ಕರ್ನಾಟಕ

karnataka

ETV Bharat / state

'ಗಣಿಗಾರಿಕೆ ನಿಲ್ಲಿಸಿ ಕೆಆರ್​ಎಸ್ ಉಳಿಸಿ' ಪ್ರತಿಭಟನೆಗೆ ನೀರಸ ಪ್ರತಿಕ್ರಿಯೆ - Mandya peasant organization protest

ಕೆಆರ್‌ಎಸ್ ಉಳಿವಿಗಾಗಿ ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಮಂಡ್ಯ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

Mandya: Less response to KRS Save protest
'ಗಣಿಗಾರಿಕೆ ನಿಲ್ಲಿಸಿ ಕೆಆರ್​ಎಸ್ ಉಳಿಸಿ' ಪ್ರತಿಭಟನೆಗೆ ನೀರಸ ಪ್ರತಿಕ್ರಿಯೆ

By

Published : Jul 29, 2020, 2:03 PM IST

ಮಂಡ್ಯ:ಜೀವನಾಡಿ ಕೆಆರ್‌ಎಸ್ ಉಳಿವಿಗಾಗಿ ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಮಂಡ್ಯ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

'ಗಣಿಗಾರಿಕೆ ನಿಲ್ಲಿಸಿ ಕೆಆರ್​ಎಸ್ ಉಳಿಸಿ' ಪ್ರತಿಭಟನೆಗೆ ನೀರಸ ಪ್ರತಿಕ್ರಿಯೆ

ಗಣಿಗಾರಿಕೆ ನಿಲ್ಲಿಸಿ ಕೆಆರ್​ಎಸ್​ ಅನ್ನು ಉಳಿಸಿ ಎಂದು ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಕರೆ ನಿಡಿದ್ದ ಬಂದ್​ಗೆ ಒಂದಿಷ್ಟು ಮಂದಿ ಸಹಕರಿಸಿದರೆ ಇನ್ನೊಂದಿಷ್ಟು ಮಂದಿ ಎಂದಿನಂತೆ ವ್ಯಾಪಾರ ವಹಿವಾಟುಗಳಲ್ಲಿ ತೊಡಗಿದ್ದರು.

ಇನ್ನೂ ಬೆಳಗ್ಗೆಯೇ ರಸ್ತೆಳಿದ ಹೋರಾಟಗಾರರು ಅಂಗಡಿ ಮಾಲೀಕರ ಮನವೊಲಿಕೆ ಮಾಡಿ ಬೀಗ ಹಾಕಿಸುತ್ತಿದ್ದ ದೃಶ್ಯ ಕಂಡು ಬಂತು. ಪೇಟೆ ಬೀದಿ, ಗುತ್ತಲು ರಸ್ತೆ, ಅಂಬೇಡ್ಕರ್ ರಸ್ತೆ, ವಿವಿ ರಸ್ತೆಗಳಲ್ಲಿ ಬೈಕ್​ ಜಾಥಾ ನಡೆಸಿ ಬಂದ್‌ಗೆ ಬೆಂಬಲ ಕೋರಿದರು.

ಪ್ರತಿಭಟನೆ, ಬಂದ್‌ಗೆ ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು, ರಾಜೀವ್ ಗಾಂಧಿ ಆಟೋ ಚಾಲಕರ ಸಂಘ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.

ABOUT THE AUTHOR

...view details