ಕರ್ನಾಟಕ

karnataka

ETV Bharat / state

ನಿವೃತ್ತಿಯಾಗಿ ತವರಿಗೆ ಬಂದ ಯೋಧನಿಗೆ ಅದ್ಧೂರಿ ಸ್ವಾಗತ ಕೋರಿದ ಮಂಡ್ಯ ಜನತೆ - ಡಿ.ಕೆ. ಸತೀಶ್​ ಎಂಬ ನಿವೃತ್ತ ಯೋಧ

ತಾಲೂಕಿನ  ಕೊತ್ತತ್ತಿ ಗ್ರಾಮದ ಡಿ.ಕೆ.ಸತೀಶ್ ಎಂಬ ಯೋಧ ಸುಮಾರು  20 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾಗಿ ಇಂದು ತವರಿಗೆ ಆಗಮಿಸಿದರು. ವಿಚಾರ ತಿಳಿದ ಜನತೆ ನಿವೃತ್ತ ಯೋಧ ಸತೀಶ್​ರನ್ನು ರೈಲ್ವೆ ನಿಲ್ದಾಣದಲ್ಲಿ ಅದ್ಧೂರಿಯಾಗಿ  ಬರಮಾಡಿಕೊಂಡರು.

retired soldier

By

Published : Nov 2, 2019, 9:49 PM IST

ಮಂಡ್ಯ:ಸುಮಾರು 20 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ ತವರಿಗೆ ಮರಳಿದ ಡಿ.ಕೆ.ಸತೀಶ್​ ಎಂಬ ನಿವೃತ್ತ ಯೋಧನಿಗೆ ಸಕ್ಕರೆ ನಗರಿಯ ಜನತೆ ಅದ್ಧೂರಿಯಾಗಿ ಬರಮಾಡಿಕೊಂಡಿದ್ದು, ನಗರದ ಪ್ರಮುಖ ಬೀದಿಗಳಲ್ಲಿ ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡುವ ಮೂಲಕ ಸ್ವಾಗತಿಸಿದರು.

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಬಂದ ಯೋಧನಿಗೆ ಅದ್ದೂರಿ ಸ್ವಾಗತ

ತಾಲೂಕಿನ ಕೊತ್ತತ್ತಿ ಗ್ರಾಮದ ಡಿ.ಕೆ.ಸತೀಶ್ ಎಂಬ ಯೋಧ ಸುಮಾರು 20 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾಗಿ ಇಂದು ತವರಿಗೆ ಆಗಮಿಸಿದರು. ವಿಚಾರ ತಿಳಿದ ಜನತೆ ನಿವೃತ್ತ ಯೋಧ ಸತೀಶ್​ರನ್ನು ರೈಲ್ವೆ ನಿಲ್ದಾಣದಲ್ಲಿ ಅದ್ಧೂರಿಯಾಗಿ ಬರಮಾಡಿಕೊಂಡರು.

ಬಳಿಕ ನಾಗರಿಕರ ವೇದಿಕೆ ವತಿಯಿಂದ ಬೆಳ್ಳಿ ರಥದಲ್ಲಿ ನಿವೃತ್ತ ಯೋಧ ಸತೀಶ್​ರನ್ನು ಸುಮಾರು ಕಿಲೋ ಮೀಟರ್​ವರೆಗೂ ಮೆರವಣಿಗೆ ಮಾಡಿದ್ದು, ವಿವೇಕಾನಂದ ರಸ್ತೆ, ಅಂಬೇಡ್ಕರ್ ರಸ್ತೆ, ಬನ್ನೂರು ರಸ್ತೆ ಮೂಲಕ ಸ್ವಗ್ರಾಮಕ್ಕೆ ಕರೆದುಕೊಂಡು ಹೋಗಲಾಯಿತು. ದಾರಿಯದ್ದಕ್ಕೂ ನಾಗರಿಕರು ಸತೀಶರಿಗೆ ಹೂವಿನ ಹಾರ ಹಾಕಿ ಸನ್ಮಾನಿಸಿ ಅಭಿನಂದಿಸುವ ಮೂಲಕ ನಿವೃತ್ತ ಸೈನಿಕನಿಗೆ ಗೌರವ ಸಲ್ಲಿಸಿದರು.

ABOUT THE AUTHOR

...view details