ಮಂಡ್ಯ:ಅನುದಾನವನ್ನು ಸಿಎಂ ಬೇರೆ ಜಿಲ್ಲೆಗೆ ಕೊಟ್ಟಿದ್ದಾರೆ ಎಂಬ ಗಾಸಿಪ್ಗೆ ಆದ್ಯತೆ ಕೊಡಬೇಡಿ. ಇದುವರೆಗೆ ಕೊಟ್ಟ ಅನುದಾನಕ್ಕಿಂತ ಹೆಚ್ಚು ಅನುದಾನ ಕೊಡ್ತಾರೆ ಅಂತ ಸಚಿವ ಸಿ.ಎಸ್. ಪುಟ್ಟರಾಜು ಮಂಡ್ಯ ನಾಗರಿಕರಿಗೆ ಭರವಸೆ ನೀಡಿದ್ದಾರೆ.
ಮಂಡ್ಯ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನ ಹಿಂಪಡೆಯುವ ವಿಚಾರವಾಗಿ ಮಾತನಾಡಿದ ಅವರು, ಕೆಲವರಿಗೆ ಗಾಸಿಪ್ ಹಬ್ಬಿಸೋದೇ ಕೆಲಸ. ಗಾಸಿಪ್ಗೆ ತಲೆ ಕೆಡಿಸಿಕೊಳ್ಳಬೇಡಿ. ಹೆಚ್ಚಿನ ಅನುದಾನ ಸಿಗಲಿದೆ. ಈಗಾಗಲೇ ಸಿಎಂ ತಮ್ಮ ಕಾರ್ಯವೈಖರಿ ವೇಗ ಹೆಚ್ಚಿಸಿಕೊಂಡಿದ್ದಾರೆ. ಇನ್ಮುಂದೆ ಸಿಎಂ ಕಾರ್ಯವೈಖರಿ ಬದಲಾಗಲಿದೆ. ಸಿಎಂ ಯಾವ ಕಾರಣಕ್ಕೂ ಮಂಡ್ಯ ಮರೆಯಲ್ಲ. ಮೈಶುಗರ್ ನಿರ್ಮಾಣಕ್ಕಾಗಿ ಡಿಪಿಆರ್ ತಯಾರಿಸಲು ಸೂಚನೆ ನೀಡಲಾಗಿದೆ ಎಂದರು.
ಸಂಸದೆ ಶೋಭಾ ಕರಂದ್ಲಾಜೆಗೆ ಸವಾಲು ಹಾಕಿದ ಪುಟ್ಟರಾಜು, ಶಿಕಾರಿಪುರದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿದೆ. ಹೀಗಾಗಿ ಮೊದಲು ಯಡಿಯೂರಪ್ಪರ ರಾಜೀನಾಮೆ ಕೊಡಿಸಲಿ ಎಂದು ಹೇಳಿದರು.