ಕರ್ನಾಟಕ

karnataka

ETV Bharat / state

ಮನ್​ಮುಲ್‌ನಿಂದ ನೆಲ್ಲಿಗೆರೆ ಬಾಲು ಸದಸ್ಯತ್ವ ಅನರ್ಹ,ಜೆಡಿಎಸ್‌ಗೆ ಆಘಾತ - ಜೆಡಿಎಸ್

ಮಂಡ್ಯ ಮನ್​ಮುಲ್‌ ನಿಂದ ಜೆಡಿಎಸ್ ಬೆಂಬಲಿತ ಸದಸ್ಯ ನೆಲ್ಲಿಗೆರೆ ಬಾಲು ಸದಸ್ಯತ್ವ ಅನರ್ಹ ಮಾಡಲಾಗಿದೆ. ಇದರಿಂದ ಜೆಡಿಎಸ್ ಸಂಖ್ಯಾಬಲ ಕುಗ್ಗಿದ್ದು, ಚಲುವರಾಯ ಸ್ವಾಮಿ ಮೇಲುಗೈ ಸಾಧಿಸಿದ್ದಾರೆ ಎಂದೇ ಹೇಳಲಾಗುತ್ತಿದೆ.

ನೆಲ್ಲಿಗೆರೆ ಬಾಲು

By

Published : Sep 21, 2019, 10:19 PM IST

ಮಂಡ್ಯ:ಮನ್‌ಮುಲ್ ( ಮಂಡ್ಯ ಜಿಲ್ಲಾ ಹಾಲು ಒಕ್ಕೂಟ)ದ ವಿಚಾರವಾಗಿ ಜೆಡಿಎಸ್‌ಗೆ ಆಘಾತವಾಗಿದೆ. ಒಕ್ಕೂಟದ ಅಧ್ಯಕ್ಷ ಗಾಧಿಯ ಆಸೆ ಕಮರಿದ್ದು, ಜೆಡಿಎಸ್ ಬೆಂಬಲಿತ ಸದಸ್ಯ ನೆಲ್ಲಿಗೆರೆ ಬಾಲು ಸದಸ್ಯತ್ವ ಅನರ್ಹಗೊಳಿಸಲಾಗಿದೆ.

ಜೆಡಿಎಸ್ ಬೆಂಬಲಿತ ಸದಸ್ಯನ ಸದಸ್ಯತ್ವ ಅನರ್ಹ

ಪಾಂಡವಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಈ ಕುರಿತು ಆದೇಶ ಹೊರಡಿಸಿದ್ದು, ಸಹಕಾರ ಸಂಘಗಳ ಕಾಯಿದೆ 1959 ರ ಪ್ರಕರಣ 29ಸಿ (1)(ಎಫ್)(iii) ಅಡಿ ಕ್ರಮ ಕೈಗೊಂಡಿದ್ದಾರೆ. ಬಾಲು ಅನರ್ಹಗೊಂಡ ಹಿನ್ನೆಲೆಯಲ್ಲಿ ಒಕ್ಕೂಟದಲ್ಲಿ ಜೆಡಿಎಸ್ ಸಂಖ್ಯಾ ಬಲ ಕುಗ್ಗಿದ್ದು, ಚಲುವರಾಯ ಸ್ವಾಮಿ ಮೇಲುಗೈ ಸಾಧಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಬಿಜೆಪಿಗೆ ಅಧಿಕಾರ:

ಸಿಎಂ ಯಡಿಯೂರಪ್ಪ ಕೃಪೆಗೆ ಒಳಗಾಗಿರುವ ಎಸ್.ಪಿ.ಸ್ವಾಮಿ ಮನ್‌ಮುಲ್ ಮುಂದಿನ ಅಧ್ಯಕ್ಷ ಎಂದು ಹೇಳಲಾಗುತ್ತಿದೆ. ಇತ್ತೀಚೆಗಷ್ಟೇ ಯಡಿಯೂರಪ್ಪ ಹಾಗೂ ಡಾ. ಅಶ್ವಥ್ ನಾರಾಯಣ ಭೇಟಿ ಮಾಡಿ ಮಾತುಕತೆ ಮಾಡಿದ್ದರು. ಈಗ ಜೆಡಿಎಸ್ ಸಂಖ್ಯಾಬಲ 6 ಕ್ಕೆ ಕುಸಿತ ಕಂಡಿದ್ದು, ಕಾಂಗ್ರೆಸ್‌ ಸದಸ್ಯರೂ ಎಸ್‌.ಪಿ ಸ್ವಾಮಿಗೆ ಬೆಂಬಲ ನೀಡುವ ಸಾಧ್ಯತೆ ಇದೆ.

ಸೋಮವಾರ ಅಧ್ಯಕ್ಷ ಗಾದಿಗೆ ಚುನಾವಣೆ ನಡೆಯಲಿದೆ. ಚುನಾವಣೆಯಲ್ಲಿ ನಾಮ ನಿರ್ದೇಶನ ಸೇರಿದಂತೆ ಸರ್ಕಾರದ ಬಳಿ 6 ಮತಗಳಿದ್ದು ಕಾಂಗ್ರೆಸ್‌ನ 3 ಮತಗಳು ಸ್ವಾಮಿಗೆ ಬರುವ ಸಾಧ್ಯತೆ ಇದೆ.

ABOUT THE AUTHOR

...view details