ಮಂಡ್ಯ:ನಿಯಮ ಮೀರಿ ಅಕ್ರಮವಾಗಿ ಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ಕೆ.ಆರ್. ಪೇಟೆ ಪುರಸಭೆ ಅಧಿಕಾರಿಗಳು ಧಾಳಿ ಮಾಡಿ ಮಾಂಸವನ್ನು ವಶಕ್ಕೆ ಪಡೆದು ವ್ಯಾಪಾರಿ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.
ನಿಷೇಧದ ನಡುವೆಯೂ ಮಾಂಸ ಮಾರಾಟ: 400 ಕೆಜಿ ಮಾಂಸ ವಶ, ಮಾಲೀಕನ ಮೇಲೆ ಪ್ರಕರಣ ದಾಖಲು - ಮಂಡ್ಯ ಮಾಂಸ ಮಾರಾಟ ಅಂಗಡಿ ದಾಳಿ
ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡುವ ಭೀತಿಯಿಂದ ಮಾಂಸ ಮಾರಾಟ ನಿಷೇದಿಸಲಾಗಿದೆ. ಅದರ ನಡುವೆಯೆ ವ್ಯಾಪಾರಿಯೊಬ್ಬರು 400 ಕೆಜಿ ಮಾಂಸವನ್ನು ತಲಾ 600 ರೂ.ಗೆ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ವ್ಯಾಪಾರಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಕೊರೊನಾ ವೈರಸ್ ಹರಡುವ ಭೀತಿಯಿಂದ ಜಿಲ್ಲೆಯಲ್ಲಿ ಮಾಂಸ ಮಾರಾಟ ನಿಷೇದಿಸಲಾಗಿತ್ತು. ಅದರ ನಡುವೆಯೆ ಸೈಯದ್ ಸಾಧಿಕ್ ಎಂಬುವವರು 400 ಕೆಜಿ ಮಾಂಸವನ್ನು 600 ರೂ. ನಂತೆ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ವ್ಯಾಪಾರಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಪಂಪ್ ಹೌಸ್ನಲ್ಲಿ ಬಚ್ಚಿಟ್ಟಿದ್ದ ಮಾಂಸವನ್ನು ಪತ್ತೆ ಮಾಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಆಹಾರ ಕ್ರಮಗಳಲ್ಲಿ ಮುಂಜಾಗೃತವಾಗಿ ಎಚ್ಚರಿಕೆಯ ಕ್ರಮಗಳನ್ನು ಕೈಗೊಂಡು ಕೊರೊನಾ ಸೇರಿದಂತೆ ಹೆಚ್1ಎನ್1 ನಂತಹ ವೈರಾಣುಗಳ ಮೂಲಕ ಹರಡುವ ರೋಗರುಜಿನಗಳನ್ನು ತಡೆಗಟ್ಟಬೇಕು ಎಂದು ಮುಖ್ಯಾಧಿಕಾರಿ ಸತೀಶ್ ಕುಮಾರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.