ಮಂಡ್ಯ: ಇತ್ತೀಚಿಗೆ ಜಿಲ್ಲೆಯ ಕಲ್ಲಹಳ್ಳಿಯಲ್ಲಿ ನಡೆದ ಅಪ್ರಾಪ್ತರ ಪ್ರೀತಿ, ಬಾಲಕನ ಹತ್ಯೆ ಪ್ರಕರಣದ ನಂತರ ಬಾಲಮಂದಿರದಲ್ಲಿದ್ದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಹಿನ್ನೆಲೆ ಮೃತ ಬಾಲಕಿ ತಂದೆ ಶಿವಲಿಂಗು, ತಾಯಿ ಅನುರಾಧ ಜೈಲಿನಿಂದ ಹೊರ ಬಂದು ಮಗಳ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಮಗಳ ಅಂತ್ಯಕ್ರಿಯೆ ನಡೆಸಿದ ಪೋಷಕರು ಹೆತ್ತವರು ಜೈಲಿನಲ್ಲಿದ್ದ ಕಾರಣ ಬಾಲಕಿಯ ಅಂತ್ಯಕ್ರಿಯೆ ನೆರವೇರಿಸಿರಲಿಲ್ಲ. ಇಂದು ಕೋರ್ಟ್ ಅನುಮತಿ ಪಡೆದು ಜೈಲಿನಿಂದ ಹೊರ ಬಂದು ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಘಟನೆ ವಿವರ
ಮಾನ್ವಿತಾ, ದರ್ಶನ್ ಇಬ್ಬರ ಪ್ರೀತಿ ವಿಷಯ ತಿಳಿದು ಬಾಲಕಿಯ ಪೋಷಕರು ಬಾಲಕನನ್ನು ಏಪ್ರಿಲ್ 15ರಂದು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಬಾಲಕಿ ತಂದೆ ಶಿವಲಿಂಗು ಸೇರಿ 17 ಜನರ ವಿರುದ್ಧ ದೂರು ದಾಖಲಾಗಿತ್ತು. ಮಂಡ್ಯ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಶಿವಲಿಂಗು ಕೊಲೆ ಆರೋಪದಡಿ ಜೈಲಿನಲ್ಲಿದ್ದರು. ಪೋಷಕರು ಜೈಲು ಸೇರಿದ ಬಳಿಕ, ಬಾಲಕಿಗೆ ಬಾಲಮಂದಿರದಲ್ಲಿ ಆಶ್ರಯ ನೀಡಲಾಗಿತ್ತು. ಈ ವೇಳೆ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸದ್ಯ ಮಗಳ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಜೈಲಿನಿಂದ ಅನುಮತಿ ಪಡೆದು ಹೊರ ಬಂದು ಅಂತ್ಯಕ್ರಿಯೆ ನಡೆಸಿದ್ದಾರೆ. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ:ಬಾಲಕನ ಹತ್ಯೆ ಪ್ರಕರಣ ಮಾಸುವ ಮುನ್ನವೇ ನೇಣಿಗೆ ಶರಣಾದ ಬಾಲಕಿ