ಕರ್ನಾಟಕ

karnataka

ETV Bharat / state

ಮಂಡ್ಯ CEN ಪೊಲೀಸರ ಭರ್ಜರಿ ಕಾರ್ಯಾಚರಣೆ.. ಕಳ್ಳತನವಾಗಿದ್ದ 130 ಮೊಬೈಲ್ ಫೋನ್ ವಶ - ಮಂಡ್ಯ CEN ಪೊಲೀಸರ ಭರ್ಜರಿ ಕಾರ್ಯಾಚರಣೆ

ಮಂಡ್ಯ ಜಿಲ್ಲಾ ಪೊಲೀಸ್​​ ಇಲಾಖೆ ವತಿಯಿಂದ ಕಳ್ಳತನವಾಗಿದ್ದ ಸುಮಾರು 23 ಲಕ್ಷ ರೂ. ಬೆಲೆಬಾಳುವ ಮೊಬೈಲ್​​ ಫೋನ್​ಗಳನ್ನು ಪತ್ತೆ ಹಚ್ಚಿ ಮೊಬೈಲ್​ ಮಾಲೀಕರಿಗೆ ಹಿಂದಿರುಗಿಸಿದ್ದಾರೆ.

mandya-cen-police-recovered-130-stolen-mobile-phones
ಮಂಡ್ಯ CEN ಪೊಲೀಸರ ಭರ್ಜರಿ ಕಾರ್ಯಾಚರಣೆ, ಕಳವಾಗಿದ್ದ 130 ಮೊಬೈಲ್ ಫೋನ್ ವಶ

By

Published : May 18, 2023, 4:01 PM IST

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದರು

ಮಂಡ್ಯ: ಮಂಡ್ಯ ಸಿ.ಇ. ಎನ್​​ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಕಳ್ಳತನವಾಗಿದ್ದ ವಿವಿಧ ಮಾದರಿಯ ಸುಮಾರು 130 ಮೊಬೈಲ್ ಫೋನ್​​ಗಳನ್ನು ವಶಪಡಿಸಿಕೊಂಡು ದೂರುದಾರರಿಗೆ ಹಿಂದಿರುಗಿಸಿದ್ದಾರೆ. ಮಂಡ್ಯ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಸೆಂಟ್ರಲ್ ಎಕ್ಯುಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ ತಂತ್ರಾಂಶದ ಸಹಾಯದಿಂದ ಕಳೆದ ಒಂದು ತಿಂಗಳ ಅವಧಿಯಲ್ಲಿ ಕಳ್ಳತನ/ಕಾಣೆಯಾಗಿದ್ದ ಸುಮಾರು 23 ಲಕ್ಷ ಬೆಲೆಬಾಳುವ ವಿವಿಧ ಮಾದರಿಯ 130 ಮೊಬೈಲ್ ಫೋನ್​​ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್ ತಿಳಿಸಿದ್ದಾರೆ.

ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾರ್ವಜನಿಕರು ಕಳೆದುಕೊಂಡಿದ್ದ ವಿವಿಧ ಮಾದರಿಯ ಮೊಬೈಲ್ ಫೋನ್ ಗಳನ್ನು ದೂರುದಾರರಿಗೆ ಹಿಂದಿರುಗಿಸಲಾಗಿದೆ. ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ ಕಳೆದುಹೋದಲ್ಲಿ ಸಿ.ಇ. ಎನ್ ಪೋರ್ಟಲ್​​ನ್ನು ಬಳಸಿಕೊಂಡು, ನಿಮ್ಮ ಮೊಬೈಲ್​​ನ ಐ.ಎಂ.ಇ.ಐ (IMEI) ನಂಬರ್ ತೆಗೆದುಕೊಂಡು ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಿ, ದೂರಿನ ಪ್ರತಿಯನ್ನು ಪಡೆದು www.ceir.gov.in ನಲ್ಲಿ ಲಾಗಿನ್ ಆಗಿ ದೂರನ್ನು ದಾಖಲಿಸಿ ಎಂದು ಮಾಹಿತಿ ನೀಡಿದರು.

