ಕರ್ನಾಟಕ

karnataka

ETV Bharat / state

ಗಣಿಗಾರಿಕೆ ಬಗ್ಗೆ ಸದನದಲ್ಲಿ ಧ್ವನಿ ಎತ್ತುತ್ತೇನೆ: ಶಾಸಕ ರವೀಂದ್ರ ಶ್ರೀಕಂಠಯ್ಯ - ಸುಮಲತಾ

ಕಲ್ಲುಗಣಿಗಾರಿಕೆ ಸ್ಥಗಿತದಿಂದಾಗಿ ಮೂರು ತಿಂಗಳಿಂದ ಜಿಲ್ಲೆಯಲ್ಲಿ ಅಭಿವೃದ್ಧಿ ರದ್ದಾಗಿದೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದ್ದಾರೆ.

ಶಾಸಕ ರವೀಂದ್ರ ಶ್ರೀಕಂಠಯ್ಯ
ಶಾಸಕ ರವೀಂದ್ರ ಶ್ರೀಕಂಠಯ್ಯ

By

Published : Sep 10, 2021, 11:46 AM IST

ಮಂಡ್ಯ:ಕಲ್ಲು ಗಣಿಗಾರಿಕೆ ಸ್ಥಗಿತದಿಂದಾಗಿ 3 ತಿಂಗಳಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿದೆ ಎಂದು ಶ್ರೀರಂಗಪಟ್ಟಣದ ಶಾಸಕ ರವೀಂದ್ರ ಶ್ರೀಕಂಠಯ್ಯ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಈ ವಿಚಾರವನ್ನ ಸದನದಲ್ಲಿ ಗಂಭೀರವಾಗಿ ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ.

ಗಣಿಗಾರಿಕೆ ಬಗ್ಗೆ ಸದನದಲ್ಲಿ ಗಂಭೀರವಾಗಿ ಚರ್ಚೆ ನಡೆಸಲಾಗುವುದು: ಶಾಸಕ ರವೀಂದ್ರ ಶ್ರೀಕಂಠಯ್ಯ

ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದಲ್ಲಿ ಮಾತನಾಡಿದ ಅವರು, ಗಣಿಗಾರಿಕೆ ಸ್ಥಗಿತಗೊಂಡು 3 ತಿಂಗಳಾಗಿವೆ. ಅಂದಿನಿಂದ ಜಿಲ್ಲೆಯ ಅಭಿವೃದ್ಧಿಯೂ ಕುಂಠಿತವಾಗಿದೆ. ಇದು ಸರ್ಕಾರದ ಗಮನಕ್ಕೆ ಇದೆಯೋ, ಇಲ್ಲವೋ ಗೊತ್ತಿಲ್ಲ. ಇದರ ಹೊಣೆಯನ್ನು ಯಾರು ಹೊರುತ್ತಾರೆ ಅನ್ನೋ ಕ್ಲಾರಿಟಿ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

'ಶೌಚಾಲಯ ಕಟ್ಟಿಕೊಳ್ಳಲು ಸಾಧ್ಯವಾಗ್ತಿಲ್ಲ'

ಮುಖ್ಯಮಂತ್ರಿ, ಗಣಿ ಸಚಿವರು ಇದರ ಬಗ್ಗೆ ಗಮನಹರಿಸಿಲ್ಲ. ಸಾಮಾನ್ಯ ಜನ, ಮನೆ ಹಾಗೂ ಶೌಚಾಲಯ ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣರಾದವರು ಉತ್ತರ ಕೊಡಬೇಕು ಎಂದರು.

ಸದನದಲ್ಲಿ ಚರ್ಚೆಗೆ ಸಿದ್ಧ

ವಿಧಾನಸಭೆಯಲ್ಲಿ ಇದರ ಬಗ್ಗೆ ಪ್ರಶ್ನೆ ಎತ್ತಲು ಸಿದ್ಧ. ಇದರ ಬಗ್ಗೆ ಗಂಭೀರವಾಗಿ ಚರ್ಚೆ ಮಾಡುತ್ತೇನೆ. ರಾಜ್ಯದಲ್ಲಿ ಇಲ್ಲದ ಕಾನೂನು ಮಂಡ್ಯಕ್ಕೆ ಮಾತ್ರ ತರಲಾಗಿದೆ. ಜಿಲ್ಲೆಯ ಜೆಡಿಎಸ್ ಶಾಸಕರನ್ನು ಕುಗ್ಗಿಸಬೇಕು ಅಂದುಕೊಂಡಿದ್ದರೆ, ಇದಕ್ಕೆ ಮುಂದಿನ ದಿನಗಳಲ್ಲಿ ಭಾರಿ ಬೆಲೆ ತೆರಬೇಕಾಗುತ್ತೆ ಎಂದು ಕಿಡಿಕಾರಿದರು.

