ಕರ್ನಾಟಕ

karnataka

ETV Bharat / state

ಕಚೇರಿಗಾಗಿ ಮಂಡ್ಯ ಸಂಸದೆ ಸುಮಲತಾ ಹುಡುಕಾಟ - ಸರ್ಕಾರಿ ಕಟ್ಟಡಗಳ ತಲಾಷ್

ಮಂಡ್ಯ ಸಂಸದೆ ಸುಮಲತಾ ಅಂಬರೀಶ್​ ಕಚೇರಿಗಾಗಿ ಹುಡುಕಾಟ ಆಂಭಿಸಿದ್ದು, ಇಂದು ಜಿಲ್ಲಾಧಿಕಾರಿ ಕಚೇರಿಯ ಕಟ್ಟಡಕ್ಕೆ ಭೇಟಿ ನೀಡಿ ಹಿಂದಿನ ಸಂಸದರ ಸರ್ಕಾರಿ ಕಚೇರಿ ಪರಿಶೀಲನೆ ನಡೆಸಿದರು.

ಕಚೇರಿಗಾಗಿ ಮಂಡ್ಯ ಸಂಸದೆ ಸುಮಲತಾ ಹುಡುಕಾಟ

By

Published : Jun 11, 2019, 11:41 PM IST

ಮಂಡ್ಯ:ಲೋಕಸಭಾ ಚುನಾವಣೆ ಗೆದ್ದ ಖುಷಿಯಲ್ಲಿರುವ ಸುಮಲತಾ ಅಂಬರೀಶ್ ಕಚೇರಿಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ. ಚಾಮುಂಡೇಶ್ವರಿ ನಗರದಲ್ಲಿ ಮನೆ ಕಮ್ ಆಫೀಸ್ ಮಾಡಿದ್ದರೂ ಸರ್ಕಾರಿ ಕಚೇರಿಗಾಗಿ ಸರ್ಕಾರಿ ಕಟ್ಟಡಗಳ ತಲಾಶ್​ ಆರಂಭ ಮಾಡಿದ್ದಾರೆ.

ಇಂದು ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆಯೂ ಎರಡು ಸರ್ಕಾರಿ ಕಟ್ಟಡಗಳಿಗೆ ತೆರಳಿ ವಾಸ್ತು ಇರುವ ಕಚೇರಿಗಾಗಿ ಹುಡುಕಾಟ ಆರಂಭ ಮಾಡಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಹಳೇಯ ಕಚೇರಿಯ ಜೊತೆಗೆ ಕಾವೇರಿ ನೀರಾವರಿ ನಿಗಮ, ಲೋಕೋಪಯೋಗಿ ಕಟ್ಟಡಗಳಲ್ಲಿನ ಮಾಹಿತಿ ಸಂಗ್ರಹ ಮಾಡಿ, ಸೂಕ್ತ ಜಾಗಕ್ಕೆ ಹುಡುಕಾಟ ಮಾಡಿದರು.

ಕಚೇರಿಗಾಗಿ ಮಂಡ್ಯ ಸಂಸದೆ ಸುಮಲತಾ ಹುಡುಕಾಟ

ತಮ್ಮ ಬೆಂಬಲಿಗರ ಜೊತೆ ಮೊದಲು ಜಿಲ್ಲಾಧಿಕಾರಿ ಕಚೇರಿಯ ಕಟ್ಟಡಕ್ಕೆ ಭೇಟಿ ನೀಡಿ, ಹಿಂದಿನ ಸಂಸದರ ಸರ್ಕಾರಿ ಕಚೇರಿ ಪರಿಶೀಲನೆ ನಡೆಸಿದರು. ನಂತರ ಕಾವೇರಿ ನೀರಾವರಿ ನಿಗಮ ಮತ್ತು ಲೋಕೋಪಯೋಗಿ ಇಲಾಖೆಯ ಕಟ್ಟಡಗಳಿಗೂ ತೆರಳಿ ಪರಿಶೀಲನೆ ನಡೆಸಿದರು. ಸದ್ಯಕ್ಕೆ ಚಾಮುಂಡೇಶ್ವರಿ ನಗರದ ಮನೆಯನ್ನು ಕಚೇರಿ ಮಾಡಿಕೊಂಡು, ವಾರಕ್ಕೆ ಮೂರು ದಿನ ಅಲ್ಲಿ ಸಾರ್ವಜನಿಕರ ಕುಂದು-ಕೊರತೆಗಳನ್ನು ಆಲಿಸಲಿದ್ದಾರೆ. ಮಿಕ್ಕ ದಿನಗಳ ಕೆಲಸಕ್ಕಾಗಿ ಸರ್ಕಾರಿ ಕಟ್ಟಡದ ಹುಡುಕಾಟ ನಡೆಸುತ್ತಿದ್ದಾರೆ.

ABOUT THE AUTHOR

...view details