖ್ಯಮಂತ್ರಿಯಾಗಿದ್ದವರು ಅವರು, ಜವಾಬ್ದಾರಿಯಿಂದ ಮಾತನಾಡಬೇಕಾಗುತ್ತದೆ ಎಂದಿದ್ದಾರೆ.

ಸಚಿವ ಬಿಸಿ ಪಾಟೀಲ್

ಸ್ಯಾಂಡಲ್​ವುಡ್ ನಲ್ಲಿದವರೆಲ್ಲರೂ ಗಾಂಜಾ ಅಥವಾ ನಶೆಗೆ ಒಳಾಗಾದ್ರು ಅಂತಲ್ಲಾ. ಒಂದು ಕೊಡ ಹಾಲಿನಲ್ಲಿ ಒಂದು ಹರಳು 'ಉಪ್ಪು' ಬಿದ್ರೆ ಹಾಲೆಲ್ಲಾ ಕೆಟ್ಟೋಗುತ್ತದೆ. ಸಾಮಾನ್ಯ ಜನರು ತಪ್ಪು ಮಾಡುವುದಕ್ಕೂ ಸೆಲೆಬ್ರಿಟಿ ತಪ್ಪು ಮಾಡುವುದಕ್ಕೂ ವ್ಯತ್ಯಾಸ ಇದೆ ಎಂದು ಸಚಿವರು ಹೇಳಿದ್ರು.

ಸೆಲೆಬ್ರಿಟಿ ಗಾಜಿನಮನೆಯಲ್ಲಿ ನಿಂತಿರುತ್ತಾರೆ. ಗಾಜಿನ ಮನೆಯಲ್ಲಿ ಇದ್ದುಕೊಂಡು ಒಂದು ಸಣ್ಣ ತಪ್ಪು ಮಾಡಿದ್ರು ಜನರಿಗೆ ಕಾಣುತ್ತೆ. ಸ್ಯಾಂಡಲ್​ವುಡ್ ನಲ್ಲಿರುವ ಸ್ಟಾರ್ಸ್ ಸಾಮಾನ್ಯ ಜನರೇ. ಆದರೆ ಜನರು ನಮ್ಮ ನಡೆ-ನುಡಿಗಳನ್ನ ಫಾಲೋ ಮಾಡ್ತಿರುತ್ತಾರೆ. ಅಂತಹ ಸಂದರ್ಭದಲ್ಲಿ ಒಬ್ಬ ಸೆಲೆಬ್ರಿಟಿ ದಾರಿ ತಪ್ಪಿದ್ರೆ ಉಳಿದವರು ದಾರಿ ತಪ್ಪಿದಂತಾಗುತ್ತೆ ಎಂದು ಸಚಿವರು ಎಚ್ಚರಿಸಿದರು.

ಸಚಿವ ಬಿಸಿ ಪಾಟೀಲ್

ರಾಗಿಣಿ ‘ಎ2 ಆರೋಪಿ. ಆರೋಪಿ 1 ಬಗ್ಗೆ ಎಲ್ಲೂ ಹೇಳ್ತಿಲ್ಲಾ. ಕೇವಲ ಪ್ರಚಾರಕ್ಕೆ ಮಾತ್ರ ಮಾಡಬಾರದು. ಯಾರೇ ಇರಲಿ ಡ್ರಗ್ಸ್, ಗಾಂಜಾ ಸೇವನೆ ಮಾಡಿದವರು ಯಾರೇ ಇರಲಿ ಕಾನೂನಿಗಿಂತ ಯಾರು ದೊಡ್ಡವರಲ್ಲ. ಆ ದಂಧೆಯಲ್ಲಿ ಯಾರು ತೊಡಗಿದ್ದಾರೆ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಿ. ರಾಜಕಾರಣಿಗಳು, ರಾಜಕಾರಣಿ ಮಕ್ಕಳು,ಸಿನಿಮಾ ನಟರಾಗಲಿ, ಯಾರಿಗೂ ಮುಲಾಜಿಲ್ಲಾ ಎಂದರು.

ಸಿಎಂ ಪುತ್ರ ವಿಜಯೇಂದ್ರ ಭ್ರಷ್ಟಾಚಾರದ ಆರೋಪ ವಿಚಾರವಾಗಿ ಅವೆಲ್ಲಾ ಸುಳ್ಳು. ಪ್ರತಿಪಕ್ಷದವರು ಹುಟ್ಟಿಸಿದ ಊಹಾಪೋಹಾಗಳು. ಅದರ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಸಚಿವ ಬಿ ಸಿ ಪಾಟೀಲ್ ಸ್ಪಷ್ಟಪಡಿಸಿದರು​.

ABOUT THE AUTHOR

...view details