ಕರ್ನಾಟಕ

karnataka

ETV Bharat / state

ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ: ಅಧಿಕಾರಿಗಳ ಸಭೆ ಕರೆದ ಸುಮಲತಾ - Mandya

ಮಂಡ್ಯಕ್ಕೆ ಬಾರದಿರುವುದಕ್ಕೆ ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸ್ವಾಭಿಮಾನಿ ಸಂಸದೆ ಕಾಣಿಯಾಗಿದ್ದಾರೆ. 'ಸುಮಕ್ಕಾ ಎಲ್ಲಿದ್ದೀಯಕ್ಕಾ'?ಎಂದು ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಅವರು ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಲಿದ್ದಾರೆ‌.

Mandya MP Sumalatha Ambareesh
ಸಂಸದೆ ಸುಮಲತಾ ಅಂಬರೀಶ್​

By

Published : May 3, 2021, 11:36 AM IST

ಮಂಡ್ಯ:ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶದ ವ್ಯಕ್ತವಾದ ಬಳಿಕ ಸಂಸದೆ ಸುಮಲತಾ ಅಂಬರೀಶ್​ ಎಚ್ಚೆತ್ತುಕೊಂಡು ಕೋವಿಡ್ ಪರಿಸ್ಥಿತಿ ಕುರಿತು ಇಂದು ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಲಿದ್ದಾರೆ‌.

ಸಂಸದೆ ಸುಮಲತಾ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

ದಿನೇ ದಿನೇ ಕೊರೊನಾ ಸೋಂಕು ಉಲ್ಬಣಿಸುತ್ತಿದ್ದರೂ ಕಳೆದ ಮಾರ್ಚ್ 8 ರಿಂದ ಮಂಡ್ಯದಿಂದ ದೂರವಿರುವ ಸಂಸದೆ 54 ದಿನಗಳ ಬಳಿಕ ಕಾಣಿಸಿಕೊಂಡಿದ್ದಾರೆ. ಮಂಡ್ಯಕ್ಕೆ ಬಾರದಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸ್ವಾಭಿಮಾನಿ ಸಂಸದೆ ಕಾಣಿಯಾಗಿದ್ದಾರೆ. 'ಸುಮಕ್ಕಾ ಎಲ್ಲಿದ್ದೀಯಕ್ಕಾ'? ಎಂದು ಆಕ್ರೋಶ ವ್ಯಕ್ತವಾಗಿತ್ತು.

ಆಕ್ರೋಶ ವ್ಯಕ್ತವಾದ ತಕ್ಷಣ ಎಚ್ಚೆತ್ತ ಸುಮಲತಾ ಅಂಬರೀಷ್ ಮಂಡ್ಯಕ್ಕೆ ಬಾರದಿದ್ದರೂ ವಿಡಿಯೋ ಸಂವಾದದ ಮೂಲಕ ಕೋವಿಡ್ ಪರಿಸ್ಥಿತಿ ಅವಲೋಕನ ಮಾಡಲು ಮುಂದಾಗಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಗೆ ಅಧಿಕಾರಿಗಳ ಜತೆ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಅವರು, ಡಿಸಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಮಾಹಿತಿ ಪಡೆಯಲಿದ್ದಾರೆ.

ಇದನ್ನೂ ಓದಿ:'ಸುಮಕ್ಕಾ ಎಲ್ಲಿದ್ದೀಯಕ್ಕಾ...' ಮಂಡ್ಯ ಕಡೆ ಮುಖಮಾಡದ ಸಂಸದೆ ವಿರುದ್ಧ ಆಕ್ರೋಶ

ABOUT THE AUTHOR

...view details