ಮಂಡ್ಯ : ಜಿಲ್ಲೆಯಲ್ಲಿ ಶುಕ್ರವಾರ ಹೊಸದಾಗಿ 1,110 ಜನರಲ್ಲಿ ಕೋವಿಡ್ ಪಾಸಿಟಿವ್ ಕಂಡು ಬಂದಿದ್ದು, 11 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಒಟ್ಟು ಸೋಂಕಿತರ ಸಂಖ್ಯೆ 39,255 ಕ್ಕೆ ಏರಿಕೆ ಆಗಿದ್ದು, ಶುಕ್ರವಾರ 1,384 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದುವರೆಗೆ ಒಟ್ಟು 30,863 ಮಂದಿ ಚೇತರಿಸಿಗೊಂಡಿದ್ದಾರೆ.
ಸದ್ಯ, 8,132 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೆ 258 ಸೋಂಕಿನಿಂದ ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆ ಹೆಚ್ಚಳವಾಗಿರುವುದರಿಂದ ಜಿಲ್ಲಾಡಳಿತಕ್ಕೆ ಆತಂಕ ಶುರುವಾಗಿದೆ.
ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ತಾಲೂಕುವಾರು ದಾಖಲಾದ ಹೊಸ ಪ್ರಕರಣಗಳು :
ಮಂಡ್ಯ 308, ಮದ್ದೂರು 176, ಮಳವಳ್ಳಿ 105, ಪಾಂಡವಪುರ 120, ಶ್ರೀರಂಗಪಟ್ಟಣ 172, ಕೆ.ಆರ್. ಪೇಟೆ 124, ನಾಗಮಂಗಲ 96, ಹೊರ ಜಿಲ್ಲೆಯ 9 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ಕಂಡು ಬಂದಿದೆ.
ಓದಿ : ಒಂದೇ ಗ್ರಾಮದಲ್ಲಿ 62ಕ್ಕೂ ಹೆಚ್ಚು ಜನರಿಗೆ ಕೊರೊನಾ: ಸೋಂಕಿತರೆಲ್ಲರೂ ವಲಸೆ ಕಾರ್ಮಿಕರು