ಕರ್ನಾಟಕ

karnataka

ETV Bharat / state

Mysugar factory : ರಾಜ್ಯ ಸರ್ಕಾರದಿಂದ ಮೈಶುಗರ್ ಕಾರ್ಖಾನೆಗೆ 50ಕೋಟಿ ಬಿಡುಗಡೆ ; ಸಚಿವ ಚೆಲುವರಾಯಸ್ವಾಮಿ

ಅಧಿಕಾರಕ್ಕೆ ಬಂದರೆ 15 ದಿನಗಳ ಒಳಗೆ ಮೈಶುಗರ್​ ಕಾರ್ಖಾನೆಯನ್ನು ಪ್ರಾರಂಭ ಮಾಡುತ್ತೇವೆ ಎಂದು ಹೇಳಿದ್ದೆವು - ಸಚಿವ ಚೆಲುವರಾಯಸ್ವಾಮಿ

ಸಚಿವ ಚೆಲುವರಾಯಸ್ವಾಮಿ
ಸಚಿವ ಚೆಲುವರಾಯಸ್ವಾಮಿ

By

Published : Jun 12, 2023, 7:38 PM IST

ಮತ್ತೆ ಮೈಶುಗರ್​ ಕಾರ್ಖಾನೆ ಪ್ರಾರಂಭ - ಸಚಿವ ಚೆಲುವರಾಯಸ್ವಾಮಿ

ಮಂಡ್ಯ :ರಾಜ್ಯದ ತುಂಬೆಲ್ಲಾ ಚುನಾವಣೆಗೂ ಮುನ್ನ ಕಾಂಗ್ರೆಸ್​ ಪಕ್ಷ ಘೋಷಣೆ ಮಾಡಿದ ಐದು ಗ್ಯಾರಂಟಿಗಳದ್ದೇ ಮಾತಾಗಿದ್ದು, ಸರ್ಕಾರದ ಜಾರಿ ಮಾಡುತ್ತಿರುವ ಒಂದೊಂದೆ ಗ್ಯಾರಂಟಿಗಳಿಂದ ಜನ ಸಂತೋಷವಾಗಿದ್ದಾರೆ. ಈ ಮಧ್ಯೆ ಸಕ್ಕರೆನಾಡು ಮಂಡ್ಯ ಜಿಲ್ಲೆಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಸಿಹಿಯಾದ ಸುದ್ದಿ ಸಿಕ್ಕಿದೆ.

ಈ ಕುರಿತು ಮಾತನಾಡಿದ ಕೃಷಿ ಹಾಗೂ ಮಂಡ್ಯ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ, ಈ ಹಿಂದೆ ನಾವು ಅಧಿಕಾರಕ್ಕೆ ಬಂದರೆ 15 ದಿನಗಳ ಒಳಗೆ ಮೈಶುಗರ್​ ಕಾರ್ಖಾನೆಯನ್ನು ಪ್ರಾರಂಭ ಮಾಡುತ್ತೇವೆ ಎಂಬ ಭರವಸೆಯನ್ನು ನೀಡಿದ್ದೆವು. ಅದರಂತೆ ಕಾಂಗ್ರೆಸ್​ ಪಕ್ಷ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚನೆಯಾಗಿದ್ದು, ಈ ಸಂದರ್ಭದಲ್ಲಿ ನಡೆದ ಮೊದಲ ಕ್ಯಾಬಿನೆಟ್ ನಂತರ 10 ದಿನಗಳ ಒಳಗೆ 50 ಲಕ್ಷ ರೂ. ಗಳನ್ನು ಮೈಶುಗರ್​ ಕಾರ್ಖಾನೆಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು, ಮತ್ತೆ ಕಾರ್ಖಾನೆಯನ್ನು ಪ್ರಾರಂಭ ಮಾಡುವುದಕ್ಕೆ ಅವಕಾಶ ಕೊಟ್ಟಿದ್ದೇವೆ ಎಂದರು.

ಸದ್ಯದಲ್ಲೇ ಹೊಸ ಶುಗರ್​ ಫ್ಯಾಕ್ಟರಿ ಪ್ರಾರಂಭ ಮಾಡುವುದಕ್ಕೂ ನಾವು ತೀರ್ಮಾನವನ್ನು ತೆಗೆದುಕೊಂಡಿದ್ದು, ಇದರ ಬಗ್ಗೆ ರೂಪುರೇಷಗಳನ್ನು ತಯಾರು ಮಾಡುವುದಕ್ಕೆ ಅಧಿಕಾರಿಗಳಿಗೆ ಹೇಳಿದ್ದೇವೆ. ಸದ್ಯದಲ್ಲೇ ಈ ತೀರ್ಮಾನಕ್ಕೆ ಬರುತ್ತೇವೆ. ಇನ್ನುಳಿದಂತೆ ಅದಷ್ಟು ಬೇಗ ಮಂಡ್ಯ ಜಿಲ್ಲೆಯ ಸಾಕಷ್ಟು ಅಭಿವೃದ್ಧಿಯ ಬಗ್ಗೆ ಗಮನಹರಿಸುವಂತ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ :Electricity Bill: ಹೊಸ ಮನೆ, ಹೊಸ ಬಾಡಿಗೆದಾರರಿಗೆ ಸರಾಸರಿ ವಿದ್ಯುತ್ ಬಳಕೆ 53 ಯೂನಿಟ್ ಎಂದು ಪರಿಗಣನೆ: ಸಚಿವ ಕೆ ಜೆ ಜಾರ್ಜ್

ABOUT THE AUTHOR

...view details