ಕರ್ನಾಟಕ

karnataka

ETV Bharat / state

ಪಾಠ ಕಲಿತ ಜಿಲ್ಲಾಡಳಿತ : ಮಾವು ಬೆಳೆಗಾರರ ರಕ್ಷಣೆಗೆ ಇ - ಮಾರ್ಕೆಟ್ ಆರಂಭ - ಆನ್​ಲೈನ್​ನಲ್ಲಿ ಮಾವಿನಹಣ್ಣು ಮಾರಾಟಕ್ಕೆ ಮುಂದಾದ ಜಿಲ್ಲಾಡಳಿತ

ಕೊರೊನಾದಿಂದ ರೈತರು, ಬೆಳೆಗಾರರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು, ಜಿಲ್ಲೆಯಲ್ಲಿ ಮಾವಿನ ಹಣ್ಣು ಬೆಳೆದಿರುವ ಬೆಳೆಗಾರರಿಗೆ ತೊಂದರೆ ಆಗದಂತೆ ಜಿಲ್ಲಾಡಳಿತ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಇ-ಮಾರ್ಕೆಂಟಿಂಗ್​ ಆರಂಭ ಮಾಡಿದ್ದಾರೆ.

Mango fruit available in online
ಮಾವು ಬೆಳೆಗಾರರ ರಕ್ಷಣೆಗೆ ಇ-ಮಾರ್ಕೆಟ್ ಆರಂಭ

By

Published : May 15, 2020, 5:05 PM IST

Updated : May 15, 2020, 9:08 PM IST

ಮಂಡ್ಯ:ಕೊರೊನಾದಿಂದ ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಬೆಳೆದ ಬೆಳೆಗಳನ್ನು ನಾಶ ಮಾಡುತ್ತಿದ್ದಾರೆ. ಈ ನಡುವೆ ಇಂತಹ ಪರಿಸ್ಥಿತಿ ಮಾವಿನ ಬೆಳಗಾರರಿಗೆ ಬರದಂತೆ ತಡೆಯಲು ಜಿಲ್ಲಾ ತೋಟಗಾರಿಕಾ ಇಲಾಖೆ ಮತ್ತು ಜಿಲ್ಲಾಡಳಿತ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.

ಮಾವು ಬೆಳೆಗಾರರ ರಕ್ಷಣೆಗೆ ಇ - ಮಾರ್ಕೆಟ್ ಆರಂಭ

ಇತ್ತೀಚಿನ ದಿನಗಳಲ್ಲಿ ಆನ್​​​ಲೈನ್ ಮಾರ್ಕೆಟಿಂಗ್​ ಅತೀ ಹೆಚ್ಚು ಬಳಕೆಯಲ್ಲಿದ್ದು, ಇದನ್ನು ಹೆಚ್ಚಾಗಿ ಖಾಸಗಿ ವಲಯದಲ್ಲಿ ಬಳಕೆ ಮಾಡಲಾಗುತ್ತದೆ. ಈ ವಿಧಾನವನ್ನು ಜಿಲ್ಲಾಡಳಿತ ಮತ್ತು ತೋಟಗಾರಿಕೆ ಇಲಾಖೆ ಅಳವಡಿಸಿಕೊಳ್ಳಲು ನಿರ್ಧರಿಸಿದ್ದು, ಮಾವು ಬೆಳೆಗಾರರ ರಕ್ಷಣೆಗೆ ಮುಂದಾಗಿದೆ.

ಮಾವು ಬೆಳೆಗಾರರ ರಕ್ಷಣೆಗೆ ಇ-ಮಾರ್ಕೆಟ್ ಆರಂಭ

ಆನ್​ಲೈನ್​ನಲ್ಲಿ ಸಿಗಲಿದೆ ತಾಜಾ ಮಾವಿನ ಹಣ್ಣು:

ಕೊರೊನಾದಿಂದ ಜಿಲ್ಲೆಯ ತರಕಾರಿ ಬೆಳೆಗಾರರು ಸಂಕಷ್ಟ ಎದುರಿಸುತ್ತಿದ್ದು, ಕೆಲವರು ನಷ್ಟ ಅನುಭವಿಸಿ ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ. ಆದರೆ, ಮಾವು ಬೆಳೆಗಾರರ ವಿಚಾರದಲ್ಲಿ ಎಚ್ಚೆತ್ತ ಅಧಿಕಾರಿಗಳು ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ಆನ್​​ಲೈನ್​ನಲ್ಲಿ ಗ್ರಾಹಕರಿಗೆ ಮಾವಿನ ಹಣ್ಣು ಮಾರಾಟ ಮಾಡಲು ಹೊಸ ವೆಬ್​ಸೈಟ್​ ತೆರದಿದೆ. ಇದಕ್ಕೆ ಮಾವು ಬೆಳೆಗಾರರು ಕೈ ಜೋಡಿಸಿದ್ದಾರೆ.

ಜಿಲ್ಲೆಯಲ್ಲಿ ಸುಮಾರು 1,192 ಹೆಕ್ಟೇರ್ ಜಮೀನಿನಲ್ಲಿ ಮಾವು ಬೆಳೆಯಲಾಗಿದ್ದು, 6,742 ಟನ್ ಮಾವು ಉತ್ಪಾದನೆಯಾಗಲಿದೆ. ಕೊರೊನಾದಿಂದ ಮಾವು ಬೆಳೆಗಾರರಿಗೆ ಸಂಕಷ್ಟ ಬರಬಾರದೆಂದು ಈ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.

ಮಾವು ಪ್ರಿಯರು www.dcmandya.car.nic.in ಎಂಬ ವೆಬ್​ಸೈಟ್​ಗೆ ಹೋಗಿ ಖರೀದಿ ಮಾಡಬಹುದಾಗಿದೆ. ಇಲ್ಲಿ ಯಾವುದೇ ರಾಸಾಯನಿಕ ಮಿಶ್ರವಿಲ್ಲದ, ನೈಸರ್ಗಿಕವಾದ ಹಣ್ಣುಗಳು ದೊರೆಯುತ್ತವೆ. ಅಲ್ಲದೇ ನೇರವಾಗಿ ತೋಟಗಳಿಗೆ ಹೋಗಿ ಹಣ್ಣನ್ನು ಖರೀದಿ ಮಾಡಬಹುದಾಗಿದೆ.

Last Updated : May 15, 2020, 9:08 PM IST

ABOUT THE AUTHOR

...view details