ಕರ್ನಾಟಕ

karnataka

ETV Bharat / state

ಕಾರಿನಿಂದ ಡೀಸೆಲ್ ಹೊರ ತೆಗೆಯುವಾಗ ಅಗ್ನಿ ಅವಘಡ: ವ್ಯಕ್ತಿಯ ಎದೆ ಭಾಗಕ್ಕೆ ಗಂಭೀರ ಗಾಯ - fire accident in Mandya petrol Bunk while Changing diesel

ಕಾರಿನ ಇಂಜಿನ್​ನಿಂದ ಡೀಸೆಲ್ ಹೊರ ತೆಗೆಯವಾಗ ಅಗ್ನಿ ಅವಘಡ ಸಂಭವಿಸಿ ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಗಂಭೀರ ಗಾಯವಾಗಿದೆ.

Mandya Petrol bunk staff injured in fire accident
ವ್ಯಕ್ತಿಯ ಎದೆಭಾಗಕ್ಕೆ ಗಂಭೀರ ಗಾಯ

By

Published : Feb 2, 2021, 6:21 PM IST

ಮಂಡ್ಯ: ಪೆಟ್ರೋಲ್ ಕಾರಿಗೆ ತಪ್ಪಾಗಿ ಡೀಸೆಲ್ ಹಾಕಿದ ಹಿನ್ನೆಲೆ ಡೀಸೆಲ್ ಹೊರ ತೆಗೆಯುವಾಗ ಅಗ್ನಿ ಅವಘಢ ಸಂಭವಿಸಿ ವ್ಯಕ್ತಿಯೊಬ್ಬನ ಎದೆ ಭಾಗ ಸುಟ್ಟು ಹೋಗಿರುವ ಘಟನೆ ನಗರದಲ್ಲಿ ನಡೆದಿದೆ.

ಮಂಡ್ಯ ನಗರದ ಹೊನ್ನಯ್ಯ ಬಡಾವಣೆಯ ಗೌರಿ ಶಂಕರ್ ಗಾಯಗೊಂಡ ವ್ಯಕ್ತಿ. ಈತ ಮಂಡ್ಯದ ಫ್ಯಾಕ್ಟರಿ ಸರ್ಕಲ್ ಬಳಿಯ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್​​ನಲ್ಲಿ ಕೆಲಸ ಮಾಡುತ್ತಿದ್ದಾನೆ. ಸೋಮವಾರ ರಾತ್ರಿ ಪೆಟ್ರೋಲ್ ಬದಲು ಕಾರಿಗೆ ಡೀಸೆಲ್ ಹಾಕಲಾಗಿತ್ತು. ಕಾರು ಮಾಲೀಕ ಕಾರಿಗೆ ಹಾಕಿದ ಡೀಸೆಲ್ ವಾಪಸ್ ತೆಗೆಯುವಂತೆ ತಿಳಿಸಿದ್ದ. ಹೀಗಾಗಿ ಕಾರಿನ ಇಂಜಿನ್ ಬಳಿ ಡೀಸೆಲ್ ಹೊರ ತೆಗೆಯಲಾಗ್ತಿತ್ತು. ಈ ವೇಳೆ ಡೀಸೆಲ್ ಇಂಜಿನ್ ಮೇಲೆ ಚೆಲ್ಲಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ. ಘಟನೆಯಿಂದ ಗೌರಿ ಶಂಕರ್ ಎದೆಯ ಭಾಗ ಸುಟ್ಟು ಹೋಗಿದೆ.

ಓದಿ :ನಿನ್ನೆ ನಾಪತ್ತೆಯಾಗಿದ್ದ ಎರಡು ವರ್ಷದ ಬಾಲಕ ಇಂದು ಶವವಾಗಿ ಪತ್ತೆ

ಗಾಯಾಳು ಗೌರಿ ಶಂಕರ್​​ಗೆ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

For All Latest Updates

ABOUT THE AUTHOR

...view details