ಮಂಡ್ಯ:ಮೈಶುಗರ್ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿ ಪ್ರಾರಂಭಿಸುವ ಪ್ರಸ್ತಾವ ರಾಜ್ಯ ಬಜೆಟ್‌ನಲ್ಲಿ ಮಾಡದಿರುವುದನ್ನು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಖಂಡಿಸುತ್ತದೆ ಎಂದು ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ತಿಳಿಸಿದರು.
ಖಾಸಗೀಕರಣ ಉದ್ದೇಶದಿಂದಲೇ ಮೈಶುಗರ್ ಕಾರ್ಖಾನೆ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಿಲ್ಲ! ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಶುಗರ್ ಕಾರ್ಖಾನೆ ಆರಂಭಕ್ಕೆ ಸಂಬಂಧಿಸಿದಂತೆ ಬಜೆಟ್‌ನಲ್ಲಿ ಪ್ರಸ್ತಾಪ ಮಾಡದಿರುವುದು ಜಿಲ್ಲೆಗೆ ಮಾಡಿದ ದ್ರೋಹವಾಗಿದೆ. ಸುಸ್ಥಿತಿಯಲ್ಲಿರುವ ಕಾರ್ಖಾನೆಯನ್ನು ಖಾಸಗೀಕರಣ ಮಾಡುವ ಉದ್ದೇಶದಿಂದಲೇ ಕಾರ್ಖಾನೆ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾವ ಮಾಡಿಲ್ಲ. ಸರ್ಕಾರ ಖಾಸಗೀಕರಣ ಮಾಡುವ ಹಠಕ್ಕೆ ಬಿದ್ದಿದೆ ಎಂದು ಆರೋಪಿಸಿದರು.
ಕಾರ್ಖಾನೆ ವಿಚಾರಕ್ಕೆ ಸಂಬಂಧಿಸಿದಂತೆ ಉಸ್ತುವಾರಿ ಸಚಿವರು ಒಮ್ಮೊಮ್ಮೆ ಒಂದು ರೀತಿಯ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಕಾರ್ಖಾನೆ ಹಿನ್ನೆಲೆ ವಿಚಾರವನ್ನು ಅರ್ಥ ಮಾಡಿಕೊಂಡು ಮಾತನಾಡಬೇಕು ಎಂದು ಎಚ್ಚರಿಕೆ ನೀಡಿದರು.
ಓದಿ:ಬರಿಗೈನಲ್ಲೇ ಚಿರತೆ ಸೆರೆ ಹಿಡಿದ ಮಂಡ್ಯ ಯುವಕರು: ವೈರಲ್ ವಿಡಿಯೋ
ಸರ್ಕಾರ ಕಾರ್ಖಾನೆಗೆ ನೂರಾರು ಕೋಟಿ ರೂಪಾಯಿ ನೀಡಿದೆ. ಮತ್ತೆ ಅದನ್ನು ಬ್ಯಾಲೆನ್ಸಿಂಗ್ ಮಾಡಿದೆ. ಪಾಂಡವಪುರ ಕಾರ್ಖಾನೆಯನ್ನು ಖಾಸಗಿಯವರಿಗೆ ನೀಡಿದ್ದು, 1 ಲಕ್ಷ ಟನ್ ಕಬ್ಬು ಅರೆದು ನಿಲ್ಲಿಸಿದ್ದಾರೆ. ಆ ಸ್ಥಿತಿಗೆ ಮೈಶುಗರ್ ಬರಬಾರದು. ಸರ್ಕಾರಿ ಸ್ವಾಮ್ಯದಲ್ಲಿ ಕಾರ್ಖಾನೆ ಆರಂಭಿಸುವುದು, ಇದರ ಪರ ಧ್ವನಿ ಎತ್ತುವುದು ಜಿಲ್ಲೆಯ ಶಾಸಕರ ಕರ್ತವ್ಯವಾಗಿದೆ ಎಂದು ಹೇಳಿದರು.