ಕರ್ನಾಟಕ

karnataka

ETV Bharat / state

ಅಗತ್ಯ ವಸ್ತು ಖರೀದಿಗೆ ನಡೆದುಕೊಂಡೇ ಹೋಗಬೇಕು, ಬೈಕ್ ತಂದ್ರೆ ಸೀಜ್​: ಮಂಡ್ಯ ಎಸ್​ಪಿ - Mandya SP Ashwini Warns

ಅಗತ್ಯ ವಸ್ತು ಖರೀದಿಗೆ ನಡೆದುಕೊಂಡು ಹೋಗಬೇಕು. ಬೈಕ್ ತೆಗೆದುಕೊಂಡು ರಸ್ತೆ ಮೇಲೆ ಬಂದ್ರೆ ಸೀಜ್ ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶ್ವಿನಿ ಬೈಕ್ ಸವಾರರಿಗೆ ಎಚ್ಚರಿಕೆ ನೀಡಿದ್ದಾರೆ.

Mandya SP Ashwini Warns to Bike riders
ಅಶ್ವಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

By

Published : May 9, 2021, 1:34 PM IST

ಮಂಡ್ಯ: ನಾಳೆಯಿಂದ ಅಗತ್ಯ ವಸ್ತುಗಳ ಖರೀದಿಗೆ ಬೈಕ್ ತೆಗೆದುಕೊಂಡು ಬಂದರೆ ಸೀಜ್ ಮಾಡಲಾಗುವುದು ಎಂದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶ್ವಿನಿ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಗತ್ಯ ವಸ್ತು ಖರೀದಿಗೆ ನಡೆದುಕೊಂಡು ಹೋಗಬೇಕು. ಬೈಕ್ ತೆಗೆದುಕೊಂಡು ರಸ್ತೆ ಮೇಲೆ ಬಂದ್ರೆ ಸೀಜ್ ಮಾಡಲಾಗುವುದು. ಅಲ್ಲದೇ ನಾಳೆಯಿಂದ ಸೀಜ್ ಮಾಡಿದ ಗಾಡಿಗಳನ್ನ ಕೋರ್ಟ್​ನಲ್ಲಿಯೇ ಬಿಡಿಸಿಕೊಳ್ಳಬೇಕಾಗುತ್ತದೆ ಎಂದು ಬೈಕ್ ಸವಾರರಿಗೆ ಎಚ್ಚರಿಕೆ ರವಾನಿಸಿದ್ದಾರೆ.

ಅಶ್ವಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಕರ್ಫ್ಯೂ ಘೋಷಣೆ ಬಳಿಕ ಮಾಸ್ಕ್ ಧರಿಸದಿದ್ದಕ್ಕೆ 16,776 ಕೇಸ್​ಗಳನ್ನು ದಾಖಲಿಸಲಾಗಿದೆ. ಇಲ್ಲಿಯವರೆಗೆ 717 ಬೈಕ್​ಗಳನ್ನ ಸೀಜ್ ಮಾಡಲಾಗಿದೆ. ನಾಳೆ ಜಿಲ್ಲೆಯಲ್ಲಿ 11 ಚೆಕ್ ಪೋಸ್ಟ್​​ಗಳನ್ನ ತೆರೆಯಲಾಗಿದ್ದು, ಕಂದಾಯ ಇಲಾಖೆಯ ಅಧಿಕಾರಿಗಳ ಜೊತೆ ನಿಗಾವಹಿಸಲಾಗುವುದು. ಸಾರ್ವಜನಿಕರು ಸಹಕಾರ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನವಿ ಮಾಡಿದರು.

ಕೊರೊನಾ ಎರಡನೇ ಅಲೆಗೆ 84 ಜನ ಪೊಲೀಸರಿಗೆ ಪಾಸಿಟಿವ್ ಬಂದಿದೆ. ಈ ಪೈಕಿ 22 ಜನರು ಚೇತರಿಸಿಕೊಂಡಿದ್ದು, 62 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದರು.

ABOUT THE AUTHOR

...view details