ಮಂಡ್ಯ: ಕೊರೊನಾ ಆತಂಕದ ನಡುವೆಯೂ ಜಿಲ್ಲೆಯ ಜನರು ನಿಟ್ಟುಸಿರುವ ಬಿಡುವ ಫಲಿತಾಂಶ ಭಾನುವಾರ ಬಂದಿದೆ. ಮಳವಳ್ಳಿ ಹಾಗೂ ಮಂಡ್ಯದ 111 ವ್ಯಕ್ತಿಗಳ ವರದಿ ನೆಗೆಟಿವ್ ಬಂದಿದ್ದು, ಒಂದಿಷ್ಟು ಆತಂಕ ದೂರವಾಗಿದೆ.
ತಬ್ಲಿಘಿಗಳು ಹಾಗೂ ನಂಜನಗೂಡಿನ ಜುಬಿಲಂಟ್ ನಂಜಿನ ಜೊತೆ ಸಂಪರ್ಕ ಹೊಂದಿದ್ದ 111 ಮಂದಿಯ ವರದಿ ನೆಗೆಟಿವ್ ಬಂದಿದೆ. ಒಟ್ಟಾರೆ ಜಿಲ್ಲೆಯ 357 ಮಂದಿ ಫಲಿತಾಂಶ ಜಿಲ್ಲಾಡಳಿತದ ಕೈಗೆ ತಲುಪಿದೆ.
ಜಿಲ್ಲೆಯ ಫಲಿತಾಂಶ ನೋಡುವುದಾದರೆ:
ಸಂಗ್ರಹಿಸಲಾದ ಒಟ್ಟು ಮಾದರಿಗಳ ಸಂಖ್ಯೆ-482,
ದೃಢಪಟ್ಟ ಕೊರೊನಾ ರೋಗಿಗಳು-12,
ನೆಗೆಟಿವ್ ಫಲಿತಾಂಶ-357,