ಮಂಡ್ಯ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಅಥವಾ ಕಾಣೆಯಾಗಿದ್ದ ಮೊಬೈಲ್ ಫೋನ್‌ಗಳನ್ನು ಪತ್ತೆ ಮಾಡುವ ಸಂಬಂಧವಾಗಿ ಮಂಡ್ಯ ಜಿಲ್ಲಾ ಅಪರ ಪೊಲೀಸ್ ಅಧೀಕ್ಷಕರಾದ ಸಿ.ಇ ತಿಮ್ಮಯ್ಯ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಸಿ.ಇ. ಎನ್ ಅಪರಾಧ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಎನ್. ಜಯಕುಮಾರ್ ನೇತೃತ್ವದಲ್ಲಿ ಪಿ.ಎಸ್.ಐ ರಾಘವೇಂದ್ರ ಎಂ ಕಠಾರಿ, ರಸೂಲಸಾಬ ಎಂ ಗೌಂಡಿ ಹಾಗೂ ಸಿಬ್ಬಂದಿಗಳಾದ ಎ.ಎಂ ರಾಜೇಅರಸ್, ಎಸ್. ಗಿರೀಶ್, ಹೆಚ್.ಆರ್ ಸುಮನ್ ಅವರು ಒಳಗೊಂಡಂತೆ ಅಧಿಕಾರಿಯವರ ತಂಡ ರಚನೆ ಮಾಡಲಾಗಿತ್ತು. ಮಂಡ್ಯ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣಾ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಕಾರ್ಯವನ್ನು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿ ಪ್ರಶಂಸಿದ್ದಾರೆ.

ಸರ್ಕಾರಿ ಪೋರ್ಟಲ್ ನ್ಯೂನತೆ ದುರ್ಬಳಕೆ- 3.6 ಕೋಟಿ ರೂ. ವಂಚಿಸಿದ್ದ ಆರೋಪಿ ಬಂಧನ:ಆದಾಯ ತೆರಿಗೆ ಮರುಪಾವತಿ ವಂಚನೆಯಲ್ಲಿ ತೊಡಗಿದ್ದ ವ್ಯಕ್ತಿಯನ್ನು ಸಿಐಡಿ ಸೈಬರ್ ಅಪರಾಧ ವಿಭಾಗದ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬಂಧಿತ ಆರೋಪಿ ಆರು ವಿವಿಧ ಪ್ರಕರಣಗಳಿಂದ ಒಟ್ಟಾರೆಯಾಗಿ 3.6 ಕೋಟಿ ರೂ.ಗಳ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಸರ್ಕಾರಿ ಸೇವಾ ಪೋರ್ಟಲ್ ವ್ಯವಸ್ಥೆಗಳಲ್ಲಿನ ದೌರ್ಬಲ್ಯಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದ ಆರೋಪಿ, ಆದಾಯ ತೆರಿಗೆ ಇಲಾಖೆಯಿಂದ ತೆರಿಗೆದಾರರಿಗೆ ಸೇರಬೇಕಾದ ದೊಡ್ಡ ಮೊತ್ತದ ಹಣವನ್ನು ಅಕ್ರಮವಾಗಿ ನಕಲಿ ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ವಂಚಿಸುತ್ತಿದ್ದನು.

ತೆರಿಗೆ ಮೊತ್ತದ ಮರುಪಾವತಿಗಾಗಿ ಅಸಲು ತೆರಿಗೆದಾರರ ಬ್ಯಾಂಕ್ ಖಾತೆಯ ವಿವರಗಳನ್ನು ಮಾರ್ಪಡಿಸಿ, ನಂತರ ನಕಲಿ ಕೆವೈಸಿ ದಾಖಲಾತಿಗಳ ಮುಖಾಂತರ ಅಸಲು ತೆರಿಗೆದಾರರ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ಆದಾಯ ತೆರಿಗೆ ಮರುಪಾವತಿ ವಿವರಗಳನ್ನು ಬದಲಾಯಿಸಿ ಒಟ್ಟು 1.42 ಕೋಟಿ ರೂ.ಗಳಷ್ಟು ಹಣವನ್ನು ನಕಲಿ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿದ್ದ.

ಇದನ್ನೂ ಓದಿ:ಕಂಬಳ, ಜಲ್ಲಿಕಟ್ಟು, ಎತ್ತಿನ ಬಂಡಿ ಓಟಕ್ಕೆ ಸುಪ್ರಿಂ ಕೋರ್ಟ್‌ ಸಾಂವಿಧಾನಿಕ ರಕ್ಷಣೆ

ABOUT THE AUTHOR

...view details