ಮಂಡ್ಯ:ಕೇಂದ್ರ ಬಜೆಟ್ ಬಗ್ಗೆ ಅಷ್ಟು ಗಮನ ಹರಿಸದ ಜಿಲ್ಲೆಯ ಜನತೆ, ರಾಜ್ಯ ಬಜೆಟ್ ಮೇಲೆ ಬಹಳಷ್ಟು ನಿರೀಕ್ಷೆ ಹೊಂದಿದ್ದಾರೆ. ಅದರಲ್ಲೂ ಕಬ್ಬು ಬೆಳೆಗಾರರ ಸಮಸ್ಯೆ ನಿವಾರಣೆಗೆ ಈ ಬಜೆಟ್ ನಲ್ಲಿ ಉತ್ತರ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.
ರಾಜ್ಯ ಬಜೆಟ್ ನಲ್ಲಿ ಮೈಶುಗರ್, ಪಿಎಸ್ಎಸ್ಕೆಗೆ ಮರುಜೀವ ಕೊಡುತ್ತಾರಾ ಬಿಎಸ್ವೈ? - ಕರ್ನಾಟಕ ಬಜೆಟ್
ಕೇಂದ್ರ ಬಜೆಟ್ ಬಗ್ಗೆ ಅಷ್ಟು ಗಮನ ಹರಿಸದ ಜಿಲ್ಲೆಯ ಜನತೆ, ರಾಜ್ಯ ಬಜೆಟ್ ಮೇಲೆ ಬಹಳಷ್ಟು ನಿರೀಕ್ಷೆ ಹೊಂದಿದ್ದಾರೆ. ಅದರಲ್ಲೂ ಕಬ್ಬು ಬೆಳೆಗಾರರ ಸಮಸ್ಯೆ ನಿವಾರಣೆಗೆ ಈ ಬಜೆಟ್ ನಲ್ಲಿ ಉತ್ತರ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.
ಸರ್ಕಾರಿ ಸ್ವಾಮ್ಯದ ಮೈಶುಗರ್ ಹಾಗೂ ಸಹಕಾರ ಕ್ಷೇತ್ರದ ಪಿಎಸ್ಎಸ್ಕೆ ಉನ್ನತೀಕರಣದ ಬಗ್ಗೆ ನಿರೀಕ್ಷೆ ಇದ್ದು, ಸಮ್ಮಿಶ್ರ ಸರ್ಕಾರದ ಘೋಷಣೆಯಂತೆ ಬಜೆಟ್ ನಲ್ಲಿ ಯಡಿಯೂರಪ್ಪ ಜಿಲ್ಲೆಗೆ ಮತ್ತಷ್ಟು ಮಹತ್ವ ನೀಡ್ತಾರಾ ಎಂಬ ಪ್ರಶ್ನೆ ಕುತೂಹಲ ಮೂಡಿಸಿದೆ.
ಈ ಬಾರಿಯಾದರೂ ಜಿಲ್ಲೆಯ ಜೀವನಾಡಿಯಾದ ಮೈಶುಗರ್ ಹಾಗೂ ಪಿ.ಎಸ್.ಎಸ್.ಕೆ ಕಾರ್ಖಾನೆ ಕಾರ್ಯಾರಂಭ ಮಾಡಬಹುದು ಎಂಬ ನಿರೀಕ್ಷೆ ಇದೆ. ಈಗಾಗಲೇ ಸರ್ಕಾರ ಪಿಎಸ್ಎಸ್ ಕೆ ಕಾರ್ಖಾನೆಯನ್ನು ಖಾಸಗಿಯವರಿಗೆ 40 ವರ್ಷಗಳ ಗುತ್ತಿಗೆ ನೀಡಲು ನಿರ್ಧಾರ ಮಾಡಿದೆ. ಹೀಗಾಗಿ ಈ ಬಗ್ಗೆ ಬಜೆಟ್ ನಲ್ಲಿ ಘೋಷಣೆ ಮಾಡಬಹುದು ಎಂಬ ನಿರೀಕ್ಷೆ ಇದೆ ಎನ್ನುತ್ತಾರೆ ಸ್ಥಳೀಯರು.