ಸರ್ಕಾರದ ಮೌನ, ಹಲವು ಅನುಮಾನ

ಸರ್ಕಾರ ಈ ವಿಚಾರದಲ್ಲಿ ಮಧ್ಯೆ ಪ್ರವೇಶಿಸಿ ಜನರಿಗೆ ನ್ಯಾಯ ಒದಗಿಸಬೇಕಿತ್ತು. ಆದರೆ, ಸರ್ಕಾರ ಮೌನಕ್ಕೆ ಶರಣಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಹೀಗಾಗಿ ಸದನದಲ್ಲಿ ಈ ವಿಚಾರದ ಬಗ್ಗೆ ಮಾತನಾಡಲು ನಾನು ಸಿದ್ಧ ಎಂದರು.

ಸಂಸದರ ಲೆಟರ್​​ಹೆಡ್​​ ದುರ್ಬಳಕೆ ಬಗ್ಗೆಯೂ ಚರ್ಚೆ

ಸುಮಲತಾ ಲೆಟರ್​​​ಹೆಡ್​ ದುರ್ಬಳಕೆ ವಿಚಾರವು ಸದನದಲ್ಲಿ ಚರ್ಚೆ ಮಾಡುತ್ತೇನೆ. 15 ದಿನಗಳಲ್ಲಿ ಕ್ರಮ ತೆಗೆದುಕೊಳ್ಳುವ ಬಗ್ಗೆ ಎಸ್​​ಪಿ ಭರವಸೆ ನೀಡಿದ್ದಾರೆ. ಆದರೆ ತನಿಖೆ ಮಾಡುವುದಾಗಿ ಹೇಳಿ ಎಫ್‌ಐಆರ್ ದಾಖಲಿಸಿಲ್ಲ. ಇದರಲ್ಲಿ ಪೊಲೀಸ್ ಇಲಾಖೆ ನಿರ್ಲಕ್ಷ್ಯ ಎದ್ದು ಕಾಣ್ತಿದೆ. ಈ ಬಗ್ಗೆ ಕೂಡ ಅಸೆಂಬ್ಲಿಯಲ್ಲಿ ಚರ್ಚಿಸುತ್ತೇನೆ ಅಂತಾ ಹೇಳಿದರು.

ಸಂಸದರ ಸಹಿ ಮಾಡಿ ದಾಖಲೆ ಪಡೆದಿರುವ ಅನಾಮಧೇಯ

ಸಂಸದರ ಸಹಿ ಮಾಡಿ ಅನಾಮಧೇಯ ವ್ಯಕ್ತಿ ಕೆಆರ್​ಎಸ್​ನಲ್ಲಿ ದಾಖಲೆ ತೆಗೆದುಕೊಳ್ಳುತ್ತಾನೆ ಎಂದರೆ ಏನರ್ಥ? ಎಂಪಿ ಸೇರಿದಂತೆ ಹಲವರು ಇದಕ್ಕೆ ಕಾರಣ. ವ್ಯವಸ್ಥೆಯಲ್ಲಿ ಏನು ನಡೀತಿದೆ ಅನ್ನೋದರ ಬಗ್ಗೆ ಅನುಮಾನವಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲಿ ಪೊಲೀಸ್ ಇಲಾಖೆ ಒಬ್ಬರ ಪರವಾಗಿ ಕೆಲಸ ಮಾಡುತ್ತಿದೆ. ಅವರು, ಸಾಮಾನ್ಯರಿಗೆ ನ್ಯಾಯ ಕೊಡುತ್ತಾರೆ ಅನ್ನೋ ನಂಬಿಕೆ ಇಲ್ಲ. ಈ ಬಗ್ಗೆಯೂ ಸದನದಲ್ಲಿ ಚರ್ಚಿಸುವುದಾಗಿ ಅವರು ಇದೇ ವೇಳೆ ಮಾಹಿತಿ ನೀಡಿದರು.

ABOUT THE AUTHOR

...view details