ಮಂಡ್ಯ: ಸಂತೆ ನಡೆಸುತ್ತಿದ್ದ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಿಗೆ ಪೊಲೀಸರಿಂದ ಲಾಠಿ ಏಟು ಸಿಕ್ಕ ಘಟನೆ ಕೆ.ಆರ್. ಪೇಟೆ ತಾಲೂಕಿನ ಕಿಕ್ಕೇರಿಯಲ್ಲಿ ನಡೆದಿದೆ.
ಮಂಡ್ಯ ಸಂತೆಯಲ್ಲಿ ಕೋವಿಡ್ ನಿಯಮ ಮರೆತವ್ರಿಗೆ ಸಿಕ್ತು ಲಾಠಿ ಏಟು - mandya covid curfew news
ಗ್ರಾ.ಪಂ ಹಾಗೂ ಪೊಲೀಸ್ ಇಲಾಖೆಯಿಂದ ಸಂತೆ ನಡೆಸದಂತೆ ಆದೇಶ ನೀಡಿದ್ದರೂ ಕೂಡ ಲೆಕ್ಕಿಸದೆ ಇಂದು ಸಂತೆ ನಡೆಸಿ ವ್ಯಾಪಾರ-ವಹಿವಾಟು ನಡೆಸುತ್ತಿದ್ದವರಿಗೆ ಪಿಎಸ್ಐ ನವೀನ್ ಲಾಠಿ ರುಚಿ ತೋರಿಸಿದ್ದಾರೆ.
ಮಂಡ್ಯ ಸಂತೆಯಲ್ಲಿ ನಿಯಮ ಮರೆತವ್ರಿಗೆ ಸಿಕ್ತು ಲಾಠಿ ಏಟು!
ಸಂತೆಯಲ್ಲಿ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಸಾಮಾಜಿಕ ಅಂತರ ಮರೆತಿದ್ದರು. ಗ್ರಾ.ಪಂ ಹಾಗೂ ಪೊಲೀಸ್ ಇಲಾಖೆಯಿಂದ ಸಂತೆ ನಡೆಸದಂತೆ ಆದೇಶ ನೀಡಿದ್ದರೂ ಕೂಡ ಲೆಕ್ಕಿಸದೇ ಬೆಳಗ್ಗೆ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಇದನ್ನೂ ಓದಿ:ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ: ಪೊಲೀಸರಿಂದ ದಂಡದ ಬಿಸಿ