ಮಂಡ್ಯ: ಕೊರೊನಾ ವೈರಸ್ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಖಾಸಗಿ ಶಾಲೆಯೊಂದು ಎಲ್ಲಾ ಮ್ಕಕಳಿಗೆ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ.
ಕೊರೊನಾ ಭೀತಿ: ಮದ್ದೂರಲ್ಲಿ ಮಕ್ಕಳಿಗೆ ಮಾಸ್ಕ್, ಹ್ಯಾಂಡ್ ವಾಶ್ ಕಡ್ಡಾಯಗೊಳಿಸಿದ ಶಾಲೆ! - ಮಕ್ಕಳಿಗೆ ಮಾಸ್ಕ್, ಹ್ಯಾಂಡ್ ವಾಶ್ ಕಡ್ಢಾಯಗೊಳಿಸಿದ ಶಾಲಾ ಆಡಳಿತ ಮಂಡಳಿ
ಕೊರೊನಾ ಭೀತಿ ಹಿನ್ನೆಲೆ ರಾಜ್ಯದ ಹಲವೆಡೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗುತ್ತಿದೆ. ಹಾಗೇ ಮದ್ದೂರು ಪಟ್ಟಣದ ಸಂತ ಅಂತೋನಿ ಕಾನ್ವೆಂಟ್ ಶಾಲೆಯ ಆಡಳಿತ ಮಂಡಳಿ ಕೂಡಾ ಮಕ್ಕಳಿಗೆ ಮಾಸ್ಕ್, ಹ್ಯಾಂಡ್ ವಾಶ್ ಕಡ್ಡಾಯಗೊಳಿಸಿದೆ.

ಮದ್ದೂರು ಪಟ್ಟಣದ ಸಂತ ಅಂತೋನಿ ಶಾಲೆಯ ಆಡಳಿತ ಮಂಡಳಿ ಈ ನಿರ್ಧಾರ ತೆಗೆದುಕೊಂಡಿದೆ. ಕೊರೊನಾ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸಲು ಹಾಗೂ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರಕ್ಕೆ ಬರಲಾಗಿದೆ. ಹೀಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಮಾಸ್ಕ್ ಧರಿಸಿ ಶಾಲೆಗೆ ಬರಬೇಕು. ಆಡಳಿತ ಮಂಡಳಿಯ ನಿರ್ಧಾರಕ್ಕೆ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದರ ಜೊತೆಗೆ ಶಾಲೆಯಲ್ಲಿ ಹ್ಯಾಂಡ್ ವಾಶ್ ಕಡ್ಡಾಯಗೊಳಿಸಲಾಗಿದ್ದು, ಎಲ್ಲಾ ಮಕ್ಕಳು ಪುಸ್ತಕದ ಜೊತೆಗೆ ಹ್ಯಾಂಡ್ ವಾಶ್ ತೆಗೆದುಕೊಂಡು ಹೋಗಬೇಕಾಗಿದೆ. ಹ್ಯಾಂಡ್ ವಾಶ್ ಮತ್ತು ಮಾಸ್ಕ್ ಇಲ್ಲದೆ ಮಕ್ಕಳು ಶಾಲೆಗೆ ಬರದಂತೆ ಸೂಚನೆ ನೀಡಲಾಗಿದೆ. ಹೀಗಾಗಿ ಪೋಷಕರು ಮಾಸ್ಕ್ಗಾಗಿ ಮುಗಿಬಿದ್ದಿದ್ದಾರೆ. ಇನ್ನು ಕೆಲ ಪೋಷಕರು ಆಡಳಿತ ಮಂಡಳಿಯ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.