ಮಂಡ್ಯ:ಸಂಘದ ಸದಸ್ಯರಿಗೆ ನಿವೇಶನ ಹಂಚಿಕೆ ವಿಚಾರದಲ್ಲಿ ನಡೆದಿದ್ದ ಬಹುದೊಡ್ಡ ಅವ್ಯವಹಾರ ಪ್ರಕರಣವನ್ನು ಮಂಡ್ಯ ಪೊಲೀಸರು ಬಯಲಿಗೆಳೆದಿದ್ದಾರೆ. ಗೋಲ್‌ಮಾಲ್ ಪ್ರಕರಣದಲ್ಲಿ ಕೋಟ್ಯಂತರ ರೂಪಾಯಿ ಹಣ ವಶಪಡಿಸಿಕೊಂಡಿದ್ದಾರೆ.
ಮಂಡ್ಯದ ಸರ್ಕಾರಿ ನೌಕರರ ಸಂಘವು ತಮ್ಮ ಸದಸ್ಯರಿಗೆ ನಿವೇಶನ ನೀಡುವ ಉದ್ದೇಶದಿಂದ 2004ರಲ್ಲಿ ಗೃಹ ನಿರ್ಮಾಣ ಸಮಿತಿ ರಚಿಸಿತ್ತು. ಆ ವೇಳೆ ಸಂಘದ ಅಧ್ಯಕ್ಷರಾಗಿದ್ದ ಟಿ.ಎಚ್.ರಾಮಕೃಷ್ಣ ಗೃಹ ನಿರ್ಮಾಣ ಸಮಿತಿಗೆ ಅಧ್ಯಕ್ಷರಾಗಿದ್ದರು. ಪ್ರತಿಯೊಬ್ಬ ಸದಸ್ಯರಿಂದಲೂ ಲಕ್ಷಾಂತರ ಹಣ ಕಟ್ಟಿಸಿಕೊಂಡು, ಕೋಣನಹಳ್ಳಿ ಬಳಿ ಜಮೀನು ಖರೀದಿಸಲಾಗಿತ್ತು. ಅಷ್ಟರಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ನಿರ್ಮಾಣಕ್ಕಾಗಿ ಲೇಔಟ್ ಉದ್ದೇಶಿದ ಜಾಗದಲ್ಲಿ 1,02,000 ಚದರ ಅಡಿ ಭೂಮಿಯನ್ನು ಸರ್ಕಾರ ಸ್ವಾಧೀನ ಪಡಿಸಿಕೊಂಡಿತ್ತು. ಇದರಿಂದ ನೌಕರರಿಗೆ ನಿವೇಶನ ಹಂಚುವ ಕಾರ್ಯಕ್ಕೆ ಗ್ರಹಣ ಹಿಡಿದಿತ್ತು. ಆದ್ರೆ ಸರ್ಕಾರ ಸ್ವಾಧೀನ ಪಡಿಸಿಕೊಂಡ ಜಾಗಕ್ಕೆ 11,36,42.375 ರೂ. ಪರಿಹಾರ ಘೋಷಿಸಿತ್ತು.
ಈ ನಡುವೆ ಸರ್ಕಾರಿ ನೌಕರರ ಸಂಘಕ್ಕೆ ಮತ್ತೊಬ್ಬರು ಅಧ್ಯಕ್ಷರಾಗಿ ಆಯ್ಕೆಯಾದರೂ ಸಹ ಗೃಹ ನಿರ್ಮಾಣ ಸಮಿತಿಯ ಲೆಕ್ಕಪತ್ರ, ದಾಖಲೆಗಳನ್ನು ಟಿ.ಎಚ್.ರಾಮಕೃಷ್ಣ ಹಸ್ತಾಂತರಿಸಿರಲಿಲ್ಲ. ಎಲ್ಲಾ ದಾಖಲಾತಿಗಳನ್ನು ಬಳಸಿಕೊಂಡು ಕರ್ನಾಟಕ ಗ್ರಾಮೀಣ ಬ್ಯಾಂಕ್ನಲ್ಲಿ ಹೊಸ ಖಾತೆ ತೆರೆದು 11,36,42.375 ರೂ. ಪರಿಹಾರದ ಹಣವನ್ನು ಜಮೆ ಮಾಡಿಸಿಕೊಂಡಿದ್ದಾರೆ.