ಮಂಡ್ಯ:ಕಾರಿನ ಎರಡು ಚಕ್ರ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗಿದ್ದ ಮಾಲೀಕ, ಇದೀಗ ಮತ್ತೆರಡು ಚಕ್ರ ಕಳೆದುಕೊಂಡ ಘಟನೆ ನಗರದ ಹಾಲಹಳ್ಳಿ ಬಡಾವಣೆಯಲ್ಲಿ ನಡೆದಿದೆ.
ಕಾರಿನ ಚಕ್ರ ಕಳವಾವಾಯ್ತು ಅಂತ ದೂರು ಕೊಟ್ಟಮೇಲೂ ಮತ್ತೆರಡು ವ್ಹೀಲ್ ಕಳವು... ಮಾಲೀಕನ ಕಷ್ಟ ಯಾರ್ಗೂ ಬೇಡ - ಮಂಡ್ಯ ಟೈರ್ ಕಳವು ಸುದ್ದಿ
ಮಂಡ್ಯದ ಹಾಲಹಳ್ಳಿ ಬಡಾವಣೆಯಲ್ಲಿ ಮೊದಲು ಇನೋವಾ ಕಾರಿನ ಎರಡು ಚಕ್ರ ಕಳವು ಮಾಡಿದ್ದಾಗ ಪೊಲೀಸರಿಗೆ ದೂರು ನೀಡಲಾಗಿತ್ತು. ದೂರು ನೀಡಿದ ನಂತರ ಮತ್ತೆರಡು ಚಕ್ರವನ್ನು ಕಳವು ಮಾಡಿದ್ದಾರೆ.
ಟೈರ್
ಹಾಲಹಳ್ಳಿ ಬಡಾವಣೆ ನಿವಾಸಿ ರಾಜು ಎಂಬವರ ಕಾರಿನ ನಾಲ್ಕೂ ಚಕ್ರಗಳನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ. ಎರಡು ದಿನಗಳಲ್ಲಿ ನಾಲ್ಕು ಚಕ್ರಗಳನ್ನು ಕಳವು ಮಾಡಲಾಗಿದೆ.
ಮೊದಲು ಇನೋವಾ ಕಾರಿನ ಎರಡು ಚಕ್ರ ಕಳವು ಮಾಡಿದ್ದಾಗ ಪೊಲೀಸರಿಗೆ ದೂರು ನೀಡಲಾಗಿತ್ತು. ದೂರು ನೀಡಿದ ನಂತರ ಮತ್ತೆರಡು ಚಕ್ರವನ್ನು ಕಳವು ಮಾಡಿರೋದು ಆತಂಕಕ್ಕೆ ಕಾರಣವಾಗಿದೆ.