ಮಂಡ್ಯ: ದಿನದಿಂದ ದಿನಕ್ಕೆ ಕೊರೊನಾ ಆತಂಕ ಹೆಚ್ಚಾಗುತ್ತಿದ್ದು ಗ್ರಾಮಾಂತರ ಪ್ರದೇಶದಲ್ಲೂ ಸಹ ಕೋವಿಡ್-19 ಭಯ ಇದ್ದೇ ಇದೆ. ಹಾಗಾಗಿ ಕೊರೊನಾ ವಿರುದ್ಧ ಹೋರಾಟಕ್ಕೆ ಯುವಕರು ಸಜ್ಜುಕೊಳ್ಳುತ್ತಿದ್ದು ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು ಕರಾಟೆ ಮೊರೆ ಹೋಗಿದ್ದಾರೆ.
ಸೋಂಕು ತಡೆಯಲು ಬೇಕು ತಾಕತ್ತು... ಕುಂತಿ ಬೆಟ್ಟದಡಿ ಯುವಕರ ಕರಾಟೆ ಕಸರತ್ತು - ಕೊರೊನಾ ವಿರುದ್ಧ ಹೋರಾಡಲು ಕರಾಟೆ ಮೊರೆ ಹೋದ ಯುವಕರು
ಪಾಂಡವಪುರ ತಾಲೂಕಿನ ಚಿಕ್ಕಾಡೆ ಸೇರಿದಂತೆ ಸುತ್ತಮುತ್ತಲ ಗ್ರಾಮದ ಯುವಕರು ಕರಾಟೆ ತರಬೇತಿ ಪಡೆಯುವ ಮೂಲಕ ತಮ್ಮ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಮುಂದಾಗಿದ್ದು, ಕೊರೊನಾ ವಿರುದ್ಧ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ.

ಪಾಂಡವಪುರ ತಾಲೂಕಿನ ಚಿಕ್ಕಾಡೆ ಸೇರಿದಂತೆ ಸುತ್ತಮುತ್ತಲ ಗ್ರಾಮದ ಯುವಕರು ಮುಂಜಾನೆ ಎದ್ದು ಕರಾಟೆ ತರಬೇತಿ ಪಡೆಯುವ ಮೂಲಕ ತಮ್ಮ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಮುಂದಾಗಿದ್ದಾರೆ. ಸಾಮಾಜಿಕ ಅಂತರ ಕಾಪಾಡಿಕೊಂಡು ಕುಂತಿ ಬೆಟ್ಟದ ಕೆಳಗೆ ಕರಾಟೆ ಕಲಿಯುತ್ತಿದ್ದಾರೆ.
ಪ್ರತಿ ನಿತ್ಯ ಶಿಬಿರಾರ್ಥಿಗಳು ಕುಂತಿ ಬೆಟ್ಟವನ್ನು ಒಮ್ಮೆ ಹತ್ತಿ ಇಳಿದ ನಂತರ ಕರಾಟೆಯ ವಿವಿಧ ಕಸರತ್ತುಗಳನ್ನು ತರಬೇತಿದಾರರು ಹೇಳಿಕೊಡುತ್ತಾರೆ. ನಂತರ 40 ಕೆ.ಜಿ ತೂಕದ ಟ್ರ್ಯಾಕ್ಟರ್ ಟೈರ್ ಅನ್ನು ಬೆನ್ನ ಮೇಲೆ ಇಟ್ಟುಕೊಂಡು ಡಿಬ್ಸ್ ಹೊಡೆಯಬೇಕು, ಡಿಬ್ಸ್ ನಂತರ ಅದೇ ಟೈರ್ ಹಿಡಿದುಕೊಂಡು ಬೆಟ್ಟದ ಮೆಟ್ಟಿಲು ಹತ್ತಬೇಕು. ಹೀಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ಕಸರತ್ತು ಮಾಡುತ್ತಿದ್ದಾರೆ.