ಮಂಡ್ಯ : ಸಂಸದೆ ಸುಮಲತಾ ಅಂಬರೀಶ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಉದ್ಯಾನವನದಲ್ಲಿ ಗಿಡಗಳನ್ನು ನೆಡುವ ಮೂಲಕ ಆಚರಣೆ ಮಾಡಿದರು.
ಮಂಡ್ಯ: ಗಿಡ ನೆಟ್ಟು ಸುಮಲತಾ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು - Birthday Celebrated by planting Sapling
ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಗಿಡ ನೆಡುವ ಮೂಲಕ ವಿಶಿಷ್ಟವಾಗಿ ಆಚರಿಸಿದ್ದಾರೆ. ಹುಟ್ಟು ಹಬ್ಬ ದಿನದಂದು ಕೇಕ್ ಕಟ್ ಮಾಡುವ ಬದಲು ಗಿಡ ನೆಡುವಂತೆ ಸಂಸದೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು.
![ಮಂಡ್ಯ: ಗಿಡ ನೆಟ್ಟು ಸುಮಲತಾ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು](https://etvbharatimages.akamaized.net/etvbharat/prod-images/768-512-4258630-thumbnail-3x2-hrs.jpg)
ಗಿಡ ನೆಟ್ಟು ಸಂಸದರ ಹುಟ್ಟುಹಬ್ಬ ಆಚರಣೆ ಮಾಡಿದ ಅಭಿಮಾನಿಗಳು
ಕುವೆಂಪು ನಗರದ ಉದ್ಯಾನವನದಲ್ಲಿ ಅಭಿಮಾನಿಗಳು, ಸುಮಲತಾ ಹಿತೈಷಿಗಳು ಗಿಡ ನೆಟ್ಟು ಸಂಸದರಿಗೆ ಶುಭ ಹಾರೈಸಿದರು.
ಗಿಡ ನೆಟ್ಟು ಸಂಸದರ ಹುಟ್ಟುಹಬ್ಬ ಆಚರಣೆ ಮಾಡಿದ ಅಭಿಮಾನಿಗಳು
ಹುಟ್ಟು ಹಬ್ಬದಂದು ಕೇಕ್ ಕಟ್ ಮಾಡುವ ಬದಲು ಗಿಡಗಳು ನೆಡುವಂತೆ ಸಂಸದರು ಮನವಿ ಮಾಡಿದ್ದರು. ಈ ಹಿನ್ನಲೆ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಲ್ಲಿ ಗಿಡ ನೆಟ್ಟು ಅಭಿಮಾನಿಗಳು, ಸುಮಲತಾ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದಾರೆ.