ಮಂಡ್ಯ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ. ಆತಂಕ ಮೂಡಿಸಿದ್ದ ಮುಂಬೈ ಸೋಂಕು ತಹಬದಿಗೆ ಬಂದಿದ್ದು, 200ಕ್ಕೂ ಹೆಚ್ಚು ಮುಂಬೈ ಸೋಂಕಿತರು ಗುಣಮುಖರಾಗಿದ್ದಾರೆ.
'ಮಹಾ' ಸೋಂಕಿತರು ಗುಣಮುಖ: ನಿಟ್ಟುಸಿರು ಬಿಟ್ಟ ಮಂಡ್ಯ ಜನತೆ - ನಿಟ್ಟುಸಿರು ಬಿಟ್ಟ ಮಂಡ್ಯ ಜನತೆ
ಜಿಲ್ಲೆಯಲ್ಲಿ ಒಟ್ಟು 334 ಪ್ರಕರಣಗಳು ದಾಖಲಾಗಿದ್ದವು. ಇದೀಗ ಸಕ್ರಿಯ ಪ್ರಕರಣಗಳ ಸಂಖ್ಯೆ 79ಕ್ಕೆ ಬಂದಿದ್ದು, 255 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಕಂಟಕವಾಗಿದ್ದ ‘ಮಹಾ’ ಸೋಂಕಿತರು ಗುಣಮುಖ, ನಿಟ್ಟುಸಿರು ಬಿಟ್ಟ ಮಂಡ್ಯ ಜನತೆ
ದ್ವಿತೀಯ ಸ್ಥಾನದಲ್ಲಿ ಇದ್ದ ಮಂಡ್ಯ ಜಿಲ್ಲೆ 21ನೇ ಸ್ಥಾನಕ್ಕೆ ಹೋಗಿದ್ದು, ಇದಕ್ಕೆ ಕಾರಣ ಸೋಂಕಿತರು ಶೀಘ್ರವಾಗಿ ಗುಣಮುಖರಾಗುತ್ತಿರುವುದು. ಮಂಡ್ಯ ಮೆಡಿಕಲ್ ಕಾಲೇಜು ಸಂಪೂರ್ಣವಾಗಿ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆ ಸಿಬ್ಬಂದಿಯ ಶ್ರಮದಿಂದ ಸೋಂಕಿತರು ಬೇಗ ಗುಣಮುಖರಾಗುತ್ತಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 334 ಪ್ರಕರಣಗಳು ದಾಖಲಾಗಿದ್ದವು. ಇದೀಗ ಸಕ್ರಿಯ ಪ್ರಕರಣಗಳ ಸಂಖ್ಯೆ 79ಕ್ಕೆ ಬಂದಿದ್ದು, 255 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.