ಮಂಡ್ಯ:ಪುತ್ರ ನಿಖಿಲ್ ಪರ ಮತಯಾಚನೆ ಮಾಡಿದ ಸಿಎಂ ಕುಮಾರಸ್ವಾಮಿ ಅವರಿಗೆ ದೃಷ್ಟಿ ತಾಗಬಾರದು ಎಂದು ಅಭಿಮಾನಿಗಳು ದೃಷ್ಟಿ ತೆಗೆದ ಪ್ರಸಂಗ ನಡೆದಿದೆ.
ಮದ್ದೂರು ಪಟ್ಟಣದ ಶಿವಪುರದಲ್ಲಿ ಕಾರ್ತಿಕ್ ಗೌಡ ಸೇರಿ ಜೆಡಿಎಸ್ ಕಾರ್ಯಕರ್ತರು 5 ಬೂದುಗುಂಬಳ ಹಾಗೂ 101 ಈಡುಗಾಯಿ ಹೊಡೆದು ದೃಷ್ಟಿ ತೆಗೆದರು.

ಸಿಎಂ ಶಿವಪುರಕ್ಕೆ ಆಗಮಿಸುತ್ತಿದ್ದಂತೆ ಪ್ರಚಾರ ವಾಹನವನ್ನು ನಿಲ್ಲಿಸಿ, ದೃಷ್ಟಿ ತೆಗೆದ ನಂತರ ಮುಂದಕ್ಕೆ ಹೋಗಲು ಅನುವು ಮಾಡಿಕೊಟ್ಟರು.
ಸಿಎಂ ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಲ್ಲಿ ಎರಡು ದಿನಗಳ ಭರ್ಜರಿ ಪ್ರಚಾರ ಮಾಡಿದ್ದು, ಶ್ರೀರಂಗಪಟ್ಟಣ, ಮದ್ದೂರು ಹಾಗೂ ಮಳವಳ್ಳಿ ಕ್ಷೇತ್ರಗಳಲ್ಲಿ ರೋಡ್ ಶೋ ಮೂಲಕ ಪುತ್ರನ ಪರ ಮತಯಾಚನೆ ಮಾಡಿದರು.