ಕರ್ನಾಟಕ

karnataka

ETV Bharat / state

ಬ್ರಿಟನ್​ನಿಂದ ಬಂದ ವ್ಯಕ್ತಿಯಲ್ಲಿ ರೂಪಾಂತರ ಕೊರೊನಾ ಇಲ್ಲ: ಮಂಡ್ಯ ಡಿಎಚ್​ಒ ಮಾಹಿತಿ

ಬ್ರಿಟನ್​ನಿಂದ ಬಂದ ವ್ಯಕ್ತಿಯನ್ನು ಹುಡುಕಿದ ಆರೋಗ್ಯ ಇಲಾಖೆ ಕೋವಿಡ್​ ಪರೀಕ್ಷೆಗೆ ಒಳಪಡಿಸಿತ್ತು. ಸದ್ಯ ವ್ಯಕ್ತಿಯ ವರದಿ ನೆಗೆಟಿವ್ ಬಂದಿದೆ. ಹೀಗಾಗಿ ಸಕ್ಕರೆ ನಾಡಿನಲ್ಲಿ ರೂಪಾಂತರ ಕೊರೊನಾ ಭಯವಿಲ್ಲ, ಯಾವುದೇ ಊಹಾಪೋಹಗಳಿಗೆ ಕಿಡಿಗೊಡಬೇಡಿ ಎಂದು ಡಿಎಚ್​​ಒ ಹೇಳಿದ್ದಾರೆ.

mandya-britain-traveler-tested-corona-negative
ಮಂಡ್ಯ ಡಿಎಚ್​ಓ

By

Published : Jan 5, 2021, 9:05 PM IST

ಮಂಡ್ಯ: ವಾರದ ಹಿಂದೆ ಬ್ರಿಟನ್‌ನಿಂದ ಜಿಲ್ಲೆಗೆ ಬಂದು ನಾಪತ್ತೆಯಾಗಿದ್ದ ವ್ಯಕ್ತಿ ಆರೋಗ್ಯ ಇಲಾಖೆ ಕೈಗೆ ಸಿಕ್ಕಿದ್ದು, ವ್ಯಕ್ತಿಯಲ್ಲಿ ರೂಪಾಂತರ ಕೋವಿಡ್​​ ಸೋಂಕು ಪತ್ತೆಯಾಗಿಲ್ಲ ಎಂದು ಡಿಎಚ್​​ಒ ಮಂಚೇಗೌಡ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಕೆಯಿಂದ ಬಂದಿದ್ದ 20 ಜನರ ಪೈಕಿ 18 ಜನರ ರಿಪೋರ್ಟ್ ನೆಗೆಟಿವ್ ಬಂದಿತ್ತು. ಓರ್ವ ಐರ್ಲೆಂಡ್‌ಗೆ ವಾಪಸಾಗಿದ್ದರು. ಮತ್ತೊಬ್ಬ ವ್ಯಕ್ತಿಯ ವಿಳಾಸ ಸಿಕ್ಕಿರಲಿಲ್ಲ. ವಿಳಾಸ ಪತ್ತೆ ಹಚ್ಚಲು ಜಿಲ್ಲಾಡಳಿತ ರಾಜ್ಯ ಸರ್ಕಾರದ ಮೊರೆ ಹೋಗಿತ್ತು.

ಓದಿ-ಹೆಚ್ಚು ಬಡ್ಡಿ ಕೊಡಿಸುವುದಾಗಿ ಹೇಳಿ ವಂಚನೆ: ಮಂಡ್ಯ ಜಿಲ್ಲಾ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಆರೋಪ

ಕೊನೆಗೂ ಆತನನ್ನು ಹುಡುಕಿದ ಆರೋಗ್ಯ ಇಲಾಖೆ ಕೋವಿಡ್​ ಪರೀಕ್ಷೆಗೆ ಒಳಪಡಿಸಿತ್ತು. ಸದ್ಯ ವ್ಯಕ್ತಿಯ ವರದಿ ನೆಗೆಟಿವ್ ಬಂದಿದೆ. ಹೀಗಾಗಿ ಸಕ್ಕರೆ ನಾಡಿನಲ್ಲಿ ರೂಪಾಂತರ ಕೊರೊನಾ ಭಯವಿಲ್ಲ. ಯಾವುದೇ ಊಹಾಪೋಹಗಳಿಗೆ ಕಿಡಿಗೊಡಬೇಡಿ ಎಂದು ಡಿಎಚ್​​ಒ ಹೇಳಿದ್ದಾರೆ.

ABOUT THE AUTHOR

...view details