ಮಂಡ್ಯ:ಜಿಲ್ಲೆಯಲ್ಲಿ ರೈತರ ಹೋರಾಟಕ್ಕೆ ಕೈ ಜೋಡಿಸಿ ಮತ್ತು ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ದ ಧ್ವನಿ ಎತ್ತಿರುವ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಮಂಡ್ಯ ರಕ್ಷಣಾ ವೇದಿಕೆ ವತಿಯಿಂದ ಗೌರಿ ಹಬ್ಬದ ಉಡುಗೊರೆಯನ್ನು ಕಳುಹಿಸಲಾಗಿದೆ.
ಸಂಸದೆ ಸುಮಲತಾಗೆ ಹಬ್ಬದ ಉಡುಗೊರೆ ಕಳುಹಿಸಿದ ಮಂಡ್ಯ ರಕ್ಷಣಾ ವೇದಿಕೆ - ಮಂಡ್ಯ ರೈತರ ಹೋರಾಟ
ಮಂಡ್ಯ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಶಂಕರ್ ಬಾಬು ಸೇರಿದಂತೆ ಸಂಘಟನೆಯ ಸದಸ್ಯರು ಸೇರಿ ಮಂಡ್ಯದ ಸೊಸೆ ಸುಮಲತಾ ಅಂಬರೀಶ್ಗೆ ಹಬ್ಬದ ಉಡುಗೊರೆಯಾಗಿ ಸೀರೆ, ಬಳೆ ಸೇರಿದಂತೆ ಇನ್ನಿತರ ಬಾಗೀನ ವಸ್ತುಗಳನ್ನು ಕೋರಿಯರ್ ಮೂಲಕ ಕಳಿಸಿಕೊಟ್ಟಿದ್ದಾರೆ.
ಹಬ್ಬದ ಉಡುಗೊರೆ ಕಳುಹಿಸಿದ ಮಂಡ್ಯ ರಕ್ಷಣಾ ವೇದಿಕೆ
ಮಂಡ್ಯ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಶಂಕರ್ ಬಾಬು ಸೇರಿದಂತೆ ಸಂಘಟನೆಯ ಸದಸ್ಯರು ಸೇರಿ ಮಂಡ್ಯದ ಸೊಸೆ ಸುಮಲತಾ ಅಂಬರೀಶ್ಗೆ ಹಬ್ಬದ ಉಡುಗೊರೆಯಾಗಿ ಸೀರೆ, ಬಳೆ ಸೇರಿದಂತೆ ಇನ್ನಿತರ ಬಾಗೀನ ವಸ್ತುಗಳನ್ನು ಕೋರಿಯರ್ ಮೂಲಕ ಕಳಿಸಿಕೊಟ್ಟಿದ್ದಾರೆ. ಈ ವೇಳೆ ಹಬ್ಬದ ಶುಭಾಶಯ ಕೂಡ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಶಂಕರ್ ಬಾಬು, ಸಂಘಟನೆ ಸದಸ್ಯರಾದ ವೀಣಾಬಾಯಿ, ಬೀರಪ್ಪ, ಹರೀಶ್, ಚಂದ್ರಶೇಖರ್ ಉಪಸ್ಥಿತರಿದ್ದರು.