ಮಂಡ್ಯ:ಕೊರೊನಾ ಆತಂಕ ಕಡಿಮೆಯಾಗಿ ಈಗಷ್ಟೇ ಚೇತರಿಸಿಕೊಳ್ತಿದ್ದ ಹೈನುಗಾರಿಕೆ(Dairy farming) ನಂಬಿದ ರೈತರಿಗೆ ಇದೀಗ ಮನ್ಮುಲ್(manmul) ಶಾಕ್ ನೀಡಿದೆ. ನಷ್ಟದ ಕಾರಣ ನೀಡಿ, ರೈತರಿಂದ ಖರೀದಿ ಮಾಡ್ತಿದ್ದ ಹಾಲಿಗೆ ಪ್ರತಿ ಲೀ.ಗೆ 2 ರೂ, ಕಡಿಮೆ ಮಾಡಿರೋದು ಹೈನುಗಾರಿಕೆ ನಂಬಿದವರಿಗೆ ಮತ್ತಷ್ಟು ಸಂಕಷ್ಟಕ್ಕೀಡುಮಾಡಿದೆ.
ರೈತರಿಂದ ಖರೀದಿ ಮಾಡ್ತಿದ್ದ ಹಾಲಿನ ದರ ಇಳಿಕೆ ಜಿಲ್ಲೆಯಲ್ಲಿ ಹೈನುಗಾರಿಕೆ ನಂಬಿ ಹೆಚ್ಚಿನವರು ತಮ್ಮ ಜೀವನ ನಡೆಸುತ್ತಿದ್ದಾರೆ. ಆದರೆ, ಹಾಲನ್ನು ಕೊಂಡುಕೊಳ್ಳುತ್ತಿದ್ದ ಮಂಡ್ಯ ಹಾಲು ಒಕ್ಕೂಟ ರೈತರಿಂದ ಖರೀದಿ ಮಾಡ್ತಿದ್ದ ಪ್ರತಿ ಲೀಟರ್ ಹಾಲಿಗೆ 2 ರೂ. ದರ ಕಡಿತ(milk price) ಮಾಡಿದೆ. ಇದು ಜಿಲ್ಲೆಯಲ್ಲಿ ಹೈನುಗಾರಿಕೆ ನಂಬಿದ ರೈತರ ಬದುಕಿಗೆ ಬರೆ ಎಳೆದಂತಾಗಿದೆ.
ಆದ್ರೆ ಮನ್ಮುಲ್ನ ಆಡಳಿತ ಮಂಡಳಿಯವರು, ಹಾಲು ಮಾರಾಟವಾಗದೇ ನಮಗೆ ನಷ್ಟವಾಗ್ತಿದೆ. ಆ ಕಾರಣಕ್ಕೆ ರೈತರಿಂದ ಕೊಳ್ಳುವ ಹಾಲಿಗೆ 2 ರೂ. ದರ ಕಡಿತ ಮಾಡಿದ್ದೇವೆಂದು ಸಮರ್ಥಿಸಿಕೊಳ್ಳುತ್ತಿದ್ದು, ರೈತರು ಸಹಕರಿಸಿ ಎನ್ನುತ್ತಿದ್ದಾರೆ.
ಇದನ್ನೂ ಓದಿ:ವಿಟ್ಲ ಯುವತಿ ಆತ್ಮಹತ್ಯೆ ಪ್ರಕರಣ: ಡೆತ್ ನೋಟ್ ಆಧರಿಸಿ ನಾಲ್ವರ ವಿರುದ್ಧ ಪ್ರಕರಣ
ಮನ್ಮುಲ್‌ನಲ್ಲಿ ನಡೆದಿರೋ ಕೋಟ್ಯಂತರ ರೂ. ಹಗರಣದ ನಷ್ಟವನ್ನು ತುಂಬಿಕೊಳ್ಳಲು ಈ ರೀತಿ ರೈತರ ಹಾಲಿನ ದರದಲ್ಲಿ ಕಡಿತ ಮಾಡಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಬೆಲೆ ಕಡಿತವನ್ನು ವಾಪಸ್ ಪಡೆಯದಿದ್ರೆ ಮನ್ಮುಲ್ ಮುಂದೆ ಹಾಲು ಉತ್ಪಾದಕ ರೈತರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.