ಕರ್ನಾಟಕ

karnataka

ETV Bharat / state

ಮಂಡ್ಯದಲ್ಲಿ 1,225 ಜನರಿಗೆ ಕೋವಿಡ್ ಪಾಸಿಟಿವ್: 7 ಮಂದಿ ಸೋಂಕಿಗೆ ಬಲಿ - ಮಂಡ್ಯ ಕೋವಿಡ್ ಪ್ರಕರಣ

ಮಂಡ್ಯದಲ್ಲಿ ಶುಕ್ರವಾರ 1,110 ಹೊಸ ಕೋವಿಡ್‌ ಸೋಂಕು ಪ್ರಕರಣಗಳು ದಾಖಲಾಗಿತ್ತು. ಶನಿವಾರ 1,225 ಪ್ರಕರಣಗಳು ವರದಿಯಾಗಿವೆ. ಸಾವಿನ ಸಂಖ್ಯೆ ಕಡಿಮೆಯಾಗಿರುವುದು ಜಿಲ್ಲೆಯ ಜನರಿಗೆ ಶುಭಸುದ್ದಿ.

Mandya District Covid update
ಮಂಡ್ಯ ಕೋವಿಡ್

By

Published : May 9, 2021, 6:37 AM IST

ಮಂಡ್ಯ:ಜಿಲ್ಲೆಯಲ್ಲಿ ಶನಿವಾರ ಹೊಸದಾಗಿ 1,225 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 7 ಮಂದಿ ಅಸುನೀಗಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 40,480 ಆಗಿದೆ. ಶನಿವಾರ 1,327 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೆ 32,190 ಮಂದಿ ಗುಣಮುಖರಾಗಿದ್ದಾರೆ.ಸದ್ಯ 80,32 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೆ ಒಟ್ಟು 265 ಮಂದಿ ಸೋಂಕು ಮುಕ್ತರಾಗಿದ್ದಾರೆ.

ತಾಲೂಕುವಾರು ವಿವರ: ಮಂಡ್ಯ 599, ಮದ್ದೂರು 77, ಮಳವಳ್ಳಿ 214, ಪಾಂಡವಪುರ 77, ಶ್ರೀರಂಗಪಟ್ಟಣ 61, ಕೆ.ಆರ್ ಪೇಟೆ 67, ನಾಗಮಂಗಲ 113, ಹೊರ ಜಿಲ್ಲೆಯಿಂದ ಬಂದ 17 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

115 ಪ್ರಕರಣ ಏರಿಕೆ:

ಶುಕ್ರವಾರ ಜಿಲ್ಲೆಯಲ್ಲಿ 1,110 ಪ್ರಕರಣಗಳು ವರದಿಯಾಗಿತ್ತು. 11 ಮಂದಿ ಸಾವಿಗೀಡಾಗಿದ್ದರು. ಶನಿವಾರ 1,225 ಪ್ರಕರಣಗಳು ವರದಿಯಾಗಿದ್ದು, 7 ಮಂದಿ ಮೃತಪಟ್ಟಿದ್ದಾರೆ. ಶುಕ್ರವಾರಕ್ಕಿಂತ ಶನಿವಾರ 115 ಪ್ರಕರಣಗಳು ಏರಿಕೆಯಾಗಿದೆ. ಆದರೆ, ಸಾವಿಗೀಡಾದವರ ಸಂಖೆಯಲ್ಲಿ ಇಳಿಕೆಯಾಗಿದೆ.

ABOUT THE AUTHOR

...view details