ಮಂಡ್ಯ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇಂದು ಬೆಳಗಿನ ವರದಿಯಲ್ಲಿ 15 ಜನರಿಗೆ ಕೋವಿಡ್ -19 ಪಾಸಿಟಿವ್ ಇರುವುದು ದೃಢವಾಗಿದೆ. ಎಲ್ಲಾ ಪ್ರಕರಣಕ್ಕೂ ಮುಂಬೈ ಮೂಲವೇ ಆಗಿದ್ದು, ಒಂದು ಪ್ರಕರಣದ ಮೂಲ ಪತ್ತೆ ಹಚ್ಚಬೇಕಿದೆ.
ಮಂಡ್ಯದಲ್ಲಿ ಮುಂದುವರೆದ ಕೊರೊನಾ ಅಬ್ಬರ... ಇಂದು 15 ಜನರಿಗೆ ಪಾಸಿಟಿವ್
ಕೊರೊನಾ ಪ್ರಕರಣ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದ್ದು, ಇಂದು ಬೆಳಗಿನ ವರದಿಯಲ್ಲಿ 15 ಜನರಿಗೆ ಕೋವಿಡ್ -19 ಪಾಸಿಟಿವ್ ಇರುವುದು ದೃಢವಾಗಿದೆ.
ಮಂಡ್ಯದಲ್ಲಿ ಮುಂದುವರೆದ ಕೊರೊನಾ ಅಟ್ಟಹಾಸ, ಇಂದು 15 ಜನರಿಗೆ ಪಾಸಿಟಿವ್
ದಾಖಲಾದ ಪ್ರಕರಣಗಳಲ್ಲಿ ಐವರು ಮಹಿಳೆಯರು, ಎಂಟು ಪುರುಷರು ಹಾಗೂ ಇಬ್ಬರು ಮಕ್ಕಳಿದ್ದಾರೆ. ಈವರೆಗೆ ಒಟ್ಟು 183 ಪ್ರಕರಣಗಳು ದಾಖಲಾಗಿವೆ.
ಪಿ. 1471ರ ಸಂಪರ್ಕವನ್ನು ಪತ್ತೆ ಹಚ್ಚಲಾಗುತ್ತಿದ್ದು, ಇವರು ಮಳವಳ್ಳಿ ಮೂಲದ ಅಧಿಕಾರಿ ಎನ್ನಲಾಗ್ತಿದೆ. ಈ ಅಧಿಕಾರಿ ಜೊತೆ ಸಂಪರ್ಕ ಹೊಂದಿದ್ದವರ ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಾಗುತ್ತಿದೆ.