ಮಂಡ್ಯ:ಕೆ.ಆರ್.ಎಸ್‌ನಿಂದ ನಾಲೆಗಳಿಗೆ ನೀರು ಬಿಡುವ ವಿಚಾರವಾಗಿ ಅಧಿಕಾರಿಗಳು ಹಾಗೂ ರೈತರ ನಡುವೆ ಹಗ್ಗಜಗ್ಗಾಟ ನಡೆದಿದೆ. ಸಂಧಾನಕ್ಕೆ ಬಂದ ಅಧಿಕಾರಿಗಳಿಗೆ ರೈತರು ದಿಗ್ಬಂಧನ ಹಾಕಿ, ಧರಣಿ ಮಧ್ಯದಲ್ಲೇ ಕೂರಿಸಿಕೊಂಡು ನೀರಿಗಾಗಿ ಹಕ್ಕು ಮಂಡಿಸಿದ್ದಾರೆ.
ನೀರಿಗಾಗಿ ಅಹೋರಾತ್ರಿ ಧರಣಿ... ಸಂಧಾನಕ್ಕೆ ಬಂದ ಅಧಿಕಾರಿಗಳಿಗೆ ದಿಗ್ಬಂಧನ - ಪ್ರತಿಭಟನೆ
ಮಂಡ್ಯದಲ್ಲಿ ಕಾವೇರಿ ನೀರಾವರಿ ನಿಗಮದ ಮುಂದೆ ಐದು ದಿನಗಳಿಂದ ರೈತರು ಆಹೋ ರಾತ್ರಿ ಹೋರಾಟ ನಡೆಸುತ್ತಿದ್ದಾರೆ.

ನಗರದ ಕಾವೇರಿ ನೀರಾವರಿ ನಿಗಮದ ಮುಂದೆ ಐದು ದಿನಗಳಿಂದ ರೈತರು ಆಹೋ ರಾತ್ರಿ ಹೋರಾಟ ನಡೆಸುತ್ತಿದ್ದಾರೆ. ಪ್ರತಿಭಟನಾನಿರತ ರೈತರ ಜೊತೆ ಜಿಲ್ಲಾಡಳಿತ ಜಿಲ್ಲಾ ಉಸ್ತುವಾರಿ ಸಚಿವರ ಗೈರಿನಲ್ಲಿ ಸಂಧಾನಕ್ಕೆ ಇಳಿದಿದೆ. ಧರಣಿ ಸ್ಥಳಕ್ಕೆ ಸಂಧಾನಕ್ಕೆ ಬಂದ ಹೆಚ್ಚುವರಿ ಡಿಸಿ ಯೋಗೇಶ್ ಮತ್ತು ಕೆ.ಆರ್.ಎಸ್ ಎಇಇ ಧರ್ಮೇಂದ್ರ ಪ್ರತಿಭಟನೆಯನ್ನು ಕೈ ಬಿಡುವಂತೆ ಮನವಿ ಮಾಡಿದರು. ಅಧಿಕಾರಿಗಳ ಮನವೊಲಿಕೆಗೂ ಬಗ್ಗದ ರೈತ ಮುಖಂಡರು ಅಹೋರಾತ್ರಿ ಧರಣಿ ಕುಳಿತು ಹೋರಾಟ ಮುಂದುವರೆಸಿದ್ದಾರೆ.
ಇನ್ನು ಸಂಧಾನಕ್ಕೆ ಬಂದ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಧರಣಿ ನಿರತ ರೈತರು ದಿಗ್ಭಂದನ ವಿಧಿಸಿದರು. ಸ್ಥಳಕ್ಕೆ ರಾಜ್ಯ ಸರ್ಕಾರದ ಕಾರ್ಯದರ್ಶಿಯನ್ನು ಕರೆಸುವಂತೆ ಒತ್ತಾಯ ಮಾಡಿದರು. ಸರ್ಕಾರದ ಕಾರ್ಯದರ್ಶಿಯಿಂದ ಸ್ಪಷ್ಟನೆ ಕೊಡಿಸಿ ಎಂದು ರೈತರು ಪಟ್ಟು ಹಿಡಿದರು. ಇದರಿಂದ ಅಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದು ರೈತರ ಬೇಡಿಕೆಯನ್ನು ಮುಂದಿಟ್ಟಿದ್ದಾರೆ