ಮಂಡ್ಯ: ಬೈಕ್ ಹಾಗೂ ಸಿಕ್ಕ ಸಿಕ್ಕ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಇಲ್ಲಿನ ಪೊಲೀಸರು ಯಶಸ್ವಿಯಾಗಿದ್ದಾರೆ. ಮಂಡ್ಯ ತಾಲೂಕಿನ ತಿಬ್ಬನಹಳ್ಳಿ ಗ್ರಾಮದ ಯತೀನ್(25), ವಿಜಯ್ ಕುಮಾರ್(30), ಕಾರ್ತಿಕ್(24) ಹಾಗೂ ಶಿವಕುಮಾರ್(29) ಬಂಧಿತ ಆರೋಪಿಗಳು.
ಬಂಧಿತ ಖದೀಮರು 26 ದ್ವಿಚಕ್ರ ವಾಹನ ಸೇರಿದಂತೆ ಹತ್ತಾರು ಮನೆಗಳ ಕಳ್ಳತನ ಮಾಡಿದ್ದರು. ಈ ಬಗ್ಗೆ ವಿವಿಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ತೀವ್ರಗೊಳಿಸಿದ್ದ ಮಂಡ್ಯ ಪೊಲೀಸರು, ಆರೋಪಿಗಳನ್ನು ಬಂಧಿಸಿ ಕಳ್ಳತನ ಮಾಡಿದ್ದ ಒಟ್ಟು 17 ಲಕ್ಷ ರೂ ಮೌಲ್ಯದ 26 ಬೈಕ್, ಅಪಾರ ಪ್ರಮಾಣದ ಚಿನ್ನದ ಒಡವೆ ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ.