ಕರ್ನಾಟಕ

karnataka

ETV Bharat / state

ಮಂಡ್ಯ: ಕನ್ಸರ್‌ವೆನ್ಸಿ ಗಲ್ಲಿಗಳ ತೆರವು: ಸಾಮಾನ್ಯ ಸಭೆಯಲ್ಲಿ ಗಹನ ಚರ್ಚೆ - ಅಶೋಕನಗರದಲ್ಲಿ ಕನ್ನರ್‌ವೆನ್ಸಿ ಗಲ್ಲಿಗಳನ್ನು ತೆರವು

ನಗರಸಭೆ ವ್ಯಾಪ್ತಿಯಲ್ಲಿ ಸರ್ಕಾರಿ ನಿವೇಶನ ಒತ್ತುವರಿಯಾಗಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಮೊದಲ ಹಂತದಲ್ಲಿ ಅಶೋಕನಗರದಲ್ಲಿ ಕನ್ನರ್‌ವೆನ್ಸಿ ಗಲ್ಲಿಗಳನ್ನು ತೆರವು ಮಾಡಲಾಗಿದೆ.

Mandya municipolity general meeting evacuation of Conservancy
ಮಂಡ್ಯ: ಕನ್ಸರ್‌ವೆನ್ಸಿ ಗಲ್ಲಿಗಳ ತೆರವು ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚೆ...

By

Published : Dec 24, 2020, 8:15 PM IST

ಮಂಡ್ಯ: ನಗರದಲ್ಲಿನ ಕನ್ಸರ್‌ವೆನ್ಸಿ ಗಲ್ಲಿಗಳ ತೆರವು ಬಗ್ಗೆ ಸಾಮಾನ್ಯ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆದು, ಹಂತಹಂತವಾಗಿ ತೆರವುಗೊಳಿಸಲು ನಿರ್ಣಯಿಸಲಾಯಿತು.

ಕನ್ಸರ್‌ವೆನ್ಸಿ ಗಲ್ಲಿಗಳ ತೆರವು ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚೆ

ನಗರಸಭೆ ಧರಣಪ್ಪ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮೊದಲ ಸಾಮಾನ್ಯ ಸಭೆಯು ಅಧ್ಯಕ್ಷ ಮಂಜು ಅಧ್ಯಕ್ಷತೆಯಲ್ಲಿ ನಡೆಯಿತು. ಸದಸ್ಯ ಎಂ.ಪಿ.ಅರುಣ್‌ಕುಮಾರ್‌ ಅಶೋಕ ನಗರದ 3ನೇ ಮುಖ್ಯರಸ್ತೆಯಲ್ಲಿರುವ ಕನ್ಸರ್‌ವೆನ್ಸಿ ಗಲ್ಲಿಯನ್ನು ತೆರವು ಗೊಳಿಸಿ ಆರಂಭ ಶೂರತ್ವ ಮೆರೆಯಲಾಯಿತು. ಇದರಿಂದ ನಗರಸಭೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದೆ ಎಂಬ ಸಾರ್ವಜನಿಕರ ಟೀಕೆಗೂ ಗುರಿಯಾಗಬೇಕಾಯಿತು. ಕನ್ಸರ್ ವೆನ್ಸಿ ಗಲ್ಲಿಗಳ ಜಾಗವನ್ನು ಆಕ್ರಮಿಸಿಕೊಂಡು ಹಲವರು ದೊಡ್ಡ - ದೊಡ್ಡ ಕಟ್ಟಡ ಕಟ್ಟಿಕೊಂಡು ಸಾವಿರಾರು ರೂ. ಬಾಡಿಗೆ ಪಡೆಯುತ್ತಿದ್ದಾರೆ. ಇದರಿಂದ ನಗರಸಭೆಗೆ ಯಾವುದೇ ಪ್ರಯೋಜನ ಇಲ್ಲದಂತಾಗಿದೆ ಎಂದರು.

ನಗರಸಭೆ ವ್ಯಾಪ್ತಿಯಲ್ಲಿ ಎಲ್ಲ ಒತ್ತುವರಿಯನ್ನು ತೆರವುಗೊಳಿಸಿ, ಇಲ್ಲವೇ ಕಾನೂನು ಪ್ರಕಾರ ಸಂಬಂಧಿಸಿದವರಿಗೆ ನೀಡಿ. ಅವರಿಂದ ಕಿಮ್ಮತ್ತು ಕಟ್ಟಿಸಿಕೊಂಡು ನಿರಂತರವಾಗಿ ಅದರಿಂದ ತೆರಿಗೆ ಬರುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

ಓದಿ: ಸುಧಾಕರ್ ರಾಜ್ಯದ ಜನರ ಬಗ್ಗೆ ಕಾಳಜಿ ಇಲ್ಲದ ನಾಲಾಯಕ್ ಮಂತ್ರಿ: ಡಿ.ಕೆ.ಸುರೇಶ್

ಇದಕ್ಕೆ ಉತ್ತರಿಸಿದ ಪೌರಾಯುಕ್ತ ಲೋಕೇಶ್, ನಗರ ಸಭೆ ವ್ಯಾಪ್ತಿಯಲ್ಲಿ ಸರ್ಕಾರಿ ನಿವೇಶನ ಒತ್ತುವರಿಯಾಗಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಮೊದಲ ಹಂತದಲ್ಲಿ ಅಶೋಕನಗರದಲ್ಲಿ ಕನ್ನರ್‌ವೆನ್ಸಿ ಗಲ್ಲಿಗಳನ್ನು ತೆರವು ಮಾಡಲಾಗಿದೆ. ಸದಸ್ಯರು ಸಹಕಾರ ನೀಡಿದಲ್ಲಿ ಹಂತ ಹಂತವಾಗಿ ಎಲ್ಲ ಕನ್ಸರ್‌ವೆನ್ಸಿ ಗಲ್ಲಿಗಳನ್ನೂ ತೆರವುಗೊಳಿಸುವುದಷ್ಟೇ ಅಲ್ಲದೇ, ರಸ್ತೆ ಸೇರಿದಂತೆ ಇತರ ನಗರ ಸಭೆ ಜಾಗಗಳನ್ನು ತೆರವು ಮಾಡಲಾಗುವುದು ಎಂದು ಸಮಜಾಯಿಸಿ ನೀಡಿದರು. ಇದಕ್ಕೆ ಎಲ್ಲ ಸದಸ್ಯರು ಸಹಮತ ಸೂಚಿಸಿದರು.

ನಿವೇಶನ ಸ್ವಾಧೀನಕ್ಕೆ ಆದೇಶ:

ನಗರಸಭೆ ವ್ಯಾಪ್ತಿಯಲ್ಲಿ 1978-79 ಹಾಗೂ 82-84ರಲ್ಲಿ ನಗರ ವ್ಯಾಪ್ತಿಯಲ್ಲಿ 2,327 ನಿವೇಶನಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿತ್ತು. ಸಂಬಂಧಿಸಿದವರು ನಗರಸಭೆಗೆ ಕಿಮುತ್ತು ಕಟ್ಟಿ ಹಕ್ಕುಪತ್ರ ಪಡೆಯುವಂತೆ ಸೂಚಿಸಲಾಗಿತ್ತು. ಈ ಪೈಕಿ 1,464 ಫಲಾನುಭವಿಗಳು ಕಿಮ್ಮತ್ತು ಕಟ್ಟಿ ಆ ಹಕ್ಕುಪತ್ರ ಪಡೆದಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಪೌರಾಡಳಿತ ಇಲಾಖೆ ಅಂತಹ ನಿವೇಶನಗಳನ್ನು ಸ್ವಾಧೀನಕ್ಕೆ ಪಡೆಯುವಂತೆ ಆದೇಶ ನೀಡಿದೆ. ಈ ಬಗ್ಗೆ ಕಾಲಾವಕಾಶ ನೀಡುವಂತೆ ನಿರ್ಣಯ ಕೈಗೊಂಡರು.

ಕುಡಿಯುವ ನೀರಿನ ಮಾಸಿಕ ದರವನ್ನು 160 ರೂ. ಗೆ ನಿಗದಿಗೊಳಿಸುವ ಪ್ರಸ್ತಾವಕ್ಕೆ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು. ವಿಷಯ ಪ್ರಸ್ತಾಪಿಸಿದ ನಗರಸಭೆ ಅಧ್ಯಕ್ಷ ಎಚ್‌.ಎಸ್‌.ಮಂಜು, 2017–18 ರಿಂದ ಮಾಸಿಕ 282 ರೂ. ನೀರಿನ ದರ ನಿಗದಿಪಡಿಸಲು ತೀರ್ಮಾನಿಸಲಾಗಿತ್ತು.

ಇದನ್ನು 2018ರ ಏ.1 ರಿಂದ ಜಾರಿ ಗೊಳಿಸಲಾಗಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ನಗರದ ಸಾರ್ವಜನಿಕರು ಧರಣಿ, ಪ್ರತಿಭಟನೆ ಮಾಡಿದರು. ನಗರಸಭೆ ಎಸ್‌ಎಫ್‌ಸಿ ಅನುದಾನದಲ್ಲಿ ವಿದ್ಯುತ್‌ ಶುಲ್ಕ ಭರಿಸಲಿದ್ದು, ಪರಿಷ್ಕೃತ ದರ ನಿಗದಿ ಮಾಡಲು ಒಪ್ಪಿಗೆ ನೀಡ ಬೇಕು ಎಂದು ಮನವಿ ಮಾಡಿದರು.

ABOUT THE AUTHOR

...view details