ಮಂಡ್ಯ:ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲೂಕಿನಲ್ಲಿ ಮಹಿಳೆಯರಿಬ್ಬರ ಅರ್ಧ ದೇಹ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ವಿಳಾಸ ಹಾಗೂ ಆರೋಪಿಗಳ ಸುಳಿವು ನೀಡಿದವರಿಗೆ ಒಂದು ಲಕ್ಷ ರೂ ಬಹುಮಾನ ನೀಡುವುದಾಗಿ ಜಿಲ್ಲಾ ಪೊಲೀಸ್ ಇಲಾಖೆ ಘೋಷಣೆ ಮಾಡಿದೆ.
ಜೂ.7ರಂದು ಪಾಂಡವಪುರ ತಾಲೂಕಿನ ಬೇಬಿ ಗ್ರಾಮದ ಸಮೀಪ ಕೆರೆಯಲ್ಲಿ ಸುಮಾರು 30 ರಿಂದ 32 ವರ್ಷದ ಮಹಿಳೆಯ ಶವ ಪತ್ತೆಯಾಗಿತ್ತು. ಹಾಗೇ ಶ್ರೀರಂಗಪಟ್ಟಣ ತಾಲೂಕು ಮಾಡರಹಳ್ಳಿ ರಸ್ತೆಯ ಬಳಿ ಸಿಡಿಎಸ್ ನಾಲಿಗೆ ಸಂಪರ್ಕಿಸುವ ಸಾರೋಡು ಹಳ್ಳದ ಪಕ್ಕದ ಜಮೀನಿನಲ್ಲಿ 40 ರಿಂದ 45 ವರ್ಷ ಮಹಿಳೆಯ ಶವ ಸಿಕ್ಕಿತ್ತು. ಈ ಇಬ್ಬರನ್ನು ಬೇರೆಡೆ ಕೊಲೆ ಮಾಡಿ ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಶವಗಳನ್ನು ಕತ್ತರಿಸಿ ಎರಡೂ ದೇಹದ ಅರ್ಧಭಾಗವನ್ನು ನೀರಿನಲ್ಲಿ ಬೀಸಾಡಿ ಹೋಗಲಾಗಿತ್ತು.